ಬದುಕಿನ ಲೆಕ್ಕಾಚಾರಕ್ಕೆ ಗಣಿತ: ಕೊಡ್ಲಿ
ಹಾವೇರಿ: ಭಾಷೆ ಜಗತ್ತಿನೊಂದಿಗಿನ ಸಂಪರ್ಕ ಸಾಧನವಾದರೆ, ಬದುಕಿನ ಲೆಕ್ಕಾಚಾರಕ್ಕೆ ಗಣಿತ ಸಹಕಾರಿ. ಸುಂದರ ಸರಳ ಭಾಷೆಗೆ ಮಾತ್ರ ಉತ್ತಮ ಸಂವಹನವಿರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಎಸ್.ಬಿ. ಕೊಡ್ಲಿ ಹೇಳಿದರು.
ನಗರದ ಗೆಳೆಯರ ಬಳಗ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ 'ಗಣಿತ ಸರಳವಾಗಬೇಕು-ಬರಹ ಸುಂದರವಾಗಬೇಕು' ಪ್ರಾತ್ಯಕ್ಷಿಕೆ ಉದ್ಘಾಟಿಸಿದ ಅವರು, ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಸರ್ವ ದಿಕ್ಕಿನಲ್ಲಿ ಪಸರಿಸುತ್ತಿದೆ. ಜ್ಞಾನ-ವಿಜ್ಞಾನದ ಮೂಲಕ ಅಂತರ್ಜಾಲ ಮನೆ ಬಾಗಿಲಿಗೆ ಬಂದು ಜಗತ್ತನ್ನೇ ಪರಿಚಯಿಸುತ್ತಿದೆ. ಸರಿಯಾದ ಬಳಕೆ ಮುಖ್ಯ. ಕ್ರಿಯಾಶೀಲತೆ ಮೈಗೂಡಿಸಿಕೊಂಡರೆ ಎಲ್ಲವೂ ಸುಲಭ. ಸತತ ಓದು, ಶ್ರದ್ಧೆ, ಪ್ರತಿಭೆ ಬೇಕು. ಕಠಿಣ ಎಂಬುದು ಭ್ರಾಂತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಜ್ಞಾನಗಂಗಾ ಶಿಕ್ಷಣ ಸಮಿತಿ ಅಧ್ಯಕ್ಷ ಸಿ.ಎಂ. ಪಟ್ಟಣಶೆಟ್ಟಿ, ಭವಿಷ್ಯಕ್ಕಾಗಿ ಇಂದಿನ ದಿನಗಳನ್ನು ಶೈಕ್ಷಣಿಕವಾಗಿ ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಸಾಹಿತಿ ಮಾರುತಿ ಶಿಡ್ಲಾಪುರ, ಕಲಿಯುವಿಕೆ ಸರಳೀಕರಣ ಆಗುವ ಅಗತ್ಯವಿದೆ. ಕ್ರಮಬದ್ಧ ಓದುವಿಕೆ ಬೇಕು. ತಿಳಿಯುವ ಕುತೂಹಲ ಇರಲಿ. ಶಿಕ್ಷಣವನ್ನು ಜಾಗತಿಕವಾಗಿ ನೋಡಬೇಕು. ನಾಳೆಯ ಜೀವನಕ್ಕೆ ಇಂದಿನ ಶ್ರಮ ಫಲ ನೀಡಬಲ್ಲದು ಎಂದರು.
ಗಣಿತ ವಿಷಯಗಳ ಪ್ರಾತ್ಯಕ್ಷಿಕೆ ನೀಡಿದ ಹಾನಗಲ್ಲಿನ ನಿವೃತ್ತ ಶಿಕ್ಷಕ ವಿ.ಬಿ. ದಿಕ್ಷೀತ ಮಾತನಾಡಿ, ವಿದ್ಯೆಗೆ ವಿಶೇಷ ಆದ್ಯತೆ ನೀಡಿ, ಪಾಲಕರು ಮಕ್ಕಳ ಅಭ್ಯುದಯಕ್ಕೆ ಮುಂದಾಗಿರುವುದು ಸಮಯೋಚಿತ. ಯಾವುದೂ ಸುಲಭವಾಗಿ ಸಿಗಲಾರದು, ಅದಕ್ಕಾಗಿ ಪರಿಶ್ರಮ ಪಡಬೇಕು ಎಂದರು.
ವಿ.ಬಿ. ದೀಕ್ಷಿತ್ ಅವರನ್ನು ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಸಾಹಿತಿ ಸತೀಶ ಕುಲಕರ್ಣಿ, ಬಳಗದ ಹಿರಿಯ ಸದಸ್ಯ ವಿ.ಎಂ. ಪತ್ರಿ, ಸಾಹಿತಿ ಉದಯ ನಾಸಿಕ್, ಗಿರೀಶ್ ದೇಶಪಾಂಡೆ, ಸತೀಶ್ ಕೆ., ಮುಖ್ಯೋಪಾಧ್ಯಾಯ ಸಿ.ಸಿ. ಕೋಷ್ಠಿ, ಶಿಕ್ಷಕರಾದ ನಾಗರಾಜ ನಡುವಿನಮಠ, ಎ.ಎಚ್. ಕಬ್ಬಿಣಕಂತಿಮಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

