ಕಠಿಣ ಪರಿಶ್ರಮದ ಫಲ ಐಎಎಸ್: ಡಾ. ರಾಜೇಂದ್ರ
ರಾಣಿಬೆನ್ನೂರು: ಕಠಿಣ ಪರಿಶ್ರಮದ ಫಲವಾಗಿ ಕನ್ನಡ ಮಾಧ್ಯಮದಲ್ಲಿ ಓದಿದವನಾದ ನಾನು ಐಎಎಸ್ ಪರಿಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 32ನೇ ಹಾಗೂ ರಾಜ್ಯಕ್ಕೆ ಪ್ರಥಮ ಸ್ದಾನದಲ್ಲಿ ಪಾಸಾಗಲು ಸಾಧ್ಯವಾಯಿತು ಎಂದು ಐಎಎಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ತಾಲೂಕಿನ ಕರೂರು ಗ್ರಾಮದ ಡಾ ಕೆ.ವಿ. ರಾಜೇಂದ್ರ ಹೇಳಿದರು.
ಐಎಎಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ಡಾ ಕೆ.ವಿ. ರಾಜೇಂದ್ರ ಅವರ ಊರಾದ ಕರೂರು ಗ್ರಾಮ ಸಮೀಪದ ಎಣ್ಣಿಹೊಸಳ್ಳಿ ಗ್ರಾಮದಲ್ಲಿ ಶಿಕ್ಷಕರಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಣ್ಣಿಹೊಸಳ್ಳಿ ಗ್ರಾಮದ ಮಿತ್ರರು ಗ್ರಾಮದೇವತೆ ದ್ಯಾಮವ್ವ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಡಾ ರಾಜೇಂದ್ರ ಮಾತನಾಡಿ, ರಾಮ್ ಕೋ ಸಿಮೆಂಟ್ ಕಂಪನಿಯ ಸಾಮಾನ್ಯ ಕಾರ್ಮಿಕನ ಮಗನಾಗಿ ಹಾಗೂ ಕನ್ನಡ ಮಾಧ್ಯಮದಲ್ಲಿ ಓದಿಯೂ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಐಎಎಸ್ ಪರೀಕ್ಷೆಯಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಉತ್ತಮ ಸ್ಥಾನ ಪಡೆದಿದ್ದು ಹೆಮ್ಮೆ ತಂದಿದೆ. ಪಾಸಾಗಲು ಮನೆಯಲ್ಲಿ ತಂದೆ-ತಾಯಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರು ನೀಡಿದ ಉತ್ತಮ ಬೋಧನೆಯ ಫಲದಿಂದ ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.
ದೇಶದ ಗ್ರಾಮೀಣ ಪ್ರದೇಶದಲ್ಲಿರುವ ಜನರ ಎಳ್ಗೆಗಾಗಿ ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ಆಡಳಿತ ನಡೆಸುವ ಅಧಿಕಾರಿಗಳು, ಜಾರಿಗೆ ತರುತ್ತಿರುವ ಕಾನೂನು ಮತ್ತು ಬಿಡುಗಡೆಗೊಳಿಸುತ್ತಿರುವ ಎಲ್ಲಾ ರೀತಿಯ ಹಣಕಾಸು ಸೇರಿದಂತೆ ಇತರೆ ವಿಷಯಗಳ ಕುರಿತು ಅರಿವು ಮೂಡಿಸುವಲ್ಲಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಡಾ ಕೆ.ವಿ. ರಾಜೇಂದ್ರ ಅವರನ್ನು ಸನ್ಮಾನಿಸಿದ ತಹಸೀಲ್ದಾರ್ ಕೆ.ಎಚ್. ಶಿವಕುಮಾರ ಮಾತನಾಡಿ, ದೇಶದ ಆಡಳಿತ ಸುದಾರಣೆ ಹಾಗೂ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಡಾ ಕೆ.ವಿ. ರಾಜೇಂದ್ರರವರಂತಹ ಅಧಿಕಾರಿಗಳಿಂದ ಮಾತ್ರ ಸಾಧ್ಯ ಎಂದರು.
ಚಳಗೇರಿ ಸಿಇಎಸ್ ಪ್ರೌಢಶಾಲೆಯ ನಿವೃತ್ತ ಪ್ರಧಾನ ಗುರುಗಳಾದ ಎಚ್.ಎಫ್ ಚಳಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರೂರು ಸರಸ್ವತಿ ಕನ್ನಡ ಕಾನ್ವೆಂಟ್ ಶಾಲೆಯ ಶಿಕ್ಷಕ ಎಫ್. ಜೆ. ಪಿಂಜಾರ, ಡಾ ಮನೋಜ ಸಾಹುಕಾರ, ಗ್ರಾಪಂ ಸದಸ್ಯ ಭೀಮಣ್ಣ ಓಲೇಕಾರ, ಡಾ ಕೆ.ವಿ. ರಾಜೇಂದ್ರರವರ ತಂದೆ ವಿಶ್ವನಾಥ ಕೆ ಎಸ್, ತಾಯಿ ಸುಲೋಚನಾ, ಕಾರ್ಮಿಕ ಮುಖಂಡರಾದ ಮೌಲಾಸಾಬ್ ಪ್ಲಾಟ್, ನೀಲಪ್ಪ ಭಕ್ಕಜ್ಜಿ, ನಾಗಪ್ಪ ಶ್ಯಾಮನೂರು, ಭೀಮಪ್ಪ ಬಾರ್ಕಿ, ನಾಗಪ್ಪ ಹೊಸಳ್ಳಿ ಹಾಗೂ ಡಾ ಕೆ.ವಿ. ರಾಜೇಂದ್ರರವರ ಮಿತ್ರರಾದ ಬಿ.ಎಚ್. ಹೊಸಳ್ಳಿ, ಜಗದೀಶ ಕೃಷ್ಣಪ್ಪನವರ, ಕರಬಸಪ್ಪ ವೇಂಕಪ್ಪನವರ, ಮಾಲತೇಶ ಕಡ್ಲಿಗೊಂದಿ ಸೇರಿದಂತೆ ಅನೇಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

