ಹಾವೇರಿ

ಬಿಜೆಪಿಯಿಂದ ಸುಭದ್ರತೆ ಸಾಧ್ಯ

Published On :

ಮುಂಡರಗಿ: ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು, ದೀನ-ದಲಿತರ, ಹಿಂದುಳಿದವರ, ಬಡವರ ಏಳ್ಗೆಗಾಗಿ ಕಳೆದ 40-50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುವ ಕಾಂಗ್ರೆಸ್‌ನಿಂದ ಮಾತ್ರ ಸುಭದ್ರ ಸರ್ಕಾರ ರಚಿಸಲು  ಸಾಧ್ಯ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ  ಹೇಳಿದರು.
ಅವರು ಗುರುವಾರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು. ಜನತೆಗೆ ಬಿಜೆಪಿಯವರ ಬಣ್ಣ ಗೊತ್ತಾಗಿದ್ದು, ಏ. 17ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂಅಹ್ಮದ್‌ಗೆ ಮತ ನೀಡಲಿದ್ದಾರೆ ಎಂದರು.
ಗದಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೊಟ್ರೇಶ್ ಅಂಗಡಿ ಮಾತನಾಡಿದರು. ರವೀಂದ್ರ ಉಪ್ಪಿನ ಬೆಟಗೇರಿ, ದೃವಕುಮಾರ ಹೊಸಮನಿ, ಎಂ.ಜಿ. ವಡ್ಡಟ್ಟಿ, ರಾಮು ಕಲಾಲ್, ಎಸ್.ಡಿ. ಮಕಾಂದಾರ, ಸೊಲಬಣ್ಣ ಜೋಬಾಳಿ, ರಾಮಣ್ಣ ಬಳ್ಳಾರಿ, ಫಕ್ರುದ್ದೀನ್ ಹಾರೋಗೇರಿ, ಚಂದ್ರಶೇಖರ ಬಡಿಗೇರಿ, ಬಸವರಾಜ ರಾಮೇನಹಳ್ಳಿ, ರಾಮು ಭಜಂತ್ರಿ, ಪಾಲಾಕ್ಷಿ ಗಣದಿನ್ನಿ, ಲಿಂಗರಾಜಗೌಡ ಪಾಟೀಲ, ಅಬ್ದುಲ್ ಖುರೇಶಿ, ಸೋಮನಗೌಡ ಗೌಡ್ರ, ಶೇಖರಾಜ ಹೊಸಮನಿ, ಡಿ.ಡಿ. ಮೋರನಾಳ, ಗ್ಯಾಣಪ್ಪ ಶೀರಿ, ರಾಘವೇಂದ್ರ ಕುರಿಯವರ, ವೀರೇಶ ಸಜ್ಜನರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.