ಮೂರ್ತಿ ಸ್ಥಾಪನೆ, ಕಟ್ಟಡ ಉದ್ಘಾಟನೆ, ಸಾಮೂಹಿಕ ವಿವಾಹ
ಹಾನಗಲ್ಲ: ಬಮ್ಮನಹಳ್ಳಿ ಗುರುಪಾದೇಶ್ವರ ವಿರಕ್ತಮಠದ ಶಿವಯೋಗೀಶ್ವರ ಸ್ವಾಮಿಗಳ ಪಟ್ಟಾಧಿಕಾರದ 15ನೇ ವರ್ಷಾಚರಣೆ ಅಂಗವಾಗಿ ಫೆ. 4 ಹಾಗೂ 5ರಂದು ಕರ್ತೃ ಗುರುಪಾದೇಶ್ವರ ಶಿವಯೋಗಿಗಳ ಮೂರ್ತಿ ಸ್ಥಾಪನೆ, ಚೌಡೇಶ್ವರಿ ದೇವಿ ಮೂರ್ತಿ ಸ್ಥಾಪನೆ, ಪ್ರಭುಸ್ವಾಮಿಗಳ ಗದ್ದುಗೆ ಕಟ್ಟಡ ಉದ್ಘಾಟನೆ, ವೈರಾಗ್ಯದ ಮಲ್ಲಣಾರ್ಯ ಅತಿಥಿ ಗೃಹ ಉದ್ಘಾಟನೆ, ಕುಮಾರೇಶ್ವರ ಪ್ರಸಾದ ನಿಲಯದ ಉದ್ಘಾಟನೆ, 101 ಜೋಡಿ ಸಾಮೂಹಿಕ ವಿವಾಹಗಳು ನಡೆಯಲಿವೆ. ಹುಬ್ಬಳ್ಳಿ ಮೂರು ಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಲಿವೆ.
ಫೆ. 4ರ ಸಂಜೆ 6 ಗಂಟೆಗೆ ಲಿಂ. ಪ್ರಭುಸ್ವಾಮಿಗಳವರ ಗದ್ದುಗೆ ಕಟ್ಟಡದ ಉದ್ಘಾಟನೆಯನ್ನು ನಿಡಸೋಸಿಯ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮಿಗಳವರು, ವೈರಾಗ್ಯದ ಮಲ್ಲಣಾರ್ಯ ಅತಿಥಿ ಗೃಹದ ಉದ್ಘಾಟನೆಯನ್ನು ಕೋಡಿಮಠದ ಜಗದ್ಗುರು ಶಿವಾನಂದ ಶಿವಯೋಗೀರಾಜೇಂದ್ರ ಸ್ವಾಮಿಗಳು, ನೂತನ ಕುಮಾರೇಶ್ವರ ಪ್ರಸಾದ ನಿಲಯವನ್ನು ಮಾಜಿ ಸಚಿವ ಸಿ.ಎಂ. ಉದಾಸಿ ಉದ್ಘಾಟಿಸುವರು. ಶಿರಹಟ್ಟಿ ಸಂಸ್ಥಾನಮಠದ ಜಗದ್ಗುರು ಫಕೀರಸಿದ್ಧರಾಮ ಸ್ವಾಮಿಗಳು, ಬಬಲಾದಿ ಮಠದ ಗುರುಪಾದ ಸ್ವಾಮಿಗಳವರು ಸಮ್ಮುಖವಹಿಸುವರು. ಸಂಜೆ 6.30 ಗಂಟೆಗೆ ಮುದಗಲ್‌ನ ಮಹಾಂತ ಸ್ವಾಮಿಗಳವರು ಕಳೆದ 20 ದಿನಗಳಿಂದ ನಡೆಸಿದ ಪ್ರಭುಲಿಂಗ ಲೀಲೆ ಪ್ರವಚನ ಮಂಗಲ, ಸದ್ಭಕ್ತರ ಸತ್ಕಾರ ಸಮಾರಂಭ, ತುಲಾಭಾರ, ಸಸಿ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯ ಅತಿಥಿಗಳಾಗಿ ಶಾಸಕ ಮನೋಹರ ತಹಶೀಲ್ದಾರ್, ಸಂಸದರಾದ ಶಿವಕುಮಾರ ಉದಾಸಿ, ಪ್ರಹ್ಲಾದ ಜೋಷಿ, ಶಾಸಕರಾದ ಯು.ಬಿ. ಬಣಕಾರ, ಸೋಮಣ್ಣ ಬೇವಿನಮರದ, ಬಸವರಾಜ ಹೊರಟ್ಟಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡರ, ಮಾಜಿ ಸಂಸದ ಮಂಜುನಾಥ ಕುನ್ನೂರ ಮುಂತಾದವರು ಪಾಲ್ಗೊಳ್ಳುವರು.
ಫೆ. 5ರಂದು ಬೆಳಗ್ಗೆ 10 ಘಂಟೆಗೆ ಹಾನಗಲ್ಲ ಶಾಸಕ ಮನೋಹರ ತಹಶೀಲ್ದಾರ್ ಅವರ ನೇತೃತ್ವ ಹಾಗೂ ಅಧ್ಯಕ್ಷತೆಯಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಸುತ್ತೂರ ಮಠದ ಜಗದ್ಗರು ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು ಸಾನ್ನಿಧ್ಯವಹಿಸುವರು. ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅಧ್ಯಕ್ಷತೆವಹಿಸುವರು. ಶಿರಹಟ್ಟಿಯ ಜಗದ್ಗುರು ಫಕೀರ ಸಿದ್ಧರಾಮಸ್ವಾಮೀಜಿ ನೇತೃತ್ವವಹಿಸುವರು. ಆರ್ಷ ವಿದ್ಯಾಕೇಂದ್ರದ ಪೂಜ್ಯ ಚಿದ್ರೂಪಾನಂದ ಸ್ವಾಮೀಜಿ, ಮುಕ್ತಿಮಠದ ಶಿವಸಿದ್ಧಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿದ್ದಗಂಗಾಮಠದ ಸಿದ್ದಲಿಂಗ ಶಿವಾನಂದ ಸ್ವಾಮೀಜಿ, ಹಾಷ್ಮಿ ಮದರಸಾ ಸಂಸ್ಥಾಪಕ ಸೈಯದ್ ಮಹಮ್ಮದ್ ತನ್ವೀರ ಹಾಶ್ಮೀ ಸಮ್ಮುಖವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ, ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ, ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ, ತೋಟಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶ್ಯಾಮನೂರು ಶಿವಶಂಕರಪ್ಪ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ನೇಹರು ಯುವಕೇಂದ್ರದ ಮಹಾ ನಿರ್ದೇಶಕ ಸಲೀಂ ಅಹಮ್ಮದ್, ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಬಸವರಾಜ ಬೊಮ್ಮಾಯಿ, ಕೆ.ಬಿ. ಕೋಳಿವಾಡ, ಯು.ಬಿ. ಬಣಕಾರ, ಸಂತೋಷ ಲಾಡ್, ಸಿ.ಎಸ್. ಶಿವಳ್ಳಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಈರಣ್ಣ ಮತ್ತಿಗಟ್ಟಿ, ಮಾಜಿ ಸಂಸದ ಐ.ಜಿ. ಸನದಿ ಮುಂತಾದವರು ಪಾಲ್ಗೊಳ್ಳುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

