ಪರಿಸರ ರಕ್ಷಣೆ ಜವಾಬ್ದಾರಿ ಯುವಕರದ್ದು
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ನ. 20
ಪರಿಸರ ಹಾಗೂ ವನ್ಯಜೀವಿಗಳನ್ನು ರಕ್ಷಿಸುವ ಗುರುತರವಾದ ಜವಾಬ್ದಾರಿ ಇಂದಿನ ಪೀಳಿಗೆಯ ಯುವಕರಿಗೆ ಮಾತ್ರ ಇದೆ ಎಂದು ಖ್ಯಾತ ಪರಿಸರವಾದಿ ಮಾಧುರಿ ದೇವಧರ ಅಭಿಪ್ರಾಯಪಟ್ಟರು.
ಪಟ್ಟಣದ ರಂಭಾಪುರಿ ಜಗದ್ಗುರು ವೀರಗಂಗಾಧರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಹಸಿರು ಪಡೆ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರ ಅಭಯಾರಣ್ಯಗಳಲ್ಲಿ ನೀಲಗಿರಿ ಗಿಡಗಳನ್ನು ತೆಗೆಸಿ ಅಲ್ಲಿ ಹುಲ್ಲುಗಾವಲು ನಿರ್ಮಿಸಬೇಕು. ಅಂದರೆ ಕೃಷ್ಣಮೃಗಗಳು ವಾಸಿಸಲು ಅನುಕೂಲವಾಗುತ್ತದೆ. ಜನರಿಗೆ ಅವರದೆ ಆದ ಜವಾಬ್ದಾರಿಗಳಿವೆ ನಿಜ, ಆದರೆ ಹಾಗೆಯೇ ಅನ್ನುತ್ತ ಕುಳಿತರೆ ಪರಿಸರ ಕಾಪಾಡುವ ಜವಾಬ್ದಾರಿ ಯಾರದು ಎಂದು ಪ್ರಶ್ನಿಸಿದ ಅವರು, ಇಂದಿನ ಯುವಕರು ಪರಿಸರದ ವಿಚಾರಗಳನ್ನು ತಿಳಿದುಕೊಳ್ಳಬೇಕು.
ವಿದ್ಯಾರ್ಥಿಗಳಿಗಾಗಿಯೇ ಪತ್ರಿಕೆಗಳಲ್ಲಿ ಬರುವ ಪರಿಸರ ಸಂರಕ್ಷಣೆ ವಿಷಯಗಳನ್ನು ತಿಳಿಯುವುದು ಮುಖ್ಯವಾಗಿದೆ. ಸಮಾಜದಲ್ಲಿ ಆಗಬೇಕಾದ ಕೆಲಸಗಳು ಬಹಳಷ್ಟಿದೆ. ಅದರಲ್ಲಿ ಪರಿಸರ ಸಂರಕ್ಷಣೆಯ ಕಾರ್ಯವೂ ಒಂದಾಗಿದೆ ಎಂದರು.
ಪರಿಸರ ಸಂರಕ್ಷಣೆ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ. ರಾಮು ಮೂಲಗಿ, ಬಸವರಾಜ ಶಿಗ್ಗಾಂವಿ ಅವರು ಪರಿಸರ ಸಂರಕ್ಷಣೆ ಕುರಿತ ಹಾಡುಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತಾಧಿಕಾರಿ ವಿ.ಎಸ್.ಕಂಬಾಳಿಮಠ ವಹಿಸಿದ್ದರು. ಪ್ರಾಚಾರ್ಯ ಎಸ್.ವಿ. ಕುಲಕರ್ಣಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಎಂ. ಎಸ್. ಶಿದ್ದಪ್ಪನವರ್, ಅಡವಿಸೋಮಾಪುರ ಗ್ರಾಪಂ ಅಧ್ಯಕ್ಷ ಗೊಂವಿಂದಪ್ಪ ದುಂಡಪ್ಪನವರ, ನಾಗರಾಜ ಲಂಗೋಟಿ ವೇದಿಕೆ ಮೇಲಿದ್ದರು. ಉಪನ್ಯಾಸಕರಾದ ಎಫ್.ಎಸ್. ಶಿವಣ್ಣವರ್, ಎಂ.ಎಸ್. ಸಂಕಣ್ಣವರ, ಎಸ್.ಬಿ. ಪೂಜಾರ, ಎನ್.ಸಿ. ನಾಯ್ಕ , ಶ್ರೀದೇವಿ ಚಿಕ್ಕಮಠ ಇದ್ದರು. ಶಿವಪ್ರಕಾಶ ಬಳಿಗಾರ ನಿರೂಪಿಸಿ, ವಂದಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

