ಜೂ. 6ರಿಂದ ಗುಲ್ಬರ್ಗದಲ್ಲಿ ಸೇನಾ ಭರ್ತಿ ರ್ಯಾಲಿ
ಹಾವೇರಿ: ಗುಲ್ಬರ್ಗದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜೂನ್ 6ರಿಂದ 13ರ ವರೆಗೆ ಭಾರತೀಯ ಸೇನಾಭರ್ತಿ ರ್ಯಾಲಿ ಏರ್ಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಈ ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಪಿಯುಸಿ ವಿಜ್ಞಾನದಲ್ಲಿ ಕನಿಷ್ಠ ಶೇ. 50ರಷ್ಟು ಅಂಕ ಪಡೆದವರಿಗೆ ಸೋಲ್ಜರ್ ಟೆಕ್, ನರ್ಸಿಂಗ್ ಹಾಗೂ ಸೋಲ್ಜರ್ ಕ್ಲರ್ಕ್ 9 ಹುದ್ದೆಗಳಿಗೆ ದೈಹಿಕ ಅರ್ಹತೆ, ವೈದ್ಯಕೀಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಗಳ ಆಧಾರದ ಮೇಲೆ ರ್ಯಾಲಿ ನಡೆಯಲಿದೆ. ಅಭ್ಯರ್ಥಿಗಳು ನಿಗದಿತ ಒಂದು ದಿನ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ವೇಳಾಪಟ್ಟಿ ಪ್ರಕಾರ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯ ಅಭ್ಯರ್ಥಿಗಳು ಮಾತ್ರ 12 ಜೂನ್, 2013ರಂದು ಆಯ್ಕೆಗೆ ಹಾಜರಾಗಬೇಕು. ಅಭ್ಯರ್ಥಿಗಳು ಯಾವುದೇ ಆಮಿಷಕ್ಕೆ ಒಳಗಾಗಬಾರದು ಹಾಗೂ ಈ ಭರ್ತಿಯು ನೇರವಾಗಿರುವುದರಿಂದ ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ ಎಂದು ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ. ಅಭ್ಯರ್ಥಿಯು 17 1/2 ವರ್ಷದಿಂದ 23 ವರ್ಷದೊಳಗಿನವರಾಗಿದ್ದು, 166 ಸೆಂ.ಮೀ. ಎತ್ತರ, 77/82 ಎದೆ ಸುತ್ತಳೆ ಹಾಗೂ 50 ಕೆಜಿ ತೂಕದವಾರಗಿರಬೇಕು.
ಹುದ್ದೆಯ ಅರ್ಹತೆಗೆ ತಕ್ಕಂತೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮೂಲ ಅಂಕಪಟ್ಟಿ, 15 ಭಾವಚಿತ್ರಗಳು, ಖಾಯಂ ರವಾಸಿ, ಗುಣನಡತೆ, ಜಾತಿ ಹಾಗೂ ಆದಾಯ ಮತ್ತು ಎನ್ಸಿಸಿ ಪ್ರಮಾಣಗಳು ಹಾಗೂ ಅಭ್ಯರ್ಥಿಯು 18 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ ಪಾಲಕರಿಂದ ಪ್ರಮಾಣ ಪತ್ರ ಸರ್ಕಾರದ ಅಥವಾ ಇನ್ನಿತರ ಸಂಸ್ಥೆಯಿಂದ ಪಡೆದ ಕ್ರೀಡಾ ಪ್ರಮಾಣಪತ್ರಗಳ ಎರಡು ಪ್ರತಿಗಳನ್ನು (ಪ್ರಮಾಣಪತ್ರಗಳು ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಇರತಕ್ಕದ್ದು) ಸಲ್ಲಿಸಬೇಕೆಂದು ಸೇನಾ ಆಯ್ಕೆ ರ್ಯಾಲಿ ಸಂಘಟಕರು ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0836-2440176ನ್ನು ಸಂಪರ್ಕಿಸಲು ಸೈನಿಕ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

