ಹಾವೇರಿ

ಎಲ್ಲ ರೈತರಿಂದ ಗೋವಿನಜೋಳ ಖರೀದಿಸಿ

Published On :

ಹಾನಗಲ್ಲ: ಸಣ್ಣ-ದೊಡ್ಡ ರೈತರೆಂದು ತಾರತಮ್ಯ ತೋರದೆ ಎಲ್ಲ ರೈತರು ಬೆಳೆದ ಗೋವಿನಜೋಳವನ್ನು ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂದು ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಆರಂಭಿಸಲಾದ ಬೆಂಬಲ ಬೆಲೆಯ ಗೋವಿನಜೋಳ ಖರೀದಿ ಕೇಂದ್ರವನ್ನು ಉದ್ಘಾಟಿಸಿದ ಅವರು, ಎಲ್ಲ ರೈತರು ಕೃಷಿ ಕ್ಷೇತ್ರದಲ್ಲಿ ಸಮಾನವಾಗಿ ಶ್ರಮಿಸುತ್ತಾರೆ. ಇದರಲ್ಲಿ ತಾರತಮ್ಯ ಬೇಡ. ಅದರಲ್ಲೂ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಕೇವಲ 25 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಬೇಕೆಂಬ ಸರ್ಕಾರದ ನಿಯಮ ಸರಿಯಲ್ಲ. ಇದನ್ನು ಕೂಡಲೇ ರದ್ದುಪಡಿಸಿ ರೈತರು ಎಷ್ಟೇ ಪ್ರಮಾಣದಲ್ಲಿ ಫಸಲು ತಂದರೂ ಅದನ್ನು ಖರೀದಿಸುವಂತಾಗಬೇಕು. ಈಗಾಗಲೇ ಈ ಬಗ್ಗೆ ಜಿಪಂ ಸಭೆಯಲ್ಲಿ ಠರಾವು ಮಂಡಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದರು.
ಮಿತಿ ರದ್ದುಗೊಳಿಸಿ: ಎಪಿಎಂಸಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಮಾತನಾಡಿ, ಬತ್ತ, ಗೋವಿನಜೋಳ, ಕಬ್ಬು ದರಗಳ ಕುರಿತಾದ ರೈತರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇವುಗಳನ್ನು ನಿವಾರಿಸುವ ಪ್ರಯತ್ನ ಸರ್ಕಾರದ ಮಟ್ಟದಲ್ಲಿ ಆಗಬೇಕು. ರೈತರಲ್ಲಿ ತಾರತಮ್ಯ ಮಾಡುವ ನೀತಿ ಮೊದಲು ರದ್ದಾಗಬೇಕು. ಸಣ್ಣ ಹಾಗೂ ದೊಡ್ಡ ಎಲ್ಲ ರೈತರೂ ಒಂದೇ ಎಂದು ಪರಿಗಣಿಸಬೇಕು. ಖರೀದಿಗೆ 25 ಕ್ವಿಂಟಲ್ ಮಿತಿಯನ್ನು ರದ್ದುಗೊಳಿಸಬೇಕು. ಈ ಬಗ್ಗೆ ವಿಧಾನಸಭೆಯ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲು ಹಿರೆಕೆರೂರು ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಮಾಡಲಾಗಿದೆ ಎಂದರು.
ಸರ್ಕಾರಕ್ಕೆ ಪ್ರಸ್ತಾವನೆ: ತಹಸೀಲ್ದಾರ್ ಡಾ೤ ನಾಗೇಂದ್ರ ಹೊನ್ನಳ್ಳಿ ಮಾತನಾಡಿ, ರೈತರ ಹಿತದೃಷ್ಟಿಯಿಂದ ಖರೀದಿ ಕೇಂದ್ರ ತೆರೆಯಲಾಗಿದೆ. ರೈತರಿಂದ ಕೇವಲ 25 ಕ್ವಿಂಟಲ್ ಗೋವಿನಜೋಳ ಖರೀದಿಸಬೇಕೆಂಬ ನಿರ್ಧಾರ ಬದಲಿಸಬೇಕೆಂದು ರೈತರ ಪರವಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ಜಿಲ್ಲಾ ವ್ಯವಸ್ಥಾಪಕ ಬಿ.ಎಂ. ಪರಮೇಶ್ವರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಪಂ ಸದಸ್ಯರಾದ ನಿಂಗಪ್ಪ ಗೊಬ್ಬೇರ, ಸುಭಾಸ ಓಲೇಕಾರ, ಪುಟ್ಟಪ್ಪ ವಾಸನದ, ರಾಜಣ್ಣ ಪಟ್ಟಣದ, ಎಂ.ಬಿ. ಪಾಟೀಲ, ಜಿ.ಎಂ. ಪಾಟೀಲ, ಪಿ.ಎಂ. ಮುದಿಗೌಡ್ರ, ಎ.ಎಚ್. ಬ್ಯಾಡಗಿ ಇದ್ದರು. ಸಹಾಯಕ ಕೃಷಿ ನಿರ್ದೇಶಕ ಎನ್.ಜಿ. ಅಮೃತೇಶ್ವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.