ಕಾರ್ಮಿಕ ಮಕ್ಕಳ ಶಾಲೆಗೆ ಸೇರಿಸಿದ ಬಿಇಒ
ಹಾನಗಲ್ಲ: ಉದ್ಯೋಗವನ್ನರಸಿ ಬಂದ ಶಿಕ್ಷಣ ವಂಚಿತ ಕೃಷಿ ಕಾರ್ಮಿಕರ 24 ಮಕ್ಕಳನ್ನು ಶಾಲೆಗೆ ತರುವ ಮೂಲಕ ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ ಶೈಕ್ಷಣಿಕ ಜಾಗೃತಿ ಮೆರೆದಿದ್ದಾರೆ.
ಸರ್ಕಾರ ಯೋಜಿಸಿರುವ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸುವ ಯೋಜನೆಯಡಿ ಹಾನಗಲ್ಲ ಶಿಕ್ಷಣಾಧಿಕಾರಿ ತಮ್ಮ ಪ್ರಾಮಾಣಿಕ ಪ್ರಯತ್ನದ ಮೂಲಕ ಶಿಕ್ಷಣ ವಂಚಿತ ಮಕ್ಕಳನ್ನು ಶಿಕ್ಷಣ ನೀಡಲು ಕರೆ ತಂದಿರುವುದು ಪಾಲಕರ ಕುಟುಂಬಕ್ಕೆ ಹರ್ಷ ತಂದಿದೆ. ಬಳಾರಿ ಜಿಲ್ಲೆಯಿಂದ ಹಾನಗಲ್ಲಿಗೆ ಉದ್ಯೋಗ ಅರಸಿ ಬಂದ ಬಡ ಕುಟುಂಬಗಳು ತಾಲೂಕಿನ ಕಾಡಶೆಟ್ಟಿಹಳ್ಳಿ, ರತ್ನಾಪುರ ಮತ್ತು ಯಳ್ಳೂರು ಗ್ರಾಮಗಳಲ್ಲಿ ಕಬ್ಬು ಕಟಾವಿನಲ್ಲಿ ತೊಡಗಿದ್ದವು. ಇಂತಹ ಕುಟುಂಬಗಳ ಶಾಲೆ ಬಿಟ್ಟು ಬಂದ 24 ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರ 6 ವರ್ಷದಿಂದ 16 ವರ್ಷದೊಳಗಿನ ಮಕ್ಕಳ ಗಣತಿ ಕಾರ್ಯಕ್ಕೆ ಮುಂದಾಗಿದ್ದು, ಇದರಂಗವಾಗಿ ತಾಲೂಕಿನ ಕಾಡಶೆಟ್ಟಿಹಳ್ಳಿ, ರತ್ನಾಪುರ ಮತ್ತು ಯಳ್ಳೂರು ಗ್ರಾಮಗಳ ವ್ಯಾಪ್ತಿಯಲ್ಲಿನ ಕಬ್ಬು ಕಟಾವಣೆಗೆ ಬಂದಿದ್ದ ಕುಟುಂಬಗಳ ಮಕ್ಕಳು 15-20 ಕುಟುಂಬಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಣತಿ ಸಂದರ್ಭದಲ್ಲಿ ಗುರುತಿಸಲ್ಪಟ್ಟವು. ಇಂತಹ ಮಕ್ಕಳ ಪಾಲಕರ ಮನವೊಲಿಸಿ ಆಯಾ ಊರಿನ ಶಾಲೆಗಳಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸಲಾಗಿದೆ. ಅಲ್ಲದೆ, ಈ ಮಕ್ಕಳಿಗೆ ಪಠ್ಯಪುಸ್ತಕ, ಬಿಸಿಯೂಟ, ಹಾಲು, ನೋಟ್ಬುಕ್ ಸೇರಿದಂತೆ ಓದಿಗೆ ಬೇಕಾದ ಸಾಮಗ್ರಿಗಳನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಸಮನ್ವಯಾಧಿಕಾರಿ ಎಸ್. ರಂಗಸ್ವಾಮಿ ಸಂಪನ್ಮೂಲ ವ್ಯಕ್ತಿಗಳಾದ ಪಿ.ಎಂ. ಚಲವಾದಿ, ಉಮೇಶ ಅಂಗಡಿ, ಶಿಕ್ಷಕ ಟಿ. ಶಿವಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

