ಸಿಂಡಿಕೇಟ್ ಬ್ಯಾಂಕಿನಿಂದ ರು. 1 ಕೋಟಿ ದರೋಡೆ
ಹಾನಗಲ್ಲ: ಭದ್ರತಾ ಲೋಪ ಬಳಸಿಕೊಂಡು ಹಾನಗಲ್ಲ ತಾಲೂಕಿನ ಮಾಸನಕಟ್ಟಿ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ದರೋಡೆ ಮಾಡಿ ರು. 1 ಕೋಟಿ ಅಪಹರಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಹಾನಗಲ್ಲಿನಿಂದ 18 ಕಿ.ಮೀ. ದೂರದಲ್ಲಿರುವ ಬಂಕಾಪುರ ಮಾರ್ಗದ ಮಾಸನಕಟ್ಟಿ ಗ್ರಾಮದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ಶುಕ್ರವಾರ ತಡರಾತ್ರಿ ದಾಳಿ ನಡೆಸಿದ ದರೋಡೆಕೋರರು ನಗದು, ಬಂಗಾರ ಸೇರಿ ರು. 1 ಕೋಟಿಗೂ ಅಧಿಕ ನಗದು ದರೋಡೆ ಮಾಡಿದ್ದಾರೆ. ಈ ಘಟನೆ ಸಿಬ್ಬಂದಿ ಗಮನಕ್ಕೆ ಬಂದಿದ್ದು ಬೆಳಗಿನ ಜಾವ ಬ್ಯಾಂಕಿನ ಮುಂಬಾಗಿಲು ತೆಗೆದಾಗಲೆ. ಬ್ಯಾಂಕಿನಲ್ಲಿ ಸಿಸಿ ಕ್ಯಾಮೆರಾ, ಸೆಕ್ಯುರಿಟಿ ಗಾರ್ಡ್ ಕೂಡಾ ಇರಲಿಲ್ಲ. ಒಟ್ಟಿನಲ್ಲಿ ಸುರಕ್ಷತೆ ಕೊರತೆಯೇ ದರೋಡೆಗೆ ಸುಲಭ ಕಾರಣವಾಗಿದೆ. ಕಿಟಕಿಯ ಸರಳುಗಳನ್ನು ಮುರಿದು ಒಳ ಪ್ರವೇಶಿಸಿ ಭದ್ರತಾ ಕೊಠಡಿಗೆ ಅಳವಡಿಸಿದ ಅಲಾರಾಂ ಸಂಪರ್ಕ ನಿಷ್ಕ್ರಿಯಗೊಳಿಸಿ, ಭದ್ರತಾ ಕೊಠಡಿಯ ಬಾಗಿಲು ಕೊರೆದು ದರೋಡೆ ಮಾಡಲಾಗಿದೆ. ಹೀಗಾಗಿ ಘಟನೆ ಯಾರ ಗಮನಕ್ಕೂ ಬರಲೇ ಇಲ್ಲ. ನಿಪುಣ ದರೋಡೆಕೋರರೆ ಘಟನೆಗೆ ಕಾರಣರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬ್ಯಾಂಕಿನ ಪ್ರಭಾರಿ ಶಾಖಾಧಿಕಾರಿ ನಿತೀಶ ದೂರು ನೀಡಿ ಬಂಗಾರ ಹಾಗೂ ಹಣ ಸೇರಿದಂತೆ ಒಟ್ಟು ರು. 1 ಕೋಟಿಗೂ ಅಧಿಕ ನಗದನ್ನು ದರೋಡೆಕೋರರು ದೋಚಿದ್ದಾಗಿ ತಿಳಿಸಿದ್ದಾರೆ. ಘಟನಾ ಸ್ಥಳವನ್ನು ಶ್ವಾನದಳ ಮೂಲಕ ಪರಿಶೀಲಿಸಲಾಗಿದೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎಸ್‌ಪಿ ಎನ್. ಶಶಿಕುಮಾರ, ಹೆಚ್ಚುವರಿ ಎಸ್‌ಪಿ ಡಿ.ಎಸ್. ಜಗಮಯ್ಯನವರ, ಡಿಎಸ್‌ಪಿ ಬಾಲಚಂದ್ರ ದೊಡ್ಡಮನಿ, ಹಾನಗಲ್ಲ ಸಿಪಿಐ, ತನಿಖಾಧಿಕಾರಿ ಬಿ.ಎಸ್. ಮಂಟೂರ, ಹಾನಗಲ್ಲ ಪಿಎಸ್‌ಐ ಮಹದೇವ ಯಲಿಗಾರ, ಆಡೂರ ಪಿಎಸ್‌ಐ ಕೆ. ಕಾಂತರಾಜು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಸಿಂಡಿಕೇಟ್ ಬ್ಯಾಂಕ್ ಉಪ ಮಹಾಪ್ರಬಂಧಕ ಸ್ಟೀವನ್ ವಾಶ್, ವ್ಯವಸ್ಥಾಪಕ ನಾಗರಾಜ ಕೆಂಗಣ್ಣನವರ ಈ ಸಂದರ್ಭದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

