ಹಾವೇರಿ

ಶಾಂತಿಯುತ ಮತದಾನಕ್ಕೆ ಎಲ್ಲ ವ್ಯವಸ್ಥೆ

Published On :

ರಾಣಿಬೆನ್ನೂರು:  ಏ. 17 ಶಾಂತಿಯುತ ಮತದಾನಕ್ಕಾಗಿ ಎಲ್ಲ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಹನುಮಂತಪ್ಪ ಬಡಿದಾಳ ತಿಳಿಸಿದರು.
ನಗರದ ಹೊರ ಭಾಗದಲ್ಲಿರುವ ರೋಟರಿ ಶಾಲೆಯಲ್ಲಿ ರಾಣಿಬೆನ್ನೂರು ವಿಧಾನ ಸಭಾ ಮತಕ್ಷೇತ್ರದ ಗ್ರಾಮಗಳಿಗೆ ತೆರಳುವ ಮತಗಟ್ಟೆ ಸಿಬ್ಬಂದಿಗೆ ಸಾಮಗ್ರಿಗಳನ್ನು ವಿತರಿಸಿದ ನಂತರ ಮಾತನಾಡಿದರು. ತಾಲೂಕಿನಲ್ಲಿ ಒಟ್ಟು 246 ಹಾಗೂ ಬ್ಯಾಡಗಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ 9 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 25 ಹಳ್ಳಿಗಳಲ್ಲಿ 52 ಮತಗಟ್ಟೆಗಳು ಸೇರಿದಂತೆ 298 ಮತಗಟ್ಟೆಗಳನ್ನು ತೆರೆಯಲಾಗಿದೆ. ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರಗಳಲ್ಲಿ 24 ಅತಿಸೂಕ್ಷ್ಮ, 48 ಸೂಕ್ಷ್ಮ, 174 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಿ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ಒಟ್ಟು 3 ಸ್ಥಳಗಳಲ್ಲಿ ವಾಹನ ತಪಾಸಣಾ ಕೇಂದ್ರಗಳನ್ನು ಪ್ರಾರಂಭಿಸಿ ಸಿಬ್ಬಂದಿ ನೇಮಿಸಲಾಗಿದೆ. ಚುನಾವಣೆಯಲ್ಲಿ ಮತದಾರರ ಅನುಕೂಲಕ್ಕಾಗಿ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 246 ಮತಗಟ್ಟೆಗಳನ್ನು, ನಗರ ಪ್ರದೇಶದಲ್ಲಿ 77 ಮತಗಟ್ಟೆಗಳನ್ನು ಪ್ರಾರಂಭಿಸಿದ್ದು, 1086 ಮತಗಟ್ಟೆ ಸಿಬ್ಬಂದಿ ನೇಮಿಸಲಾಗಿದೆ. 19 ಸೆಕ್ಟರ್ ಆಪೀಸರ್‌ಗಳನ್ನು ನೇಮಿಸಿರುವುದಾಗಿ ತಿಳಿಸಿದರು. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸುವುದಕ್ಕಾಗಿ 1 ಡಿವೈಎಸ್ಪಿ, 2 ಸಿಪಿಐ,7 ಪಿಎಸ್‌ಐ,7 ಎಎಸ್‌ಐ,30 ಪ್ಯಾರಾಮಿಲಿಟರಿ ಸಿಬ್ಬಂದಿ, 60 ಐಆರ್‌ಬಿ, 70 ಹೊಂಗಾರ್ಡ್ಸ್‌ಗಳನ್ನು ನೇಮಿಸಿರುವುದಾಗಿ ಗ್ರಾಮೀಣ ಸಿಪಿಐ ಜಿ. ಲೋಕೇಶ, ನಗರ ಸಿಪಿಐ ರವಿಂದ್ರ ಕುರುಬಗಟ್ಟಿ ತಿಳಿಸಿದರು.
ಬ್ಯಾಡಗಿ: ಮತಗಟ್ಟೆಯತ್ತ ಸಿಬ್ಬಂದಿ
ಬ್ಯಾಡಗಿ: ಗುರುವಾರ ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಸೇಂಟ್ ವಿಯೆನ್ನಾ ಪ್ರೌಢಶಾಲೆ ಆವರಣದಿಂದ ವಿದ್ಯುನ್ಮಾನ ಮತಯಂತ್ರದೊಂದಿಗೆ ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಿದರು.
ಸಹಾಯಕ ಚುನಾವಣಾಧಿಕಾರಿ ಡಾ. ರಾಜಣ್ಣ ಮತ್ತು ತಹಶೀಲ್ದಾರ ಶಿವಶಂಕರ ನಾಯಕ್ ಬುಧವಾರ ಮಸ್ಟರಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು.  ಒಟ್ಟು 230 ಮತಗಟ್ಟೆಗಳಿದ್ದು, 87 ಸಾಮಾನ್ಯ, 68 ಸೂಕ್ಷ್ಮ, 62 ಅತೀಸೂಕ್ಷ್ಮ ಹಾಗೂ 13 ಪರ್ದಾನಿಶಾನ್ ಮತಗಟ್ಟೆಗಳೆಂದು ಗುರ್ತಿಸಲಾಗಿದೆ.
ಬಂದೋಬಸ್ತ್: ಪೊಲೀಸ್, ಜಿಲ್ಲಾ ಸಶಸ್ತ್ರ ಹಾಗೂ ಕೇಂದ್ರ ಮೀಸಲು ಪಡೆ ಸೇರಿದಂತೆ 324 ಸಿಬ್ಬಂದಿ ನಿಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.