ಜಕ್ಕನಕಟ್ಟಿ: ಬೆಳೆ ಕ್ಷೇತ್ರೋತ್ಸವ
ಶಿಗ್ಗಾಂವಿ: ಸವಣೂರು ತಾಲೂಕಿನ ಜಕ್ಕನಕಟ್ಟಿ ಕುಮಾರಸ್ವಾಮಿ ಪ್ರಭಯ್ಯನವರಮಠ ಅವರ ಹೊಲದಲ್ಲಿ ನಡೆದ ಬೆಳೆ ಕ್ಷೇತ್ರೋತ್ಸವದಲ್ಲಿ ಡಿಕೆಸಿ 8101 ಗೋವಿನ ಜೋಳ ತಳಿಗೆ ಮಾನ್ಸೆಂಟೋ ಕಂಪನಿಯ ವ್ಯವಸ್ಥಾಪಕ ಕೆ. ದಾನನಗೌಡ್ರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮಳೆಯಾಶ್ರಿತ, ನೀರಾವರಿ ಸೇರಿದಂತೆ ಹಿಂಗಾರು, ಮುಂಗಾರಿನಲ್ಲಿ ರೋಗನಿರೋಧಕ ಶಕ್ತಿಯುಳ್ಳ ಡಿಕಾಲ್ಬೊ ಡಿಕೆಸಿ 8101 ಗೋವಿನ ಜೋಳ ತಳಿ ಬೆಳೆಯಬಹುದು. ಎಕರೆಗೆ 28ರಿಂದ 33 ಕ್ವಿಂಟಲ್ ಇಳುವರಿ ನೀಡಬಲ್ಲದು. ಎಲ್ಲ ಹವಾಮಾನಕ್ಕೂ ಹೊಂದಿಕೊಳ್ಳುತ್ತದೆ. ಗೋವಿನ ಜೋಳಕ್ಕೆ ತೆನೆ ತುದಿ ವರೆಗೂ ಕಾಳು ತುಂಬಿರುತ್ತವೆ. ಉತ್ತಮ ಬಣ್ಣದ ದಪ್ಪಕಾಳುಗಳನ್ನು ಹೊಂದಿರುತ್ತದೆ. ಯಾವುದೇ ಭೂಮಿಯಲ್ಲಿ, ಹೆಚ್ಚು ಮಳೆ ಬಿದ್ದರೂ ಉತ್ತಮ ಇಳುವರಿ ಕೊಡಬಲ್ಲದು. ಜಿಂಕ್ ಸಲ್ಫೇಟ್, ಸಾವಯವ ಗೊಬ್ಬರ ಬಳಕೆ ಮುಖ್ಯ ಎಂದರು. ದೇವೇಂದ್ರಗೌಡ ಮುಂದಿನಮನಿ, ಸುರೇಶ ಕುಂದಗೋಳ, ಈರಣ್ಣ ಚರಂತಿಮಠ, ಹುತ್ತಪ್ಪ ಹರಿಜನ, ಸಿದ್ರಾಮಯ್ಯ ಎರೆಸೀಮಿಮಠ, ಪ್ರಕಾಶಗೌಡ ಪಾಟೀಲ, ವೈ.ಟಿ. ಕುಂದಗೋಳ ಇದ್ದರು.
--
ಜೈನ ಮಂದಿರದಲ್ಲಿ ಸವಾಲು ಕಾರ್ಯಕ್ರಮ
ಹಾವೇರಿ: ಇಲ್ಲಿನ 1008ನೇ ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ಬರುವ ಫೆಬ್ರುವರಿ 11ರಿಂದ 13ರ ವರೆಗೆ ನಡೆಯಲಿರುವ ಚತುರ್ಮುಖ ಜಿನಬಿಂಬ ಲಘು ಪಂಚಕಲ್ಯಾಣ ಹಾಗೂ 1008 ಆದಿನಾಥ ಸ್ವಾಮಿ ಜಿನಮಂದಿರದ ಧಾಮ ಸಂಪ್ರೋಕ್ಷಣ ಮಹೋತ್ಸವದ ನಿಮಿತ್ತ ಸವಾಲು ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ಜರುಗಿತು.
108 ಪುಣ್ಯ ಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಹಾಗೂ ಇಲ್ಲಿನ ಸುತ್ತಮುತ್ತಲಿನ ಊರುಗಳಿಂದ ಆಗಮಿಸಿದ್ದ ಶ್ರಾವಕ-ಶ್ರಾವಕಿಯರ ಸಮ್ಮುಖದಲ್ಲಿ ಸವಾಲು ಕಾರ್ಯಕ್ರಮ ನಡೆಯಿತು.
ಮುಖ್ಯವಾಗಿ ಯಜಮಾನ, ಯಜಮಾನಿ, ಇಂದ್ರ, ಇಂದ್ರಾಣಿ, ಕುಬೇರ, ಅಷ್ಟ ಕನ್ನಿಕೆಯರು ಸೇರಿದಂತೆ ವಿವಿಧ ಸವಾಲುಗಳು ನೆರವೇರಿದವು.
ಪುಣ್ಯಸಾಗರ ಮಹಾರಾಜರ ಆಶೀರ್ವಚನದ ನಂತರ ಮಹಾಮಂಗಳಾರತಿ ನಡೆಯಿತು. ಲಘು ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ಸಮಿತಿ ಹಾಗೂ ನೇಮಿನಾಥ ದಿಗಂಬರ ಜೈನಮಂದಿರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

