ಕರ್ನಾಟಕ ಪದವೀಧರರ ಒಕ್ಕೂಟ ಅಸ್ತಿತ್ವಕ್ಕೆ
ಹಾನಗಲ್ಲ: ಪದವೀಧರರು ಹಾಗೂ ಪದವೀಧರರಲ್ಲದವರನ್ನು ಜಾತಿ, ಪಕ್ಷಾತೀತವಾಗಿ ಒಗ್ಗೂಡಿಸುವುದರೊಂದಿಗೆ ಬದುಕನ್ನು ಸುಂದರಗೊಳಿಸುವ ಅಖಿಲ ಕರ್ನಾಟಕ ಪದವೀಧರರ ಒಕ್ಕೂಟ ರಚಿಸಲಾಗಿದ್ದು, ನವೆಂಬರನಲ್ಲಿ ರಾಜ್ಯ ಘಟಕದ ಉದ್ಘಾಟನೆ ಹುಬ್ಬಳ್ಳಿಯಲ್ಲಿ ಜರುಗಲಿದೆ. ಹಿರಿಯ ಸಾಹಿತಿಗಳು, ಚಿಂತಕರ ಸಮ್ಮುಖದಲ್ಲಿ ನಡೆಯಸುವುದಲ್ಲದೆ, ಇದಕ್ಕೂ ಮೊದಲು ಒಂದು ಲಕ್ಷ ಸದಸ್ಯತ್ವ ಮಾಡಲಾಗುವುದು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಟಿ. ಈಶ್ವರ ಪ್ರಕಟಿಸಿದರು.
ಭಾನುವಾರ ಹಾನಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಮನು ಬಳಿಗಾರ, ಪಾಟೀಲ ಪುಟ್ಟಪ್ಪ ಸೇರಿದಂತೆ ರಾಜ್ಯದ ಹಿರಿಯ ಸಾಹಿತಿಗಳು ಚಿಂತಕರ ಮಾರ್ಗದರ್ಶನದಲ್ಲಿ ಈ ಒಕ್ಕೂಟ ರಚಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ರಾಜ್ಯಾದ್ಯಂತ ಸದಸ್ಯತ್ವ ಆರಂಭವಾಗಿದೆ. ನವೆಂಬರ ಅಂತ್ಯದೊಳಗೆ ಲಕ್ಷ ಸದಸ್ಯತ್ವ ಮಾಡಲಾಗುವುದು. ಇದು ಜಾತಿ ಪಕ್ಷಾತೀತ ಸಂಘಟನೆಯಾಗಿದೆ. ಪದವೀಧರರ ಹಿತ ಕಾಯುವುದೇ ಇದರ ಮುಖ್ಯ ಉದ್ದೇಶ. ಯುವಕರು, ಪದವೀಧರರು, ನೌಕರರು, ನಿರುದ್ಯೋಗಿಗಳಿಗೆ ಭದ್ರತೆ ನೀಡುವುದು ಇದರ ಗುರಿ. ಒಂದು ಕೌಟುಂಬಿಕ ಮೌಲ್ಯದಲ್ಲಿ ಬದುಕುವ ಇಚ್ಛಾಶಕ್ತಿಯನ್ನು ಯುವ ಸಮುದಾಯದಲ್ಲಿ ತುಂಬಬೇಕಾಗಿದೆ ಎಂದರು.
ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಕೃಷಿಕರು, ಯುವಕರು, ಮಹಿಳೆಯರು, ಸ್ವಯಂ ಉದ್ಯೋಗಿಗಳಿಗೆ ಉಚಿತ ತರಬೇತಿ ಹಾಗೂ ಉದ್ಯೋಗ ಮಾರ್ಗದರ್ಶನ ನೀಡಲಾಗುತ್ತದೆ. ಇದಕ್ಕಾಗಿ ಒಂದು ಕಾರ್ಯಪಡೆಯನ್ನೇ ಸಿದ್ಧಪಡಿಸಲಾಗುತ್ತಿದ್ದು, ರಾಜ್ಯದ ಹಿರಿಯ ಉದ್ಯೋಗಪತಿಗಳು, ನಿವೃತ್ತ ಆಧಿಕಾರಿಗಳು, ಚಿಂತಕರ ಮಾರ್ಗದರ್ಶನ ಪಡೆಯಲಾಗುತ್ತಿದೆ ಎಂದರು.
ಈಗ ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸದಸ್ಯತ್ವ ಆರಂಭಿಸಿ ಸಮಿತಿಗಳನ್ನು ರಚಿಸುವ ಸಿದ್ಧತೆ ಆರಂಭವಾಗಿದೆ. ಸದಸ್ಯತ್ವಕ್ಕೆ ಯಾವುದೇ ಶುಲ್ಕವಿಲ್ಲ. ಆದರೆ, ಸ್ವಯಂ ಇಚ್ಛೆ ಹಾಗೂ ಸದುದ್ದೇಶಕ್ಕಾಗಿ ಈ ಒಕ್ಕೂಟದ ಸದಸ್ಯರಾಗಲು ಅವಕಾಶವಿದೆ. ಇದರೊಂದಿಗೆ ಪದವೀಧರರಲ್ಲದವರೂ ಈ ಒಕ್ಕೂಟದ ಸಹ ಸದಸ್ಯತ್ವ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ರಾಜು ಹಿರೇಮಠ, ನ್ಯಾಯವಾದಿ ಜಿ.ವಿ. ಕಂಬಾಳಿಮಠ, ಪಾಂಡುರಂಗ ಪಾಟೀಲ, ಪರಶುರಾಮ ಡೂಗನವರ, ಹಾಶಂಪೀರ ಇನಾಮದಾರ, ಸುರೇಶ ದೊಡ್ಡಕುರುಬರ, ಗಿರೀಶಗೌಡ ಪಾಟೀಲ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

