ಕುಡಿವ ನೀರು ಯೋಜನೆ ತ್ವರಿತಗೊಳಿಸಿ: ಕರವೇ
ಬ್ಯಾಡಗಿ: ಮಂದಗತಿಯಲ್ಲಿ ಸಾಗಿರುವ 24್ಢ7 ಕುಡಿಯುವ ನೀರಿನ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ, ಪಟ್ಟಣದ ಜನರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಚಂದ್ರಶೇಖರ ಛತ್ರದ ಮಾತನಾಡಿ, ಪಟ್ಟಣದ ಶೇ. 70ಕ್ಕೂ ಹೆಚ್ಚು ಜನರಿಗೆ ಕೊಳವೆ ಬಾವಿಗಳಿಂದ ನೀರು ಪೂರೈಸುತ್ತಿದ್ದು, ಇದರಲ್ಲಿ ಫ್ಲೋರೈಡ್ ಅಂಶಗಳು ಹೆಚ್ಚಾಗಿವೆ. ಈ ನೀರು ಕುಡಿದ ಜನರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಭೂಮಿಯಲ್ಲಿ 600 ಅಡಿ ಆಳದಿಂದ ನೀರು ತೆಗೆಯಲಾಗುತ್ತಿದೆ. ಇದು ಕುಡಿಯಲು ಯೋಗ್ಯವಲ್ಲ. ಆದರೆ, ಇದನ್ನೇ ಸಾರ್ವಜನಿಕರಿಗೆ ವಿತರಿಸುತ್ತಿರುವುದು ಸರಿಯಲ್ಲ ಎಂದರು.ಮಂಜುನಾಥ ಶಿರಾಳಕೊಪ್ಪ ಮಾತನಾಡಿ, ಮುದೇನೂರ ಗ್ರಾಮದಿಂದ ಪಟ್ಟಣಕ್ಕೆ ನೀರು ತರುವ ಜಲಮಂಡಳಿ, 24್ಢ7 ಕುಡಿಯುವ ನೀರಿನ ಯೋಜನೆಯಡಿ ಶೀತಲೀಕರಣ ಘಟಕದ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಆಗ್ರಹಿಸಿದರು. ಬಸವರಾಜ ಹಾವನೂರ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿಗಳ ಪರವಾಗಿ ಕಂದಾಯ ನಿರೀಕ್ಷಕ ವಿರೂಪಾಕ್ಷ ಪೂಜಾರ ಮನವಿ ಸ್ವೀಕರಿಸಿದರು. ಅಲಿ ಬಳ್ಳಾರಿ, ಸುನೀಲ ಉಜನಿ, ಮಂಜುನಾಥ ಕುಮ್ಮೂರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

