ಹಾವೇರಿ

ಶಿಕ್ಷಣಕ್ಕೆ ಮಾರ್ಗದರ್ಶನ ಅಗತ್ಯ: ಎರಿಕ್ ಸ್ವೀನ್

Published On :

ಹಾವೇರಿ: ಅಮೆರಿಕಾದಲ್ಲಿ ಸರಳ ಹಾಗೂ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ ಲಭ್ಯವಿದ್ದು, ಇದರ ಪ್ರಯೋಜನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಪಡೆದುಕೊಳ್ಳಬೇಕಿದೆ. ತಾಂತ್ರಿಕ ಶಿಕ್ಷಣದ ಉಪಯೋಗದ ಕುರಿತಾಗಿ ಸೂಕ್ತ ಮಾರ್ಗದರ್ಶನ ಮತ್ತು ಮಾಹಿತಿಗಳನ್ನು ಪಡೆದು ಮುನ್ನಡೆದರೆ ಸುಂದರ ಜೀವನ ಬೆಳೆದು ಬರುತ್ತದೆಂದು ಅಮೆರಿಕಾ ರಾಜತಾಂತ್ರಿಕ ಪ್ರತಿನಿಧಿ ಎರಿಕ್ ಎಸ್. ಸ್ವೀನ್ ಅವರು ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಉನ್ನತ ಶಿಕ್ಷಣದ ಪ್ರಾಮುಖ್ಯತೆ ಕುರಿತು ಮಾಹಿತಿ ವಿಷಯದ ಮೇಲೆ ಜರುಗಿದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಅಮೆರಿಕಾದಲ್ಲಿ ಶಿಕ್ಷಣ ಬಯಸುವ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅಲ್ಲಿ ಕೊಡ ಮಾಡುವ ವಿಶೇಷ ವಿದ್ಯಾರ್ಥಿ ಸವಲತ್ತುಗಳಾದ ವಿದ್ಯಾರ್ಥಿ ವೇತನ, ಶಿಕ್ಷಣದ ಪದ್ಧತಿಯಲ್ಲಿನ ಸಡಿಲಿಕೆ ಮತ್ತು ವಿದೇಶಿ ಪ್ರವಾಸ ಅನುಮತಿ (ವೀಸಾ) ಪತ್ರ ಪಡೆಯುವ ಕುರಿತಾದ ಹಲವು ಮಾಹಿತಿಗಳನ್ನು ನೀಡಿದ ಅವರು, ಶಿಕ್ಷಣದ ಮಹತ್ವ ಮತ್ತು ಉನ್ನತೀಕರಣದ ಬಗ್ಗೆ ವಿದ್ಯಾರ್ಥಿಗಳು ಸನ್ನದ್ಧರಾಗುವುದರ ಪ್ರಕ್ರಿಯೆಗಳನ್ನು ವಿವಿಧ ವಿಭಾಗಗಳ ಉದಾಹರಣೆಗಳೊಂದಿಗೆ ವಿವರಿಸಿದರು. ಚೆನ್ನೈ ಮೂಲದ ವಿದ್ಯಾ ಏಲ್ವಿನ್, ಪ್ರೊ. ಎನ್.ವಿ. ಕಂಬಾಳಿಮಠ, ಎಂಕಾಂ ಸಂಯೋಜಕರಾದ ಡಾ. ಎಸ್.ಎಸ್. ಹಲಗೇರಿ, ಬಿಸಿಎ ಪ್ರಾಚಾರ್ಯರಾದ ಪ್ರೊ. ಶ್ವೇತಾ ಮರಿಗೌಡರ ಮೊದಲಾದವರು ಭಾಗವಹಿಸಿದ್ದರು. ಡಾ. ಎಸ್.ಕೆ. ನಾಶಿ ಸ್ವಾಗತಿಸಿದರು. ಪ್ರೊ. ಡಿ.ಎ. ಕೊಲ್ಲಾಪುರೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.