ಜನಪದ ವೈದ್ಯ ಪದ್ಧತಿ ಧನಾರ್ಜನೆಗಲ್ಲ: ಶಿವಣ್ಣಗೌಡ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಅ. 25
ಜನಪದ ವೈದ್ಯ ಹಣ ಸಂಪಾದನೆಗೆ ಇರುವ ಉದ್ಯೋಗವಲ್ಲ. ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದಾಗ ಮಾತ್ರ ಪಾರಂಪರಿಕ ವೈದ್ಯ ಪದ್ಧತಿ ಹೆಚ್ಚು ಜನೋಪಯೋಗಿಯಾಗಲು ಸಾಧ್ಯ ಎಂದು ಶಿವಮೊಗ್ಗ ಜಿಲ್ಲೆಯ ಮಂಗಳ ಗ್ರಾಮದ ಖ್ಯಾತ ಜನಪದ ಮೂಳೆತಜ್ಞ ಶಿವಣ್ಣಗೌಡ ಎಂ.ಬಿ. ಅಭಿಪ್ರಾಯಪಟ್ಟರು.
ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-12 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಅವರು, ಮೂಳೆಮುರಿತ, ಸ್ನಾಯುಸೆಳೆತ ರೋಗಗಳಿಗೆ ಔಷಧಿ ಕೊಡುವ ಕಾಯಕದಲ್ಲಿ ನಿರತವಾಗಿದ್ದು, ಈ ವೈದ್ಯ ಪದ್ಧತಿಯನ್ನು ಕಲಿಯಲು ಯುವಕರಿಗೆ ಆಸಕ್ತಿ, ಅಭಿರುಚಿ ಇದ್ದರೆ ಇದು ಉಳಿದೀತು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ, ಆಧುನಿಕತೆ ನಡುವೆ ಪಾರಂಪರಿಕ ವೈದ್ಯ ಪದ್ಧತಿಗಳು ಹಿನ್ನೆಲೆಗೆ ಸರಿಯುತ್ತಿದ್ದು, ಅನುಭವಿ ತಜ್ಞರು ತಮ್ಮಲ್ಲಿರುವ ಜ್ಞಾನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಪ್ರಯತ್ನಿಸಬೇಕು ಎಂದರು.
ಕುಲಸಚಿವ ಪ್ರೊ ಡಿ.ಬಿ ನಾಯಕ ಸಂವಾದಕ್ಕೆ ಚಾಲನೆ ನೀಡಿ, ದೇಹದ ಅಗತ್ಯಗಳಿಗೆ ತಕ್ಕಂತೆ ಔಷಧಿ ಕೊಡುವ ಪದ್ಧತಿ, ಮೂಲ ಜ್ಞಾನವನ್ನು ಗೌಪ್ಯವಾಗಿಡುವುದು ಇತ್ಯಾದಿ ಕಾರಣಗಳಿಂದ ಪಾರಂಪರಿಕ ವೈದ್ಯಪದ್ಧತಿಗಳು ಕಣ್ಮರೆಯಾಗುತ್ತಿವೆ. ಜಾಗತೀಕರಣದ ಸಂದರ್ಭದಲ್ಲಿ ಪಾರಂಪರಿಕ ವೈದ್ಯ ಪದ್ಧತಿಗಳನ್ನು ಪೋಷಿಸುವ ಅಗತ್ಯವಿದೆ ಎಂದರು.
ಮೌಲ್ಯಮಾಪನ ಕುಲಸಚಿವ ಪ್ರೊ ಸ.ಚಿ. ರಮೇಶ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಜನಪದ ವೈದ್ಯ ಅನುಭವ ಜನ್ಯ. ಮೂಲ ನಾಟಿವೈದ್ಯ ಪದ್ಧತಿಯನ್ನು ಮುಂದುವರಿಸಿರುವ ಶಿವಣ್ಣಗೌಡರ ಕಾರ್ಯ ಶ್ಲಾಘನೀಯ ಎಂದರು.
ಎಂ.ಬಿ. ಶಿವಣ್ಣಗೌಡ ಅವರ ಪುತ್ರ ಶ್ರೀಕಾಂತ ಉಪಸ್ಥಿತರಿದ್ದು, ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಶಿವಣ್ಣಗೌಡರನ್ನು ಸನ್ಮಾನಿಸಲಾಯಿತು. ಕೆ.ಎಲ್. ಲಕ್ಷ್ಮಣ ಪ್ರಾರ್ಥಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ಡಾ ಭಾರತಿ ಮರವಂತೆ ನಿರೂಪಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ವಿಜಯಲಕ್ಷ್ಮೀ ಗೇಟಿಯವರ ವಂದಿಸಿದರು.
ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ ಎಂ. ಚಂದ್ರ ಪೂಜಾರಿ, ಸಹಾಯಕ ಕಾರ್ಯಪಾಲಕ ಅಭಿಯಂತ ಚಂದ್ರು, ಸಂದರ್ಶಕ ಪ್ರಾಧ್ಯಾಪಕ ಡಾ ಕೆ. ಕಮಲಾಕ್ಷ, ಡಾ ಶ್ರೀಶೈಲ ಹುದ್ದಾರ, ರಂಭಾಪುರಿ ಕಾಲೇಜು ಆಡಳಿತಾಧಿಕಾರಿ ವಿಶ್ವನಾಥ ಕಂಬಾಳಿಮಠ, ಕಸಾಪ ಅಧ್ಯಕ್ಷ ಬಸವರಾಜ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

