ರಂಗ ಶಿಕ್ಷಣ ಡಿಪ್ಲೋಮಾ ಕೋರ್ಸ್ಗೆ ಅರ್ಜಿ ಆಹ್ವಾನ
ಹಾವೇರಿ: ಕರ್ನಾಟಕ ಸರ್ಕಾರ 3 ವರ್ಷಗಳಿಂದ ನಡೆಸಿಕೊಂಡು ಬಂದಿರುವ ರಂಗಾಯಣ ಸಂಸ್ಥೆ ರಂಗಶಾಲೆಯಲ್ಲಿ ಒಂದು ವರ್ಷದ ರಂಗಶಿಕ್ಷಣದಲ್ಲಿ ಡಿಪ್ಲೋಮಾ ಕೋರ್ಸ್ನ್ನು ಜುಲೈ 7ರಿಂದ ಆರಂಭಿಸಲಿದೆ. ಈ ಕೋರ್ಸಿಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮಾನ್ಯತೆ ನೀಡಿದೆ. 2013-14ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪಿಯುಸಿ ದ್ವಿತೀಯ ವರ್ಷ ಪಾಸಾದ 18ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ ರು. 2000 ವಿದ್ಯಾರ್ಥಿ ವೇತನ, ಉಚಿತ ವಸತಿ ನೀಡಲಾಗುವುದು. ರಂಗ ಶಿಕ್ಷಣ ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಯು ಮುಂದಿನ ಎರಡು ವರ್ಷಗಳು ಹೆಚ್ಚಿನ ವೃತ್ತಿಪರ ಪರಿಣಿತಿ ತರಬೇತಿಗಾಗಿ ರಂಗಾಯಣ ರೆಪರ್ಟಿಯಲ್ಲಿ ಕಿರಿಯ ಕಲಾವಿದನಾಗಿ ಒಪ್ಪಂದದ ಮೇಲೆ ಸೇವೆ ಸಲ್ಲಿಸಬೇಕು. ಈ ಅವಧಿಯಲ್ಲಿ ನಿಗದಿತ ಸಂಭಾವನೆ ನೀಡಲಾಗುವುದು. ಸೇವಾವಧಿ ಮುಗಿಸಿದ ವಿದ್ಯಾರ್ಥಿಗೆ ವೃತ್ತಿಪರ ಪರಿಣಿತಿ ಪ್ರಮಾಣಪತ್ರ ನೀಡಲಾಗುವುದು. ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿ ರು. 50 ಡಿಡಿ ಅಥವಾ ಮನಿಯಾರ್ಡರ್ನ್ನು ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು- 570005 ಇವರ ಹೆಸರಿನಲ್ಲಿ ಮೇ 30, 2013ರೊಳಗೆ ಕಳಿಸಿ, ಪರಿಚಯ ಪತ್ರಿಕೆ ಹಾಗೂ ಅರ್ಜಿ ಪಡೆಯಬಹುದು. ಇಲ್ಲವೇ ರಂಗಾಯಣ ಕಚೇರಿ ಸಮಯದಲ್ಲಿ ಖುದ್ದಾಗಿ ಭೇಟಿ ನೀಡಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 15, 2013ರೊಳಗೆ ತಲುಪುವಂತೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದು. ಸಂದರ್ಶನ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಯ ಪ್ರತಿಭೆ ಮತ್ತು ರಂಗಾಸಕ್ತಿಯನ್ನು ಪ್ರಧಾನವಾಗಿ ಪರಿಗಣಿಗಣಿಸಲಾಗುವುದು. ಸರ್ಕಾರದ ನಿಯಮಾನುಸಾರ ಮೀಸಲಾತಿ ಕ್ರಮ ಅನುಸರಿಸಲಾಗುವುದು. ಅಭ್ಯರ್ಥಿ ತನ್ನ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನವನ್ನು ಜೂನ್ 20, 21ರಂದು ರಂಗಾಯಣದ ಆವರಣದಲ್ಲಿ ನಡೆಸಲಾಗುವುದು. ಶಾಲೆ ಜುಲೈ 1, 2013ರಂದು ಆರಂಭವಾಗಲಿದೆ. ಆಯ್ಕೆಯಾದ ವಿದ್ಯಾರ್ಥಿ 30 ಜೂನ್, 2013ರೊಳಗೆ ಶಾಲೆಗೆ ಪ್ರವೇಶ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ರಂಗಾಯಣ ಕಚೇರಿ ಸಂಪರ್ಕಿಸಿ( ದೂ. 0821-2512639, ಮೊ. 9448322815) ಎಂದು ರಂಗಾಯಣ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

