ಹಾವೇರಿ

ಗುರು ಮಾರ್ಗದರ್ಶನದಲ್ಲಿ ನಡೆಯಿರಿ: ಶ್ರೀಗಳು

Published On :

ರಾಣಿಬೆನ್ನೂರು: ಶಿಷ್ಯರೆನ್ನಿಸಿಕೊಂಡವರು ತಮ್ಮ ಆತ್ಮಸಾಕ್ಷಿ ಹಾಗೂ ಗುರುವಿಗೆ ವಂಚಿಸದ ರೀತಿಯಲ್ಲಿ ಗುರುವಿನ ಗುಲಾಮರಾಗಿ, ಗುರು ಮಾರ್ಗದರ್ಶನದಲ್ಲಿ ನಡೆದಲ್ಲಿ ಮಾತ್ರ ಇಚ್ಛಿಸಿದ ವಿದ್ಯೆ ಮತ್ತು ಮುಕ್ತಿ ದೊರೆಯಲು ಸಾಧ್ಯ ಎಂದು ತಾಲೂಕಿನ ಮಣಕೂರು ಹಾಲಸ್ವಾಮಿ ಮಠದ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ಇಲ್ಲಿನ ಮೃತ್ಯುಂಜಯ ನಗರದಲ್ಲಿರುವ ಚನ್ನೇಶ್ವರ ಮಠದಲ್ಲಿರುವ ಜಗದ್ಗುರು ವಾಗೀಶ ಪಂಡಿತಾರಾಧ್ಯ ಧಾರ್ಮಿಕ ಪಾಠಶಾಲೆಯಿಂದ ಏರ್ಪಡಿಸಿದ್ದ ಬೇಸಿಗೆ ರಜೆಯ ಧಾರ್ಮಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗುರು-ಶಿಷ್ಯರ ಸಂಬಂಧ ಅವಿನಾಭಾವ ಸಂಬಂಧವಾಗಿದ್ದು, ಶಿಷ್ಯರಾದವರು ಗುರುಗಳು ಹೇಳಿದ ಮಾರ್ಗದಲ್ಲಿಯೇ ವಿದ್ಯಾರ್ಜನೆ ಮಾಡಿದಲ್ಲಿ ಮಾತ್ರ ಧಾರ್ಮಿಕ ವಿದ್ಯೆ ಲಭಿಸಲು ಸಾಧ್ಯವಾಗುತ್ತದೆ ಎಂಬುದನ್ನು ಮನದಲ್ಲಿಟ್ಟುಕೊಂಡು ಧಾರ್ಮಿಕ ತರಬೇತಿ ಪಡೆಯಲು ಮುಂದಾಗಬೇಕೆಂದು ಮಾರ್ಗದರ್ಶನ ಮಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿಯಲ್ಲಿ ಭಾಗವಹಿಸಿರುವ ಜಿ.ಎಂ. ದೇವಗಿರಿಮಠ, ಆರ್.ಬಿ. ಪಾಟೀಲ, ವಿ.ಎಸ್. ಕರ್ಜಗಿ, ಗೀತಾ ಹಿರೇಮಠ, ಕಸ್ತೂರಿ ಪಾಟೀಲ, ವಿ.ವಿ. ಹರಪನಹಳ್ಳಿ ಧಾರ್ಮಿಕ ತರಬೇತಿಯ ಲಾಭಾಂಶಗಳ ಕುರಿತು ಮಾತನಾಡಿದರು.
ಧಾರ್ಮಿಕ ತರಬೇತಿ ಸಂಘಟಕರಾದ ಹೇಮಯ್ಯ ಶಾಸ್ತ್ರಿಗಳು, ಗುಡ್ಡಪ್ಪ ಹಿಂದಿನಮನಿ, ಹಾಲಸಿದ್ದಯ್ಯ ಶಾಸ್ತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.