ರ್ಯಾಲಿಗೂ ಮುನ್ನ ಬಿಎಸ್ವೈ ಕರೆ ತನ್ನಿ
ಬ್ಯಾಡಗಿ: ಬೆಂಗಳೂರಿನಲ್ಲಿ ನಡೆಯಲಿರುವ ನರೇಂದ್ರ ಮೋದಿ ರ್ಯಾಲಿಗೂ ಮುನ್ನ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆ ತರುವುದು ಸೂಕ್ತ. ಇಲ್ಲದಿದ್ದರೆ ಕಳೆದ ವಿಧಾನಸಭೆ ಫಲಿತಾಂಶದಂತೆ ಲೋಕಸಭೆಯಲ್ಲೂ ಬರಬಹುದು. ವೈಯಕ್ತಿಕ ಪ್ರತಿಷ್ಠೆ ದೂರತಳ್ಳಿ ಸೇರ್ಪಡೆ ಕಾರ್ಯಕ್ಕೆ ಚಾಲನೆ ನೀಡುವಂತೆ ಬಿಜೆಪಿ ಮುಖಂಡ ಮುರಿಗೆಪ್ಪ ಶೆಟ್ಟರ್ ಆಗ್ರಹಿಸಿದ್ದಾರೆ.
ಈ ಕುರಿತು ವರಿಷ್ಠರಿಗೆ ಪತ್ರವೊಂದನ್ನು ಬರೆದಿರುವ ಅವರು, ಬಿಎಸ್ವೈ ಸೇರ್ಪಡೆಗೆ ರಾಜ್ಯದ ಮುಖಂಡರಲ್ಲಿ ಭಿನ್ನಾಭಿಪ್ರಾಯವಿದೆ. ಪಕ್ಷ ಯಾರ ಸೊತ್ತಲ್ಲ, ಯಾರು ಶ್ರಮಿಸುತ್ತಾರೆಯೋ ಅವರ ಬೆನ್ನ ಹಿಂದೆ ಪಕ್ಷವಿರುತ್ತದೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಬಿಎಸ್ವೈ ಶ್ರಮವಿದೆ. ಇದನ್ನು ರಾಜ್ಯದ ವರಿಷ್ಠರು ಅರ್ಥೈಸಿಕೊಳ್ಳಬೇಕು ಎಂದು ಶೆಟ್ಟರ್ ತಿಳಿಸಿದ್ದಾರೆ.
ನ. 17ರಂದು ಬೆಂಗಳೂರಿನಲ್ಲಿ ಜರುಗುವ ರ್ಯಾಲಿಗೂ ಮುನ್ನ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಅಂದಾಗ ಮಾತ್ರ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದಾಗಲಿ ಮೋದಿಯನ್ನು ಪ್ರಧಾನಿ ಮಾಡಬೇಕೆಂಬ ಉದ್ದೇಶವಾಗಲಿ ಈಡೇರಲು ಸಾಧ್ಯ. ಆಡಳಿತ ಪಕ್ಷ ಕಾಂಗ್ರೆಸ್ನ್ನು ಸಮರ್ಥವಾಗಿ ಎದುರಿಸಲು ಬಿಎಸ್ವೈ ಒಂದು ಉತ್ತಮ ಅಸ್ತ್ರವಾಗಿದ್ದಾರೆ.
ಮಾಜಿ ಪ್ರಧಾನಿ ವಾಜಪೇಯಿಯಂತೆ ಇದೀಗ ದೇಶದಲ್ಲಿ ನರೇಂದ್ರ ಮೋದಿ ಅಲೆಯಿದೆ. ಅದನ್ನು ಮತಗಳನ್ನಾಗಿ ಪರಿವರ್ತಿಸಲು ಪ್ರಭಾವೀ ನಾಯಕರು ಹಾಗೂ ಹೆಚ್ಚಿನ ಸಂಖೈಯಲ್ಲಿ ಕಾರ್ಯಕರ್ತರು ಬಿಜೆಪಿಗೆ ಬೇಕಾಗಿದ್ದು, ಮೋದಿ ರ್ಯಾಲಿಗೂ ಮುನ್ನ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

