ಗದಗ-ಹಾವೇರಿ ಲೋಕಸಭಾ ಕ್ಷೇತ್ರವೆಂದು ಘೋಷಿಸಿ
ಗದಗ: ಕುಲದೀಪಸಿಂಗ್ ವರದಿ ಪ್ರಕಾರ ಹಾವೇರಿ ಲೋಕಸಭಾ ಕ್ಷೇತ್ರ ರಚನೆಗೊಂಡಿದ್ದು, ಗದಗ-ಹಾವೇರಿ ಲೋಕಸಭಾ ಕ್ಷೇತ್ರವೆಂದು ಅಧಿಕೃತ ಘೋಷಿಸುವಂತೆ ಆಗ್ರಹಿಸಿ ಗದಗ, ಬೆಟಗೇರಿ ಕನ್ಯಾಳ ಅಗಸಿ ಓಣಿಯ ಸಾರ್ವಜನಿಕರು ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಗದಗ, ಬೆಟಗೇರಿ ಅವಳಿ ನಗರ ಮತ್ತು ಗದಗ ಜಿಲ್ಲೆ ಐತಿಹಾಸಿಕ, ಸಾಂಸ್ಕೃತಿಕವಾಗಿ ಮಹತ್ವ ಹೊಂದಿದೆ. ಆದರೆ ಈ ಹಿಂದೆಯೂ ಈಗಲೂ ರಾಜಕೀಯದಲ್ಲಿ ತನ್ನ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಎಲ್ಲವೂ ಹುಬ್ಬಳ್ಳಿ-ಧಾರವಾಡಕ್ಕೆ ಮಾತ್ರ ಸೀಮಿತವಾಗಿದ್ದು, ಗದಗ ಗುಲಾಮವಾಗಿತ್ತು. ಈ ಹಿಂದೆ ಧಾರವಾಡ ಉತ್ತರಕ್ಕೆ ಇದ್ದ ಗದಗ, ನರಗುಂದ, ರೋಣ ಬಾಗಲಕೋಟೆ ಕ್ಷೇತ್ರಕ್ಕೆ, ಮುಂಡರಗಿ ಕೊಪ್ಪಳ ಕ್ಷೇತ್ರಕ್ಕೆ, ಶಿರಹಟ್ಟಿ ಧಾರವಾಡ ದಕ್ಷಿಣಕ್ಕೆ ಹರಿದು ಹೋದ ಕಾರಣ ಗದಗ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಣದೇ ವಂಚಿತ ಪ್ರದೇಶವಾಗಿ ಹಿಂದುಳಿಯುತ್ತಾ ಬಂದಿದೆ. ಈ ಬಾರಿ ಚುನಾವಣೆ ಮುಗಿಯುವ ಮುಂಚೆ ಅಥವಾ ನಂತರದಲ್ಲಿ ಗದಗ ಜಿಲ್ಲೆಯ ಜನರ ಭಾವನೆಗೆ ಸ್ಪಂದಿಸಿ ಮೈಸೂರು-ಮಡಿಕೇರಿ, ಚಿಕ್ಕಮಂಗಳೂರು-ಉಡುಪಿ ಲೋಕಸಭಾ ಕ್ಷೇತ್ರಗಳಂತೆ ಹಾವೇರಿ ಲೋಕಸಭಾ ಕ್ಷೇತ್ರ ಅಧಿಕೃತವಾಗಿ ಗದಗ-ಹಾವೇರಿ ಲೋಕಸಭಾ ಕ್ಷೇತ್ರವೆಂದು ಘೋಷಣೆ ಮಾಡುವಂತೆ ಮನವಿ ನೀಡಿದರು. ಧಾರವಾಡ ನ್ಯಾಯವಾದಿ ಮುಸ್ತಾಕ ಅಲಿ , ಆರ್. ವಿ. ಗಂಜಿ, ಮುತ್ತಣ್ಣ ವನ್ನಾಲ, ನಗರಸಭೆಯ ಮಾಜಿ ಉಪಾಧ್ಯಕ್ಷ ಎಂ. ಜಿ. ಹೊನ್ನಳ್ಳಿ, ಕಾಶೀಮಸಾಬ ಉಮನಾಬಾದಿ, ಶ್ರೀಶೈಲಪ್ಪ ಮುಳ್ಳಾಳ, ಜಂದಿಸಾಬ ಬಳ್ಳಾರಿ, ಮುತ್ತಣ್ಣ ಲಕ್ಕುಂಡಿ, ಎಚ್. ಎಚ್. ಭಜಂತ್ರಿ, ಪರಶುರಾಮ ಭಜಂತ್ರಿ, ಬಸವರಾಜ ಬಣಕಾರ, ಶ್ರೀಶೈಲಪ್ಪ ಬಾಗೂರ, ಎಚ್. ಬಿ. ಬಾಬುನಾಯ್ಕರ ಹಾಗೂ ಕನ್ಯಾಳ ಅಗಸಿ ಓಣಿ ಸಾರ್ವಜನಿಕರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

