ಸೇವಾವಧಿ ತೃಪ್ತಿ ನೀಡಿದೆ: ದೇವಸೂರ
ಶಿಗ್ಗಾಂವಿ: ತಾಲೂಕಿನ ಕುಂದೂರು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಆರ್.ಎಸ್. ದೇವಸೂರ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಕಾರ್ಯದರ್ಶಿ ಆರ್.ಎಸ್. ದೇವಸೂರು ಮಾತನಾಡಿ, ಸೇವಾ ಕಾರ್ಯದಲ್ಲಿ ಗ್ರಾಮಸ್ಥರ ಸಹಕಾರ ಪ್ರಮುಖವಾಗಿತ್ತು. ಆದ್ದರಿಂದ ನಮ್ಮ ಸೇವಾ ಅವಧಿಯಲ್ಲಿ ಯಾವುದೇ ತೊಂದರೆಗಳು ಬರಲಿಲ್ಲ. ಅಲ್ಲದೇ ನನ್ನ ಸೇವಾ ಅವಧಿ ಸಂಪೂರ್ಣ ತೃಪ್ತಿ ನೀಡಿದೆ. ಅದಕ್ಕೆ ಸಾರ್ವಜನಿಕರೊಂದಿಗೆ ಇದ್ದ ಉತ್ತಮ ಬಾಂಧವ್ಯ ಹಾಗೂ ಸಮಸ್ಯೆಗೆ ಸ್ಪಂದನೆ ಅಗತ್ಯವಾಗಿದೆ ಎಂದರು.
ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಚನ್ನಪ್ಪ ದುಂಡಪ್ಪ ಬಾಡದ ಮಾತನಾಡಿ, ಗ್ರಾಮ ಪಂಚಾಯತಿಯಲ್ಲಿ ಕಾರ್ಯದರ್ಶಿಯಾಗಿ ವ್ಯಾಪ್ತಿಯ ಎಲ್ಲ ಗ್ರಾಮಸ್ತರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಆರೋಗ್ಯ ಸುಖ, ಶಾಂತಿಯಿಂದ ಇರಲಿ ಎಂದು ಹಾರೈಸಿದರು. ಗುಡ್ಡದಚನ್ನಾಪುರ ಪ್ಲಾಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಧಾನ ಶಿಕ್ಷಕ ಜಿ.ಎಸ್. ಉಂಕಿ, ಗ್ರಾಪಂ ಪಿಡಿಓ ಸುದೀರ ಹಡಗಲಿ, ಶಿವಣ್ಣ ಪರಸಣ್ಣವರ, ಶಂಭಣ್ಣ ಕಡಕೋಳ, ಮಂಜುನಾಥ ಬಾಡದ, ಶೇಖಪ್ಪ ಮರೆಮ್ಮನವರ, ಸುರೇಶ ಕಬನೂರ, ಫಕ್ಕೀರಪ್ಪ ಬಂಡಿವಡ್ಡರ, ಮಹೇಶಗೌಡ ಪಾಟೀಲ, ಬಸನಗೌಡ ಪಾಟೀಲ, ವಿಶ್ವನಾಥ ಹರವಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

