ಜನಪದ ಸಂಸ್ಕೃತಿ ಪುನರುತ್ಥಾನವಾಗಲಿ
ಹಾನಗಲ್ಲ: ವಾಸ್ತವ ಉಸಿರುಗಟ್ಟಿ, ಉಪಭೋಗ ಸಂಸ್ಕೃತಿ ಮಾರಕ ನೆಲೆ ತಲುಪಿ, ಚಳವಳಿಗಳಿಗೆ ಕೀವು ತುಂಬಿದ ಕಾಲದ ಹೊಸ್ತಿಲಲ್ಲಿರುವ ಮನುಷ್ಯನಿಗೆ ಜನಪದ ಸಂಸ್ಕೃತಿಯ ಪುನರುತ್ಥಾನದ ಮೂಲಕ ಆನಂದ ಅರಸಿ ಬದುಕುವುದು ಬೇಕಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ, ಸಾಹಿತಿ ಮಾರುತಿ ಶಿಡ್ಲಾಪುರ ಹೇಳಿದರು.
ಹಾನಗಲ್ಲ ತಾಲೂಕಿನ ಯಳವಟ್ಟಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ ಮೂರು ದಿನಗಳ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಬದುಕಿನಲ್ಲಿ ನಾಗರೀಕತೆಯ ಅತ್ಯುನ್ನತ ಜೀವನಾಂಶಗಳಿವೆ. ಗ್ರಾಮಗಳು ಅನೇಕ ಕಾರಣಕ್ಕೆ ತಿರಸ್ಕಾರಕ್ಕೊಳಗಾಗಿ ಅಲ್ಲಿನ ಜೀವನ್ಮುಖಿ ಜೀವನ ವಿಧಾನಗಳು ಮಾಯವಾಗುತ್ತಿವೆ. ಮನುಷ್ಯನಲ್ಲಿನ ಒಂದು ಕ್ಷಣದ ತಪ್ಪು ನಿರ್ಣಯ ಬದುಕನ್ನೇ ಧ್ವಂಸಗೊಳಿಸುವುದೆಂಬ ಎಚ್ಚರಿಕೆ ಈಗ ಸಮಾಜಕ್ಕೆ ಬೇಕಾಗಿದೆ. ದುಷ್ಟ ನುಡಿಗಳು ವಿಷವನ್ನೇ ಉತ್ಪಾದಿಸುತ್ತವೆ. ಕಣ್ಣಿನಂತೆ ಗುರಿ, ಕಾಲಿನಂತೆ ದಾರಿ ಎಂಬಂತೆ ಉತ್ತಮ ವಿಚಾರ ಆಚಾರಗಳತ್ತ ನಡೆಯಬೇಕಾಗಿದೆ. ಶಿಬಿರಗಳು ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸಬೇಕು ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್ ನಿರ್ದೇಶಕ ಗುರುಸಿದ್ಧಪ್ಪ ಕೊಂಡೋಜಿ ಶಿಬಿರಗಳಲ್ಲಿ ಬದುಕಿಗಾಗಿ ಬೇಕಾಗುವ ಒಳಿತುಗಳನ್ನು ಕಲಿಯಬೇಕು. ಒಟ್ಟಾಗಿ ಬದುಕುವುದರಲ್ಲಿ ಸಂತೋಷವಿದೆ. ನಮ್ಮೊಳಗಿನ ಕೊಳೆ ಕಳೆದು, ಭಾವ ಮನಸ್ಸಿನಲ್ಲಿ ಒಳ್ಳೆಯದನ್ನು ಜಾಗೃತಗೊಳಿಸಿಕೊಳ್ಳಬೇಕು. ಪೌರತ್ವ ಶಿಬಿರವೂ ಶಿಕ್ಷಣದ ಒಂದು ಭಾಗ ಎಂದರು. ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಪ್ರಾಚಾರ್ಯ ಓ.ಬಿ. ರಾಘವೇಂದ್ರ ಮಾತನಾಡಿರು.
ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎನ್. ಸದಾಶಿವಪ್ಪ ಶಿಬಿರಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪತ್ರಕರ್ತ ಮಂಜುನಾಥ ಬಡಿಗೇರ, ಶಿಬಿರಾಧಿಕಾರಿ ಆರ್. ದಿನೇಶ, ಶಿಬಿರದ ಸಹನಿರ್ದೇಶಕ ಮಹೇಶ ಅಕ್ಕಿವಳ್ಳಿ, ಕಾರ್ಯದರ್ಶಿ ಹನುಮಂತಪ್ಪ ಹೈಬತ್ತಿ, ಅಶ್ವಿನಿ ತಿಮ್ಮಾಪುರ, ಉಪನ್ಯಾಸಕ ಎಂ.ಬಿ.ನಾಯಕ, ವಿಶ್ವನಾಥ ಬೋಂದಾಡೆ, ಟಿ. ಹರೀಶ, ರಾಘವೇಂದ್ರ ಮಾಡಳ್ಳಿ, ಪ್ರಕಾಶ ಹುಲ್ಲೂರ, ಬಿ.ಎಸ್. ರುದ್ರೇಶ, ಜಿ.ವಿ. ಪ್ರಕಾಶ, ಜಿತೇಂದ್ರ ಜಿ.ಟಿ, ವೆಂಕಟೇಶ ಪೂಜಾರ, ಎಫ್.ಬಿ. ಈಳಿಗೇರ ಪಾಲ್ಗೊಂಡಿದ್ದರು. ಶಿಭಿರಾಧಿಕಾರಿ ದಿನೇಶ.ಆರ್ ಪ್ರಾಸ್ತಾವಿಕ ಮಾತನಾಡಿದರು. ಶಿಬಿರದ ಪ್ರಧಾನ ಕಾರ್ಯದರ್ಶಿ ಪ್ರೇಮಕಿಶನ್ ಬಳ್ಳಾರಿ ನಿರೂಪಿಸಿದರು. ಪ್ರವೀಣ ತಳವಾರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

