ಹಾವೇರಿ

ಆರೋಗ್ಯ ಕಾರ್ಡ್‌ಸದ್ಬಳಕೆ ಮಾಡಿಕೊಳ್ಳಿ

Published On :

ಹಿರೇಕೆರೂರು: ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನೆ ಜಾರಿಗೆ ಬಂದಿದ್ದು, ಸಾರ್ವಜನಿಕರು ಈ ಕಾರ್ಡಿನ ಸದುಪಯೋಗ ಪಡಿಸಕೊಳ್ಳಬೇಕು ಎಂದು ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆ ಜನರಲ್ ಮ್ಯಾನೇಜರ್ ಅನಿಲ್ ಪೌಲ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಮಣಿಪಾಲ ಆರೋಗ್ಯ ಕಾರ್ಡ್ ಕಳೆದ 13 ವರ್ಷಗಳಿಂದ ಜಾರಿಗೆ ಬಂದಿದ್ದು, ಈ ವರ್ಷವು ಕಾರ್ಡ್ ನೋಂದಣಿ ಕಾರ್ಯ ಜಾರಿಯಲ್ಲಿದೆ. ಈ ಸದಸ್ಯತ್ವ ಅಭಿಯಾನ ಪ್ರಸಕ್ತ ವರ್ಷದ ಜೂನ್ 30ಕ್ಕೆ ಕೊನೆಗೊಳ್ಳುತ್ತದೆ ಎಂದರು.
ತಜ್ಞರಿಂದ ತಪಾಸಣೆ: ಮಣಿಪಾಲ ವಿಶ್ವವಿದ್ಯಾಲಯವು ಸಾಮಾಜಿಕ ಕಳಕಳಿ ಪ್ರತೀಕವಾಗಿ ಆರೋಗ್ಯ ಕಾರ್ಡ್ ನೀಡುತ್ತದೆ. ಇದು ಭಾರತ ದೇಶದಲ್ಲಿ ವಿಮೆ ರಹಿತ ಹಾಗೂ ಸರ್ಕಾರೇತರ ಸಂಸ್ಥೆಯಿಂದ ಕೊಡುತ್ತಿರುವ ಆರೋಗ್ಯ ಭಾಗ್ಯ ಯೋಜನೆಯಾಗಿದೆ. ಕಾರ್ಡ್ ಹೊಂದಿರುವ ರೋಗಿಗಳು ಯಾವುದೇ ನುರಿತ ತಜ್ಞರ ತಪಾಸಣೆಯಲ್ಲಿ ಪ್ರತಿಶತ 50 ರಿಯಾಯತಿ ಪಡೆಯಬಹುದಾಗಿದೆ.
1.35 ಲಕ್ಷ ರೋಗಿಗಳು: ಎಲ್ಲ ತರಹದ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ. 20 ಹಾಗೂ ಔಷಧಿ ಖರೀದಿಯಲ್ಲಿ ಶೇ. 10ರವರೆಗಿನ ರಿಯಾಯತಿ ಪಡೆಯಬಹುದಾಗಿದೆ. ಎಲ್ಲಾ ಒಳ ರೋಗಿಗಳು ಒಟ್ಟು ಶುಲ್ಕಗಳಲ್ಲಿ ಕನ್ಸ್ಯೂಮೆಬಲ್ ಹೊರತುಪಡಿಸಿ ಶೇ. 25 ರಿಯಾಯತಿ ಪಡೆಯಬಹುದು. ಇದರಡಿ ರು. 3 ಕೋಟಿ ವೆಚ್ಚದಲ್ಲಿ 1.35 ಲಕ್ಷ ರೋಗಿಗಳು ಸೌಲಭ್ಯ ಪಡೆದಿದ್ದಾರೆ.
5 ಆಸ್ಪತ್ರೆಗಳಲ್ಲಿ ಸೇವೆ: ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆ, ಮಣಿಪಾಲ ದಂತ ವೈದಕೀಯ ಆಸ್ಪತ್ರೆ, ಕೆಎಂಸಿ ಆಸ್ಪತ್ರೆ ಆತ್ರಾವರ ಹಾಗೂ ಮಂಗಳೂರು ಡಾ೤ ಟಿಎಂಎ ಪೈ ಆಸ್ಪತ್ರೆ ಹಾಗೂ ಕಾರ್ಕಳದ ಟಿಎಂಎಪೈ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಪಡೆಯಬಹುದಾಗಿದೆ. ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ವಿಶಿಷ್ಠವಾಗಿದ್ದು, ಈ ಕಾರ್ಡ್‌ನ ಸದಸ್ಯರು ಎಲ್ಲ ಚಿಕಿತ್ಸಾ ವೆಚ್ಚಗಳಲ್ಲಿ ರಿಯಾಯಿತಿ ಪಡೆಯಬಹುದಾಗಿದೆ. ಕಾರ್ಡ್ ಆಗಸ್ಟ್ 1ರಿಂದ ಸೇವೆ ನೀಡಲಿದ್ದು, ಮುಂದಿನ ವರ್ಷದ ಜುಲೈ 30ಕ್ಕೆ ಕೊನೆಗೊಳ್ಳಲಿದೆ. ಆರೋಗ್ಯ ಕಾರ್ಡ್‌ನ್ನು ವೈಯಕ್ತಿಕವಾಗಿ 250 ಕುಟುಂಬದ ಸದಸ್ಯರಿಗೆ ರು. 500 ದರದಲ್ಲಿ ನೀಡಲಾಗುತ್ತದೆ. ಕೌಟುಂಬಿಕ ಕಾರ್ಡ್‌ನ ಪ್ರಾಥಮಿಕ ಸದಸ್ಯತ್ವ ಪತಿ-ಪತ್ನಿ ಸೇರಿದಂತೆ 21 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಅನ್ವಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರತಿನಿಧಿ ಹಾವೇರಿ ಜಿಲ್ಲೆಯಲ್ಲಿ ಹಿರೇಕೆರೂರಿನ ಮೇಘರಾಜ ಹಳಕಟ್ಟಿ ಮೊಬೈಲ್ ನಂಬರ್ 9945790866 ಸಂಪರ್ಕಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಸ್ತೂರಿ ಬಾ ಆಸ್ಪತ್ರೆಯ ಮುಖ್ಯ ಪ್ರತಿನಿಧಿ ಅ.ನಾ. ವಿಜಯೇಂದ್ರ ರಾವ್, ಜಿಲ್ಲಾ ಪ್ರತಿನಿಧಿ ಮೇಘರಾಜ ಹಳಕಟ್ಟಿ, ರಾಜಶೇಖರ ದೂದಿಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.