ಹಾವೇರಿ

ಸಮಾಜ ಜಾಗೃತಿಗೆ ಧರ್ಮ ಅಂಕುಶವಿದ್ದಂತೆ: ದಂಡಿನ

Published On :

ಗದಗ: ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಧರ್ಮಪಥ ಮುಖ್ಯ, ಸಮಾಜವನ್ನು ಜಾಗೃತಗೊಳಿಸಲು ಧರ್ಮವು ಅಂಕುಶವಿದ್ದಂತೆ, ಧರ್ಮ ಗುರುಗಳು ದಂಡಪಾಲಕರಿದ್ದಂತೆ ಎಂದು ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಕವಿತಾ ದಂಡಿನ ಅಭಿಪ್ರಾಯಪಟ್ಟರು.
ಈಚೆಗೆ ಅವರು ಸ್ಥಳೀಯ ಶಿವಶರಣೆ ನೀಲಮ್ಮ ತಾಯಿ ಆಧ್ಮಾತ್ಮ ವಿದ್ಯಾಶ್ರಮದಲ್ಲಿ ನಡೆದ ಮಾಸಿಕ ಶಿವಾನುಭವ ಹಾಗೂ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಬುದ್ಧನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಬೌದ್ಧ ಧರ್ಮದಲ್ಲಿ ಸರಳ ಜೀವನ, ಸರಳ ಧರ್ಮಾಚರಣೆ, ದುಃಖಕ್ಕೆ ಪರಿಹಾರ, ಅಹಿಂಸಾ ಪರಮೋಧರ್ಮ ಮತ್ತು ಬುದ್ಧನ ತತ್ವ ಸಂದೇಶಗಳು ಆಚಾರ ವಿಚಾರಗಳು ಜನಪ್ರಿಯತೆ ಪಡೆಯುವ ಮೂಲಕ ಎಲ್ಲ ಧರ್ಮದವರು ಆಚರಿಸುವಂತಿವೆ. ಎಲ್ಲ ಧರ್ಮಗಳೂ ಮಾನವೀಯ ಮೌಲ್ಯ ಪ್ರತಿಪಾದಿಸಿವೆ ಎಂದರು. ವಾಸುದೇವ ಹೂಲಿ ಅಧ್ಯಕ್ಷತೆ ವಹಿಸಿದ್ದರು. ಮುಕ್ತಾಯಕ್ಕ, ರತ್ನಾಬಾಯಿ ಅವರು ಬುದ್ಧನ ಸಾಧನೆಗಳು ಮತ್ತು ಸಾಮಾಜಿಕ ಕೊಡುಗೆ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ನೀಲಮ್ಮ ಅಸುಂಡಿ ಸಾನ್ನಿಧ್ಯ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.