ಹಾವೇರಿ

75ರಷ್ಟು ಸಬ್ಸಿಡಿಯಲ್ಲಿ ಬೀಜ, ಗೊಬ್ಬರ ನೀಡಿ

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಮೇ 15
ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಮಳೆಯಿಲ್ಲದೆ ಬರಗಾಲ ಎದುರಿಸಿ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿತ್ತು. ಆದರೆ, ಇದುವರೆಗೆ ರೈತರಿಗೆ ಅನುಕೂಲವಾಗುವ ಸೂಕ್ತ ಕಾರ್ಯಕ್ರಮ ರೂಪಿಸಲಿಲ್ಲ. ರೈತರಿಗೆ ಉತ್ತಮ ಕಂಪನಿಗಳಿಗೆ ಗುಣಮಟ್ಟದ ಗೊಬ್ಬರ- ಬೀಜಗಳನ್ನು ಶೇ. 75ರಷ್ಟು ಸಬ್ಸಿಡಿ ದರದಲ್ಲಿ ಎಲ್ಲ ರೈತರಿಗೆ ದೊರಕುವಂತೆ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕೃಷಿಕರಿಗೆ ಹಾನಿ: ಪ್ರಸಕ್ತ ವರ್ಷದ ಮುಂಗಾರು ಬಿತ್ತನೆ ಹಂಗಾಮು ಬರುತ್ತಿದ್ದರೂ ಬರಗಾಲ ಎದುರಿಸಿದ ರೈತರಲ್ಲಿ ಸ್ವಂತ ಬೀಜಗಳಿಲ್ಲದೆ ಕಳಪೆ ಗುಣಮಟ್ಟದ ಬೀಜ ಪೂರೈಸಲಾಗುತ್ತಿದೆ. ಇದರಿಂದಾಗಿ ಕಳೆದ ವರ್ಷ ಕೃಷಿಕರು ಹಾನಿ ಅನುಭವಿಸುತ್ತಿದ್ದಾರೆ.
ಗೊಂದಲವಿಲ್ಲದೆ ಪೂರೈಸಿ: ವೇಳೆಗೆ ಸರಿಯಾಗಿ ಯಾವುದೇ ಗೊಂದಲವಿಲ್ಲದಂತೆ ಬೀಜ, ಗೊಬ್ಬರವನ್ನು ರೈತರಿಗೆ ಕಲ್ಪಿಸಬೇಕು. ಈ ದಿಸೆಯಲ್ಲಿ ವ್ಯವಸ್ಥೆಯನ್ನು ಆಶಾದಾಯಕ ರೀತಿಯಲ್ಲಿ ನೂತನ ಸರ್ಕಾರ ನೆರವೇರಿಸಬೇಕೆಂದು ಭಾರತೀಯ ಕೃಷಿಕ ಸಮಾಜದ ತಾಲೂಕಿನ ರೈತರು ಮತ್ತು ಮುಖಂಡರು ಆಗ್ರಹಿಸಿದ್ದಾರೆ.
ಆತ್ಮಹತ್ಯೆಯತ್ತ ರೈತನ ಮುಖ: ರೈತನೇ ದೇಶದ ಬೆನ್ನೆಲುಬು, ಅನ್ನದಾತ ಎಂದೆಲ್ಲಾ ಹೋಗಳುವ ಆಡಳಿತ ವ್ಯವಸ್ಥೆಗಳು, ಪೂರ್ವ ಕಾಲದಿಂದಲೂ ರೈತರನ್ನು ನಿರ್ಲಕ್ಷಿಸುತ್ತಲೇ ಬಂದಿರುತ್ತವೆ. ಹೀಗಾಗಿ ರೈತರ ಬಾಳು ತೀರಾ ಗೋಳು. ಇಂತಹ ಆಧುನಿಕ ಸಮಾಜಿಕ ಕನಿಷ್ಠ ಜೀವನದ ಅಶ್ಯಕತೆಗಳನ್ನು ಪೂರೈಸಿಕೊಳ್ಳಲಾರದೆ ರೈತ ಇಂದು ಆತ್ಮಹತ್ಯೆಗಿಡಾಗುತ್ತಿದ್ದಾನೆ.
ಪ್ರಕೃತಿ ಮುನಿಸು: ರೈತನೊಂದಿಗೆ ಪ್ರಕೃತಿಯೂ ಚಲ್ಲಾಟವಾಡುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಆಡಳಿತ ವ್ಯವಸ್ಥೆ, ರೈತರ ಸಹಾಯಕ್ಕೆ ಬಾರದಿದ್ದರೆ ಇನ್ನಾರು ಸಹಾಯಕ್ಕೆ ಬರಲು ಸಾಧ್ಯ ಎಂದು ಅಳಲು ತೋಡಿಕೊಂಡರು.
ಶೇ. 75 ಸಬ್ಸಿಡಿ: ಸರ್ಕಾರ ರಾಜ್ಯದ ರೈತರಿಗೆ ಶೀಘ್ರ ಶೇ. 75ರಷ್ಟು ಸಬ್ಸಿಡಿ ದರದಲ್ಲಿ ಎಲ್ಲ ತರಹದ ಗೊಬ್ಬರ ಮತ್ತು ಬೀಜಗಳನ್ನು ಆಯಾ ಕ್ಷೇತ್ರಗಳ ಅವಶ್ಯಕತೆಗೆ ತಕ್ಕಂತೆ ಪೂರೈಸಬೇಕು. ಯಾವುದೇ ಗೊಂದಲಕ್ಕೆ ಎಡೆಮಾಡಿ ಕೊಡದೇ ವಿತರಣೆ ಮಾಡಬೇಕೆಂದು ಭಾರತೀಯ ಕೃಷಿಕ ಸಮಾಜ ಮನವಿ ಮೂಲಕ ಆಗ್ರಹಿಸಿದೆ.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಮಹಾರುದ್ರಪ್ಪ ವಡವಟ್ಟಿ ಮನವಿ ಸಲ್ಲಿಸಿ ಮಾತನಾಡಿ, ಬರಗಾಲ ಎದುರಿಸುತ್ತಿರುವ ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ-ಗೊಬ್ಬರಗಳನ್ನು ಪೂರೈಸಬೇಕು ಎಂದರು.
ಇದಕ್ಕೂ ಮುನ್ನ ಭಾರತಿಯ ಕೃಷಿಕ ಸಮಾಜದಿಂದ ಪಟ್ಟಣದ ಹುಲಗೂರ ರಸ್ತೆಯಲ್ಲಿರುವ ಗ್ರಾಮದೇವಿಯ ಪಾದಗಟ್ಟೆಯಿಂದ ಮೆರವಣಿಗೆ ಮೂಲಕ ಹಳಪೇಟೆ ಹೊಸಪೇಟೆ ಹಳೆ, ಹೊಸ್ ಬಸ್ ನಿಲ್ದಾಣ ಮುಖಾಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕೃಷಿಕ ಸಮಾಜದ ಧುರೀಣರಾದ ಪ್ರೊ೤ ಸುರೇಶ ಕುನ್ನೂರ, ಕಾಶಿನಾಥ ರಾಯ್ಕರ್, ಸಿ.ಡಿ. ಸಂಪಗಾಂವ, ಜಿನ್ನಪ್ಪ ಧಾರವಾಡ, ಕರೇಪ್ಪ ಕಟ್ಟಿಮನಿ, ಸಂತೋಷ ಕಾಟಿಗಾರ, ಗೀತಾ ಅಂಬಿಗಾರ, ಯಲ್ಲಮ್ಮ ಬಾರ್ಕೆರ, ಸುನೀತಾ ಮಸರಕಲ್, ಯಶೋಧಾ ದಾಮೋದರ, ನೂರಹ್ಮದ ಲಕ್ಷ್ಮೇಶ್ವರ, ನೂರಾರು ರೈತರು  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.