ರಾಣಿಬೆನ್ನೂರು: ಇಂದು ರಿವಾಯತ್ ಸ್ಪರ್ಧೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ನ. 22
ಅಂಜುಮನ್-ಎ-ಇಸ್ಲಾಂ ಕಮಿಟಿ ಅಸುಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ, ಗ್ರಾಮ ಪಂಚಾಯಿತಿ ಅಸುಂಡಿ ಆಶ್ರಯದಲ್ಲಿ ನ. 23ರಂದು ರಾತ್ರಿ 8ಕ್ಕೆ, ಮೋಹರಂ ಹಬ್ಬದ ಪ್ರಯುಕ್ತ ರಿವಾಯತ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಅಸುಂಡಿ ಗ್ರಾಮದ ಅಂಜುಮನ್ ಕಮಿಟಿ ಅಧ್ಯಕ್ಷ ರಜಾಕಸಾಬ ಕೊಕ್ಕರಗೊಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಕೆ.ಬಿ. ಕೋಳಿವಾಡ, ರುದ್ರಪ್ಪ ಲಮಾಣಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಜಿಪಂ ಸದಸ್ಯರಾದ ಶಿವಕುಮಾರ ಮುದ್ದಪ್ಪಳವರ, ತಾಪಂ ಸದಸ್ಯರಾದ ಬಸನಗೌಡ ಪಾಟೀಲ, ನ್ಯಾ. ಪಿ.ಬಿ. ಗೊಡ್ಡೆಮ್ಮಿ, ಗ್ರಾಪಂ ಅಧ್ಯಕ್ಷ ಲಿಂಗನಗೌಡ ಪಾಟೀಲ, ಉಪಾಧ್ಯಕ್ಷೆ ರೇಣುಕಾ ಭಜಂತ್ರಿ, ತಾಲೂಕು ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ಮೆಹಬೂಬಸಾಬ್ ಎಂ.ಕೆ., ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಆಗಮಿಸುವರು.
ಹಾನಗಲ್ಲ ತಾಲೂಕಿನ ಉಪ್ಪುಹುಣಶಿ ಗ್ರಾಮದ ಜಾಫರಸಾಬ್ ದಡಗೂರು ಶಾಹೀರ ಮತ್ತು ಸಂಗಡಿಗರು ಹಾಗೂ ಡಮ್ಮನಾಳ ಗ್ರಾಮದ ಭೀಮಪ್ಪ ಯಲ್ಲಪ್ಪ ಈಳಗೇರ ಶಾಹೀರ ಮತ್ತು ಸಂಗಡಿಗರು ರಿವಾಯತ ಸ್ಪರ್ಧಾಳುಗಳಾಗಿ ಭಾಗವಹಿಸಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, ಕದರಮಂಡಲಗಿ ಗ್ರಾಮದ ಅಲ್ಲಾಭಕ್ಷ ಮಕಾಂದರ, ನಾಗನಗೌಡ ಕೆಂಚನಗೌಡ್ರ, ದಿಳ್ಳೇಪ್ಪ ದೊಡ್ಡಬೂದಿಹಾಳ ತಿರ್ಪುಗಾರರಾಗಿ ಕಾರ್ಯನಿರ್ವಹಿಸುವರೆಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

