ಹಾವೇರಿ

ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕಲ್ಪಿಸಿ

Published On :

ಹಿರೇಕೆರೂರು: ಶಾಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವ ಮೂಲಕ ಮಕ್ಕಳ ನಿರಂತರ ಕಲಿಕೆಯೇ ಸರ್ಕಾರದ ಮುಖ್ಯ ಗುರಿ. ಆದ್ದರಿಂದ ಸರ್ಕಾರದ ವಿನೂತನ ಯೋಜನೆಗಳನ್ನು ಸಮರ್ಪಕವಾಗಿ ಬಳಸಿ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ನೆರವಾಗಲು ಶಿಕ್ಷಕ, ಪಾಲಕರ ಪಾತ್ರ ಮುಖ್ಯ ಎಂದು ಶಾಸಕ ಯು.ಬಿ. ಬಣಕಾರ ನುಡಿದರು.
ಅವರು ತಾಲೂಕಿನ ರಟ್ಟೀಹಳ್ಳಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನೂತನ ಕೊಠಡಿ ಉದ್ಘಾಟನೆ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರ್ಕಾರ ಹೆಣ್ಣು ಮಕ್ಕಳಿಗಾಗಿ ಪದವಿಪೂರ್ವ ಶಿಕ್ಷಣದವರೆಗೆ ಉಚಿತ ಶಿಕ್ಷಣ ನೀಡುತ್ತಿದ್ದು ಅದರ ಸದುಪಯೋಗ ಹೆಣ್ಣುಮಕ್ಕಳು ಪಡೆದುಕೊಳ್ಳಬೇಕೆಂದರು. ಶಾಲಾ ಸಮಿತಿ ಅಧ್ಯಕ್ಷ ಎಂ.ಎಂ. ಚಿಕ್ಕೇರೂರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಶಾಂತಮ್ಮ ಹಾದಿಮನಿ, ತಾಪಂ ಅಧ್ಯಕ್ಷೆ ರೇಣುಕಾ ಚಲವಾದಿ, ಚಂದ್ರಪ್ಪ ಅಪ್ಪಣ್ಣನವರ, ತಾಪಂ ಸದಸ್ಯೆ ಪ್ರಭಾವತಿ ಕುಲಕರ್ಣಿ, ರಿಯಾಜ ನರಗುಂದಕರ, ಹುಸೇನಮಿಯಾ ಜಡದಿ, ಮಕ್ಬುಲ ಚಿಕ್ಕೇರೂರ, ಎಂ.ಆರ್. ಮಕಾನದಾರ ಇದ್ದರು.
---
ಮಕ್ಕಳಿಗೂ ಕಾನೂನು ಅರಿವು ಅಗತ್ಯ: ಎಸ್.ಜಿ. ಕೂಡ್ಲಗಿಮಠ
ಶಿಗ್ಗಾಂವಿ: ಶಾಲಾ ವಿದ್ಯಾರ್ಥಿಗಳಿಗೂ ಕಾನೂನು ಅರಿವು ಅಗತ್ಯವಾಗಿದೆ. ರಸ್ತೆ ನಿಯಮ ತಿಳಿದಿರಬೇಕು. ಪಾಲಕರನ್ನು, ಗುರುಗಳನ್ನು ಪೂಜ್ಯಭಾವನೆಯಿಂದ ಕಂಡು ಆದರ್ಶ ಭಾವನೆಗಳನ್ನು ಪಾಲಿಸಿ ಉತ್ತಮ ವಿದ್ಯಾರ್ಥಿಗಳಾಗಬೇಕು. ದುಶ್ಚಟಗಳನ್ನು ದೂರವಿಟ್ಟು ಹೆಚ್ಚಿನ ವಿದ್ಯಾಭ್ಯಾಸದತ್ತ ಆಸಕ್ತಿ ತೋರಿಸಿ ಉತ್ತಮ ವಿದ್ಯಾರ್ಥಿಗಳಾಗುವ ಜತೆಗೆ ಉನ್ನತ ಮಟ್ಟಕ್ಕೆರಬೇಕು ಎಂದು ಸರ್ಕಾರಿ ಅಭಿಯೋಜಕ ಎಸ್.ಜಿ. ಕೂಡ್ಲಗಿಮಠ ಕರೆ ನೀಡಿದರು.
ಪಟ್ಟಣದ ನಳಂದಾ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶಿಗ್ಗಾಂವ ಜೆಎಂಎಫ್‌ಸಿ ನ್ಯಾಯಾಲಯ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಕೂಡ್ಲಗಿಮಠ ಮಾತನಾಡಿದವರು.
ಅಧ್ಯಕ್ಷತೆಯನ್ನು ಜಿ.ಎ. ಹಿರೇಮಠ ವಹಿಸಿದ್ದರು. ಕೆ.ಎನ್. ಭಾರತಿ ಅವರು ಬಾಲ್ಯವಿವಾಹ ಮತ್ತು ಮಹಿಳಾ ದೌರ್ಜನ್ಯಗಳ ಬಗ್ಗೆ ಉಪನ್ಯಾಸ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯ ಎಂ.ಬಿ. ಹಳೆಮನಿ, ಶಿಕ್ಷಕ ಎನ್.ಎಸ್. ಬಸವನಾಯ್ಕರ, ಎಂ.ಎಲ್. ಬೆಳದಡಿ, ಆರ್.ಪಿ. ವೆಂಕಣ್ಣವರ, ಆರ್.ಎನ್. ಡುಮ್ಮನವರ, ನ್ಯಾಯಾಲಯದ ಸಿಬ್ಬಂದಿ ಎಚ್.ವೈ. ಮುಳಗುಂದ, ಅಜ್ಜಪ್ಪ ವಡ್ಡರ, ಡಿ.ಸಿ. ರಾಮನಗೌಡ್ರ, ಪ್ರಕಾಶ ಮ್ಯಾಕಲವರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.