ತೃಪ್ತ ಮನಸ್ಸಿನಿಂದ ಸಮಾಜ ಸೇವೆ ಶ್ರೇಷ್ಠ
ಹಾನಗಲ್ಲ: ಸಮಾಜ ಸೇವೆಯನ್ನು ತೃಪ್ತ ಮನಸ್ಸಿನಿಂದ ಮಾಡಿದರೆ ಅದು ಭಗವಂತನ ಸೇವೆಯಷ್ಟು ಶ್ರೇಷ್ಠವಾದುದು ಎಂದು ಹಾನಗಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಸಿ. ಪೀರಜಾದೆ ನುಡಿದರು.
ಹಾನಗಲ್ಲಿನ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಮಾರೋಪ ಹಾಗೂ ಸರ್ವೋದಯ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿಯವರು ರಾಮರಾಜ್ಯದ ಕನಸು ನನಸಾಗಬೇಕು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವ ಎಲ್ಲರಲ್ಲೂ ಮೂಡಬೇಕು. ಕಾಲೇಜು ವಿದ್ಯಾರ್ಥಿಗಳು ತಮ್ಮ ಜೀವನದ ನಾಳಿನ ಸಾಮಾಜಿಕ ಜೀವನಕ್ಕೆ ಈಗಿನಿಂದಲೇ ಸಾರ್ವಜನಿಕ ಸೇವೆಯ ಗುಣ ಬೆಳೆಸಿಕೊಳ್ಳಬೇಕು ಎಂದರು. ಅತಿಥಿಯಾಗಿ ಉಪನ್ಯಾಸಕ ಎಸ್.ಬಿ. ಕಮಾಟಿ ಮಾತನಾಡಿ, ಸೇವೆ ನಮ್ಮೊಳಗೆ ಮೂಡುವ ಒಂದು ಸಮಾಧಾನದ ಕಾರ್ಯ. ದೇಶದಲ್ಲಿ ಬಡವರು ಬಲ್ಲಿದರೂ ಸಮಾನ ಅವಕಾಶಗಳನ್ನು ಪಡೆದು ಬದುಕುವಂತಾಗಬೇಕು. ಮೇಲು ಕೀಳು, ಆರ್ಥಿಕ ಅಸಮಾನತೆಗಳು ತೊಲಗಬೇಕು ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ಪ್ರೊ. ಮಹೇಂದ್ರ ಬಾರಿಕರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಯುವಕರಲ್ಲಿ ಗ್ರಾಮೀಣ ಸಂಸ್ಕೃತಿ, ಜನಪದ ಬದುಕು, ಅವರ ಜೀವನ ನಿಧಾನಗಳು, ಸ್ವಚ್ಛತೆ, ಸಾಮಾಜಿಕ ಕಳಕಳಿ ಹಾಗೂ ದೇಶ ಪ್ರೇಮವನ್ನು ಕಲಿಸುತ್ತದೆ. ಯುವಕರು ದುಶ್ಚಟಗಳ ದಾಸರಾಗದಂತೆ ಉತ್ತಮ ಸಂಸ್ಕಾರ ಪಡೆದು ಬಾಳುವ ರೀತಿ ನೀತಿಗಳನ್ನು ಕಲಿಸುತ್ತದೆ. ಯುವಕರು ಮಹಾತ್ಮರ ಜೀವನ ಅರಿತು ಉತ್ತಮ ಜೀವನ ನಡೆಸಲು ಮುಂದಾಗಬೇಕು. ಯುವ ಪೀಳಿಗೆ ಈ ದೇಶದ ಆಸ್ತಿ ಎಂಬುದನ್ನು ಅರಿಯಬೇಕು ಎಂದರು. ಸಾಹಿತಿ ಮಾರುತಿ ಶಿಡ್ಲಾಪುರ, ಉಪನ್ಯಾಸಕರಾದ ಕೆ. ಈಶ್ವರ, ಎಸ್.ವಿ. ರಶ್ಮಿ, ವೀಣಾ ದೇವರಗುಡಿ, ಡಿ.ಸಿ. ಹಿರೇಮಠ ಅತಿಥಿಗಳಾಗಿದ್ದರು. ಕವಿತಾ ದೊಡ್ಡಮನಿ ಪ್ರಾರ್ಥನೆ ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

