ಕರವೇ ಕಚೇರಿಯಲ್ಲಿ ರಾಜ್ಯೋತ್ಸವ ಸಂಭ್ರಮ
ಹಾವೇರಿ: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಹುಕ್ಕೇರಿ ಮಠದ ಪಟ್ಟಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಧ್ವಜಾರೋಹಣ ನೆರವೇರಿಸಿದರು. ಕರವೇ ಜಿಲ್ಲಾಧ್ಯಕ್ಷ ಕರಬಸಯ್ಯ ಸಂ. ಬಸರೀಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಕರವೇ ತಾಲೂಕು ಅಧ್ಯಕ್ಷ ಈರಣ್ಣ ಮ. ಪಟ್ಟಣಶೆಟ್ಟಿ, ಸತೀಶಗೌಡ ಮುದಿಗೌಡ್ರ, ಯಶವಂತಗೌಡ ದೊಡ್ಡಗೌಡ್ರ, ಈರಣ್ಣ ಪಟ್ಟಣಶೆಟ್ಟಿ, ರಾಕೇಶ್ ಶಂಕ್ರೀಕೊಪ್ಪ, ಬಿ.ಎಚ್. ಬಣಕಾರ, ಮಾಲತೇಶ್ ಬಾರ್ಕಿ, ಮಂಜುನಾಥ ಶೆಟ್ಟರ, ಶಂಭುಲಿಂಗ ಹತ್ತಿ, ಮಂಜು ಸುಣಗಾರ, ಗಣೇಶ ತೆವರಿ, ತಿಪ್ಪಣ್ಣ ತೋಟಗೇರ, ಚೇತನ, ಗಿರೀಶ, ಸಿದ್ದು, ಚಂದ್ರು, ಯಲ್ಲಪ್ಪ, ಪ್ರದೀಪ, ಸಾದಿಕ್, ಶಫಿ, ಶಂಕರಣ್ಣ, ಶಂಕರ್ ಪತ್ತಾರ್ ಮುತ್ತು ಮುಕ್ತಾಲಿ ಇದ್ದರು.
ಆರ್ಥಿಕ ಗಣತಿ ಅಭಿವೃದ್ಧಿಗೆ ಸಹಕಾರಿ: ಚೌಗುಲೆ
ಶಿಗ್ಗಾಂವಿ: ಆರ್ಥಿಕ ಗಣತಿಯಲ್ಲಿ ದೇಶದ ಬೆಳವಣಿಗೆ ಉದ್ದೇಶವಿದೆ ಎಂದು ತಹಸೀಲ್ದಾರ್ ಎಸ್.ಎ. ಚೌಗುಲೆ ಹೇಳಿದರು. ಶರೀಫ ಶಿವಯೋಗಿಗಳ ಸಭಾಭವನದಲ್ಲಿ ನಡೆದ 6ನೇ ಆರ್ಥಿಕ ಗಣತಿ ಮೇಲ್ವಿಚಾರಕರು, ಗಣತಿದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಕುಟುಂಬ, ದೇಶದ ಆರ್ಥಿಕ ಮಟ್ಟ ತಿಳಿಯಲು ಮತ್ತು ಸುಧಾರಿಸಲು ಸಾಧ್ಯವಿದೆ. ಗಣತಿದಾರರು ಸೂಕ್ತ ಮಾಹಿತಿ ಪಡೆಯಬೇಕು ಎಂದರು. ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎಸ್.ಎಚ್. ಪಾಟೀಲ, ಆರ್ಥಿಕ ಗಣತಿಯಿಂದ ದೇಶದ ಆರ್ಥಿಕತೆ ಹೆಚ್ಚಿಸಲು ಸಾಧ್ಯ ಎಂದರು. ಕಂದಾಯ ಸಹಾಯಕ ನಿರ್ದೇಶಕ ಎಚ್.ವೈ. ಮೀಶಿ ಮಾತನಾಡಿದರು. ಶಿಗ್ಗಾಂವಿ ಪುರಸಭೆ ಮುಖ್ಯಾಧಿಕಾರಿ ಪಿ.ಎಂ. ಚನ್ನಪ್ಪನವರ, ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ಬಿ.ಎನ್. ಧರಣೇಂದ್ರಕುಮಾರ, ಜೆ.ಆರ್. ಪಾಟೀಲ, ಎನ್.ಬಿ. ಪಾರಿಗಂಟಿ, ಶಿರಸ್ತೇದಾರ ರವಿ ಕೊರವರ, ಕಿರಣ ತೇರದಾಳ, ಪುರಸಭೆ ವಿಷಯ ನಿರ್ವಾಹಕ ಅಧಿಕಾರಿಗಳಾದ ವೀರಣ್ಣ ಬಾರಕೇರ, ಉಮೇಶ ಕೋತಂಬ್ರಿ, ತಾಪಂ ವ್ಯವಸ್ಥಾಪಕ ಅಧಿಕಾರಿ ಬಿ.ಎಂ. ಕಿವುಡನವರ ಇದ್ದರು. ಸುಮಂಗಲಾ ಹೂಗಾರ ಪ್ರಾರ್ಥಿಸಿದರು. ಸಾಂಖ್ಯಿಕ ಅಧಿಕಾರಿ ಶಿವಣ್ಣ ಸಣ್ಣಕ್ಕಿ ಸ್ವಾಗತಿಸಿದರು. ಶಂಕರ ಪವಾರ ನಿರೂಪಿಸಿ, ವಂದಿಸಿದರು.
6ಕ್ಕೆ ಆಹೋರಾತ್ರಿ ಸಂಗೀತ
ಹಾವೇರಿ: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ರಾಜ್ಯೋತ್ಸವದ ಅಂಗವಾಗಿ 'ಕಲಾ ಸೌರಭ' ನ. 6ರ ರಾತ್ರಿ 9 ಗಂಟೆಗೆ ಜಿಲ್ಲಾ ಗುರುಭವನದಲ್ಲಿ ಅಹೋರಾತ್ರಿ ಸಾಂಸ್ಕೃತಿಕ ಸಂಗೀತ ಹಮ್ಮಿಕೊಂಡಿದೆ. ಜಾನಪದ ವಿವಿ ಉಪಕುಲಪತಿ ಡಾ ಅಂಬಳಿಕೆ ಹಿರಿಯಣ್ಣ ಉದ್ಘಾಟಿಸಲಿದ್ದಾರೆ. ಹುಕ್ಕೇರಿ ಮಠದ ಶ್ರೀ ಸದಾಶಿವ ಶ್ರೀಗಳು, ಹೊಸಮಠದ ಬಸವಶಾಂತಲಿಂಗ ಶ್ರೀಗಳು, ಹರಸೂರು ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶ್ರೀಗಳ ಆಗಮಿಸಲಿದ್ದು, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಚಾವಡಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 9.30ರಿಂದ 'ಕಲಾ ಸೌರಭ'ದಲ್ಲಿ ಬಾಲ ಕಲಾವಿದರಾದ ಪ್ರಿಯಂಕಾ ಕಾಶೆಟ್ಟಿ, ಸಂಜನಾ ಜೋಶಿ, ವಿದ್ಯಾ ನರಗುಂದ, ದಿವ್ಯಾ ನಾಯ್ಕ ಭರತ ನಾಟ್ಯ ಪ್ರದರ್ಶಿಸಲಿದ್ದಾರೆ. ಪಂ. ಶ್ರೀನಿವಾಸ ಜೋಶಿ (ಸಿತಾರ್), ಶಿಗ್ಗಾಂವಿಯ ಹನುಮಂತಪ್ಪ ಕಾಮನಹಳ್ಳಿ (ವಯೋಲಿನ್), ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಂ. ಬಸವರಾಜ ಭಜಂತ್ರಿ ಹೆಡ್ಡಿಗೊಂಡ (ಶಹನಾಯಿ) ಹಾಗೂ ಹುಬ್ಬಳಿಯ ಆದಿತ್ಯ ಕುಲಕರ್ಣಿ (ಕೊಳಲು) ವಾದ್ಯ ಸಂಗೀತ ಪ್ರಸ್ತುತಪಡಿಸುವರು. ಧಾರವಾಡದ ಪಂ. ಬಾಲಚಂದ್ರ ನಾಕೋಡ, ಹುಬ್ಬಳ್ಳಿಯ ರೇಖಾ ಹೆಗಡೆ, ಆಕಾಶವಾಣಿ ಕಲಾವಿದೆ ಹಾವೇರಿಯ ಭಾಗ್ಯವತಿ ಕೋಡಬಾಳ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸುವರು. ಗದುಗಿನ ಶಹಜಾನ ಮುದಕವಿ ಮತ್ತು ತಂಡ ಜಾನಪದ ನೃತ್ಯ ಕಾರ್ಯಕ್ರಮ ನಡೆಸಿಕೊಡಲಿದೆ. ಪೃಥ್ವಿ ಶಿರೂರ ನೃತ್ಯ ಹಾಗೂ ಜ್ಯೂ. ರಾಜಕುಮಾರ್ ತಂಡದಿಂದ ರಸಮಂಜರಿ ಇದೆ ಎಂದು ಸಂಘದ ಕಾರ್ಯದರ್ಶಿ ಪರಶುರಾಮ ಅಗಡಿ, ರಾಷ್ಟ್ರೀಯ ಮಂಡಳಿ ಸದಸ್ಯ ವಿಜಯ್ ಹೂಗಾರ, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ರಾಮು ಮುದಿಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನಕ ಜಯಂತಿ: ನಾಳೆ ಸಭೆ
ಹಾವೇರಿ: ಕನಕ ಜಯಂತಿ ಆಚರಣೆ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ನ. 5ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ನಡೆಯಲಿದೆ. ಈ ಸಭೆಗೆ ಜಿಲ್ಲೆಯ ಕುರುಬ ಸಂಘಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಕನಕ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ, ಕನಕ ಜಯಂತಿ ಆಚರಣೆ ಕುರಿತು ಸಲಹೆ-ಸೂಚನೆ ನೀಡಬೇಕೆಂದು ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಚಂದ್ರಶೇಖರ ಮುದಕಣ್ಣನವರ ಹಾಗೂ ಪ್ರಧಾನ ಕಾರ್ಯದರ್ಶಿ ಮಾಲತೇಶ ಬಣಕಾರ ಕೋರಿದ್ದಾರೆ.
ಸಲೀಂ ಅಹ್ಮದ್ ಶುಭಾಶಯ
ಹಾವೇರಿ: ಪ್ರಸಕ್ತ ದೀಪಾವಳಿ ಹಬ್ಬವು ಹಾವೇರಿ, ಗದಗ ಜಿಲ್ಲೆ ಮತ್ತು ನಾಡಿನ ಸರ್ವಜನತೆಗೆ ಸುಖ-ಶಾಂತಿ, ಸಂತೋಷ, ನೆಮ್ಮದಿ, ಸಮೃದ್ಧಿ ಹಾಗೂ ಶಾಂತಿ ನೀಡಲಿ ಎಂದು ಭಾರತ ಸರ್ಕಾರದ ಯುವ ಜನ ಸೇವಾ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನ್ ಮಹಾ ನಿರ್ದೇಶಕ ಸಲೀಂ ಅಹ್ಮದ್ ಶುಭಾಶಯ ಕೋರಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಬ್ಬಗಳು ಭಾರತಿಯ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಮಾಧ್ಯಮಗಳಾಗಿವೆ. ಹಬ್ಬಗಳ ಆಚರಣೆಯಿಂದ ದೇಶಾಭಿಮಾನ ಹಾಗೂ ಭಾವೈಕ್ಯ ವೃದ್ಧಿಸುತ್ತದೆ ಎಂದು ಹೇಳಿದ್ದಾರೆ.
ದಲಿತ ಮಹಿಳೆಗೆ ಅನ್ಯಾಯ: ಮನವಿ
ಶಿಗ್ಗಾಂವಿ: ತಾಲೂಕಿನ ಅಡವಿಸೋಮಾಪುರ ಅಂಗನವಾಡಿ ಕೇಂದ್ರದ ಆಯಾ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಇದರಲ್ಲಿ ಹರಿಜನ ಮಹಿಳೆಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಮಾಳಗಿ ಹಾವೇರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅಡವಿಸೋಮಾಪುರ ಅಂಗನವಾಡಿ ಕೇಂದ್ರದಲ್ಲಿ ಖಾಲಿಯಿದ್ದ ಆಯಾ ಹುದ್ದೆಗೆ ಅದೇ ಗ್ರಾಮದ ವಿಧವೆ ಪದ್ಮಾ ಹನುಮಂತಪ್ಪ ಹರಿಜನ ಅರ್ಜಿ ಸಲ್ಲಿಸಿದ್ದರು. ಹಿಂದೂ ಮಾದರ ಜಾತಿಗೆ ಸೇರಿದ ಅವರು 7ನೇ ತರಗತಿ ಓದಿದ್ದಾರೆ. ಆಯ್ಕೆ ಸಮಯದಲ್ಲಿ ಗಂಡನ ಮರಣ ದಾಖಲಾತಿ ತೆಗೆದುಹಾಕಿ, ಸಮಿತಿಗೆ ತಪ್ಪು ಮಾಹಿತಿ ನೀಡಲಾಗಿದೆ. ಸರ್ಕಾರಿ ನಿಯಮಾವಳಿ ಪ್ರಕಾರ ನೇಮಕಾತಿ ಮಾಡದೆ, ಕೇವಲ ನಾಲ್ಕನೇ ತರಗತಿ ಓದಿದವರನ್ನು ಆಯ್ಕೆ ಮಾಡಲಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ. ಆಯ್ಕೆ ಅನ್ಯಾಯದ ಕುರಿತು ತಾಲೂಕಿನ ವಿವಿಧ ದಲಿತ ಸಂಘಟನೆಗಳು ಶಿಗ್ಗಾಂವಿ ಸಿಡಿಪಿಒ ಕಚೇರಿ ಎದುರು ಪ್ರತಿಭಟನೆ ಮಾಡಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ, ದಲಿತ ಮಹಿಳೆಗಾದ ಅನ್ಯಾಯ ಸರಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದರ ಕುರಿತು ಯಾವುದೇ ಕ್ರಮ ಜರುಗಿಸಿಲ್ಲ. ಈ ಬಗ್ಗೆ ಹಾವೇರಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೂ ಮನವಿ ಮಾಡಲಾಗಿತ್ತು. ಅವರೂ ತನಿಖೆ ನಡೆಸುವುದಾಗಿ ಹೇಳಿದ್ದರು. ಈಗ ಅವರೂ ಮೌನವಾಗಿದ್ದಾರೆ. ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

