ನರೇಂದ್ರ ಮೋದಿಗೆ ಅಧಿಕಾರ ವ್ಯಾಮೋಹ
ಹಾವೇರಿ: ನರೇಂದ್ರ ಮೋದಿ ತ್ಯಾಗಿಯಲ್ಲ, ವ್ಯಾಮೋಹಿ. ಬಿಜೆಪಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ ಲೋಕಸಭೆ ಚುನಾವಣಾ ಕಣಕ್ಕಿಳಿಸಿದರೂ ಗುಜರಾತ್ನ ಮುಖ್ಯಮಂತ್ರಿ ಸ್ಥಾನವನ್ನು ಬೇರೆಯವರಿಗೆ ಅವರು ಬಿಟ್ಟುಕೊಟ್ಟಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯಾಗುವ ಅವಕಾಶವಿದ್ದರೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬೇರೆಯವರಿಗೆ ತ್ಯಾಗ ಮಾಡಿದರು. ತ್ಯಾಗದ ಸಂಸ್ಕೃತಿ ಕಾಂಗ್ರೆಸ್ನಲ್ಲಿದೆ. ರಾಹುಲ್ ಗಾಂಧಿ ಅವರು ಅಸ್ಪ್ರಶ್ಯರ, ಬುಡಕಟ್ಟು ಜನಾಂಗದವರ, ರೈತರ, ಕಾರ್ಮಿಕರ ಜತೆ ಸಂವಾದ ನಡೆಸಿ, ಅವರೊಂದಿಗಿದ್ದು ಅವರ ಕಷ್ಟ, ಸಂಕಷ್ಟ ಆಲಿಸಿದ್ದಾರೆ. ಆದರೆ ಮೋದಿ ಒಮ್ಮೆಯೂ ರೈತರೊಂದಿಗೆ, ಶ್ರಮಿಕರೊಂದಿಗೆ ಮಾತನಾಡಿಲ್ಲ ಎಂದರು.
ಬಿಜೆಪಿ ಒಡೆದಾಳುವ ನೀತಿ ಅನುಸರಿಸುತ್ತದೆ. ಕಾಂಗ್ರೆಸ್ ಒಗ್ಗೂಡಿಸುವ ನೀತಿ ಅಳವಡಿಸಿಕೊಂಡಿದೆ. ಹಾಗಾಗಿ ದೇಶದ ಸಮಗ್ರತೆ, ಏಕತೆ, ಎಲ್ಲ ಜನಾಂಗದ ಸುರಕ್ಷತೆಗಾಗಿ ದೇಶದಲ್ಲಿ ಕಾಂಗ್ರೆಸ್ ಆಡಳಿತ ಇರಬೇಕು. ರಾಜ್ಯದಲ್ಲಿ ಜನ ಬಿಜೆಪಿಗೆ ಒಮ್ಮೆ ಅವಕಾಶ ಕೊಟ್ಟರು. ಆಗ ಅವರು ಅಭಿವೃದ್ಧಿ ಮರೆತು ಭ್ರಷ್ಟಾಚಾರ ನಡೆಸಲು ಪೈಪೋಟಿ ನಡೆಸಿದರು. ಇದರ ಫಲವಾಗಿ ಈಗ ಕೆಲವರು ಜೈಲಿನಲ್ಲೇ ಇದ್ದರೆ, ಕೆಲವರು ಬೇಲ್ನಲ್ಲಿದ್ದಾರೆ ಎಂದರು.
ಶಾಸಕ ರುದ್ರಪ್ಪ ಲಮಾಣಿ, ಕೆಪಿಸಿಸಿ ಸದಸ್ಯ ಮೊಹಸೀನ್ ಪಾಶಾ, ಎಐಸಿಸಿ ಪ್ರತಿನಿಧಿ ಕಮಲಕಾಂತ ಶರ್ಮಾ, ಚಲನಚಿತ್ರ ನಟ ಟೆನ್ನಿಸ್ ಕೃಷ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

