ಪಂಚಮಸಾಲಿ ಸಮಾಜ ಬಿಜೆಪಿ ಬೆಂಬಲಿಸಿದೆ
ಶಿಗ್ಗಾಂವಿ: ರಾಜ್ಯದಲ್ಲಿ ಪಂಚಮಸಾಲಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಮಾಜದ ಉದ್ದಾರಕ್ಕಾಗಿ ಹೊರತು, ರಾಜಕೀಯ ಮಾಡಲು ಅಲ್ಲಾ. ಇದನ್ನು ಮರೆತಿರುವ ಸಂಘದ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರ ಸ್ವಾರ್ಥಕ್ಕಾಗಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದನ್ನು ಪಂಚಮಸಾಲಿ ಸಮಾಜ ಒಪ್ಪಿಲ್ಲ. ಜಾತ್ಯತೀತವಾಗಿ ಬಿಜೆಪಿ ಬೆಂಬಲಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಪಂಚಮಸಾಲಿ ಮುಖಂಡ ಸೋಮಣ್ಣ ಬೇವಿನಮರದ ಸ್ಪಷ್ಟಪಡಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘದ ಸ್ಥಾಪನೆ ಸಂದರ್ಭದಲ್ಲಿ ಸಂಘದ ಸಂಘಟನೆ ನೇತೃತ್ವ ವಹಿಸಿಕೊಂಡವರು ರಾಜಕೀಯಕ್ಕಿಳಿಯಬಾರದು. ಕೇವಲ ಸಮಾಜದ ಬಲವರ್ಧನೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂಬ ನಿರ್ಣಯವನ್ನು ರಾಜ್ಯದ ಸಮಾಜದ ಹಿರಿಯರ ಮುಖಂಡರ ಸಮ್ಮುಖದಲ್ಲಿ ನಿರ್ಧಾರ ಕೈಗೊಂಡಿದ್ದನ್ನು ದಿಂಡೂರ ಸ್ಮರಿಸಿಕೊಂಡು ಸದ್ಯ ನಡೆಸಿರುವ ಸ್ವಾರ್ಥ ರಾಜಕಾರಣ ಕೈಬಿಡಲಿ. ಸಂಘದ ತತ್ವ-ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು, ವೈಯಕ್ತಿಕ ಹಿತಕ್ಕಾಗಿ ಸಂಘದ ಹೆಸರಿನಲ್ಲಿ ಸಮಾಜ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಮಾಜದ ಮುಖಂಡರಾದ ಎಸ್.ಕೆ. ಅಕ್ಕಿ, ಪ್ರೇಮಾ ಪಾಟೀಲ, ಜಿಪಂ ಸದಸ್ಯ ಸಿ.ಎಸ್. ಪಾಟೀಲ, ಪುರಸಭೆ ಸದಸ್ಯ ಭರಮಜ್ಜ ನವಲಗುಂದ, ಗಂಗಾಧರ ಸಾತಣ್ಣನವರ, ಆರ್.ಎಸ್. ಪಾಟೀಲ, ಫಕ್ಕೀರಜ್ಜ ಯಲಿಗಾರ, ವಿರೂಪಾಕ್ಷಪ್ಪ ವಿಜಾಪುರ, ತಾಪಂ ಸದಸ್ಯ ವೀರನಗೌಡ್ರ ಪಾಟೀಲ, ನಿಂಗಪ್ಪ ಜವಳಿ, ಭರಮಗೌಡ್ರ ಪಾಟೀಲ, ಮಂಜುನಾಥ ಯಲಿಗಾರ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

