ಹಾವೇರಿ

ಪ್ರಧಾನಿಯಾಗಿ ಮೋದಿ: ಬಿಜೆಪಿ ಸಂಕಲ್ಪ

Published On :

ಹಾವೇರಿ: ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಸಂಜೆ ಬಿಜೆಪಿ ಯುವಮೋರ್ಚಾ ನಗರ ಘಟಕದ ವತಿಯಿಂದ ದೇಶದ ಶಾಂತಿ, ಏಕತೆ, ಭದ್ರತೆಗಾಗಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಸಂಕಲ್ಪ ದಿನ ಆಚರಿಸಲಾಯಿತು.
ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ ಮಾತನಾಡಿ, ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸುವಲ್ಲಿ ದೇಶದ ಯುವಕರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಇಲ್ಲಿ ನೆರೆದಿರುವ ಯುವ ಸಮುದಾಯ ತಾವಷ್ಟೇ ಮತ ನೀಡದೆ, ಮೋದಿಯವರ ಜನಪರ ಕಾಳಜಿಯ ಕುರಿತು ಸಮಾಜದಲ್ಲಿ ಮನವರಿಕೆ ಮಾಡುವ ಜವಾಬ್ದಾರಿಯನ್ನು ವಹಿಸಬೇಕು. ಮತದಾರರ ಪಟ್ಟಿಗೆ ಅರ್ಹರ ಹೆಸರನ್ನು ಸೇರಿಸುವ ಕೆಲಸವಾಗಬೇಕು ಎಂದು ಹೇಳಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಮುಳ್ಳೂರ, ನ. 17ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ 'ಭಾರತ ಗೆಲ್ಲಿಸಿ' ನಮೋ ಸಮಾವೇಶದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ದೈವಜ್ಞ ಪ್ರತಿಜ್ಞಾ ವಿಧಿ ಬೋಧಿಸಿದರು. ನಮ್ರತಾ ಮತ್ತು ಪಲ್ಲವಿ ವಂದೇ ಮಾತರಂ ಗೀತೆ ಹಾಡಿ ಕಾರ್ಯಕ್ರಮಕ್ಕೆ ಕಳೆ ತಂದರು. ಜನರು ಹಣತೆ ಕೈಯಲ್ಲಿ ಹಿಡಿದು ವಂದೇ ಮಾತರಂ ಗೀತೆ ಹಾಡಿ ಸಂಕಲ್ಪ ಮಾಡಿದರು.
ಭಾಜಪ ಜಿಲ್ಲಾ ಘಟಕದ ಉಪಾಧ್ಯಕ್ಷ ವೇದವ್ಯಾಸ ಕಟ್ಟಿ, ನಗರ ಘಟಕದ ಮಾಜಿ ಅಧ್ಯಕ್ಷ ಶಿವಲಿಂಗಪ್ಪ ಕಲ್ಯಾಣಿ, ಉಪಾಧ್ಯಕ್ಷ ಹುಸೇನ್ ಸಾಬ್ ನದಾಫ್, ಪ್ರಧಾನ ಕಾರ್ಯದರ್ಶಿ ಸೋಮೇಶ ಕುರ್ಡೇಕರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಕರಿಬಸಮ್ಮನವರ, ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿಗಳಾದ ಮಧುಕರ ನವಲೆ, ಇಮಾಮ್ ಹಿರೇಮುಗುದೂರ, ಐಟಿ ಸೆಲ್‌ನ ಜಿಲ್ಲಾ ಸಹ ಸಂಚಾಲಕ ಬಸಂತ್ ಸವಣೂರು, ನಗರಸಭಾ ಸದಸ್ಯರಾದ ಹನ್ಮಂತ ನಾಯ್ಕ ಬದಾಮಿ, ಕರಿಬಸಪ್ಪ ಹಳದೂರ, ಲಲಿತಾ ಗುಂಡೇನಹಳ್ಳಿ, ಸೌಭಾಗ್ಯಮ್ಮ ಹಿರೇಮಠ, ಜಿಲ್ಲಾ ಕಾರ್ಯದರ್ಶಿಗಳಾದ ರತ್ನಾ ಕಾಶೆಪ್ಪನವರ್, ದಾನಪ್ಪ ಬಿಷ್ಟಕ್ಕನವರ್, ಬಾಲಾಜಿ ಧಾರವಾಡ, ಚೇತನ್, ರವಿ ಎಲಿವಾಳ, ಮಹಾವೀರ ಘನಾತೆ, ಆನಂದ ಕಲಾಲ್, ಅಕ್ಷುಭ್ಯ ಗುತ್ತಲ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.