ಶಿಕ್ಷಣ ಗುಣಮಟ್ಟ ವೃದ್ಧಿಗೆ ಶ್ರಮಿಸಿ: ಆನಂದ
ಹಿರೇಕೆರೂರು: ಶೈಕ್ಷಣಿಕ ರಂಗವನ್ನು ಬಲಗೊಳಿಸುವ ಜತೆಗೆ, ಗುಣಮಟ್ಟದ ಶಿಕ್ಷಣ ನೀಡಲು ಚಿಂತಕರು ನೀಡಿರುವ ಸಂದೇಶಗಳನ್ನು ಪಾಲಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಅನಂದ ತಿಳಿಸಿದರು.
ಪಟ್ಟಣದ ಹಿರೇಕೆರೂರು ತಾಲೂಕು ಸಹಕಾರಿ ಸೌಹಾರ್ದ ವಿದ್ಯಾ ಸಂಸ್ಥೆಯ ಶಾ ನಾರಾಯಣಜಿ ಕಾನಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಜರುಗಿದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ, ಶಿಕ್ಷಕರ ಹಕ್ಕು ಅಭಿಯಾನ, ಮೌಲಾನಾ ಅಬುಲ್ ಕಲಾಂ ಅವರ 125 ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸ್ವಾತಂತ್ಯ ಹೋರಾಟಗಾರರು, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಚಿಂತಕರು ಗುಣಮಟ್ಟದ ಶಿಕ್ಷಣಕ್ಕಾಗಿ ರೂಪುರೇಷೆ ಸಿದ್ಧಪಡಿಸಿದ್ದಾರೆ. ಆ ಬೇರುಗಳ ಮೇಲೆ ಇಂದು ಶಿಕ್ಷಣ ಕ್ಷೇತ್ರ ಹೆಮ್ಮರವಾಗಿ ಬೆಳೆದಿದೆ. ಶಿಕ್ಷಕರು ಮಹಾವ್ಯಕ್ತಿಗಳ ಆದರ್ಶ ಗುಣ ಹಾಗೂ ತತ್ವಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಕರೂ ತಮ್ಮ ಪ್ರತಿಭೆ ಬೆಳಗಿಸಿಕೊಳ್ಳಲು ಪಠ್ಯೇತರ ಚಟುವಟಿಕೆ ಪೂರಕವಾಗಿವೆ ಎಂದರು.
ವಿಷಯ ಪರಿವೀಕ್ಷಕ ಬಸವರಾಜಪ್ಪ, ಶಿಕ್ಷಣ ಸಂಯೋಜಕರಾದ ವಿ.ಎಚ್. ಕೋರಿ, ಎಚ್.ವೈ. ಪೂಜಾರ, ಶಿಕ್ಷಕ ಎಂ.ಎಂ. ಕೆರೂರ, ಮುಖ್ಯ ಶಿಕ್ಷಕ ಬಸವರಾಜ ಸನ್ನೇರ ಉಪಸ್ಥಿತರಿದ್ದರು. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗಾಗಿ ಪಠ್ಯೇತರ ಸ್ಪರ್ಧೆಗಳಾದ ಗಾಯನ, ಪ್ರಬಂಧ, ಆಶುಭಾಷಣ, ಚಿತ್ರಕಲೆ, ಟಿಎಲ್ಎಂ ತಯಾರಿಕೆ ಸ್ಪರ್ಧೆ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

