ಗಮನ ಸೆಳೆಯುತ್ತಿರುವ ಕೃಷಿ ವಸ್ತು ಪ್ರದರ್ಶನ
ಶಿಗ್ಗಾಂವಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ನಡೆಯುತ್ತಿರುವ 9 ದಿನಗಳ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಕೃಷಿ ವಸ್ತು ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ವಿವಿಧ ಕೃಷಿ ಉಪಕರಣಗಳು, ಅಂತರ್ಜಲ, ಹೈನುಗಾರಿಕೆ ಸೇರಿದಂತೆ ಕೃಷಿ ಸಂಬಂಧಿ ಮಾಹಿತಿ ಪಡೆಯುವ ಆಸಕ್ತರ ಸಂಖ್ಯೆ ಹೆಚ್ಚುತ್ತಿದೆ.
ತರಳಬಾಳು ಹುಣ್ಣಿಮೆಯ ನಿಮಿತ್ತವಾಗಿ 9 ದಿನ ಜರುಗುವ ಕಾರ್ಯಕ್ರಮ 4ನೇ ದಿನಕ್ಕೆ ಪದಾರ್ಪಣೆ ಮಾಡಿದೆ. ಹುಣ್ಣಿಮೆ ಕಾರ್ಯಕ್ರಮಕ್ಕೆ ನಿರ್ಮಿಸಿದ ಸುಮಾರು 18 ಎಕರೆ ಜಮೀನಿನಲ್ಲಿ 2 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಸಂತ ಶಿಶುನಾಳ ಶರೀಫರ ವೇದಿಕೆ ಸುಮಾರು 10 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. 2 ವಾಲ್ ಸ್ಕ್ರೀನ್, 4 ಎಲ್ಸಿಡಿ, ದೀಪಾಲಂಕಾರ, ಉತ್ತಮ ಧ್ವನಿವರ್ಧಕ ಅಲ್ಲದೆ ವಿವಿಧ ತರಹದ ಮಳಿಗೆಗಳನ್ನು ನೋಡುವಂತಹ ಭಾಗ್ಯ ಶಿಗ್ಗಾಂವಿ ಜನತೆಗೆ ದೊರೆತಂತಾಗಿದೆ. ತರಳಬಾಳು ಹುಣ್ಣಿಮೆ ಶರಣರ ಸಂದೇಶಗಳು, ಧರ್ಮ ಜ್ಞಾನದ ಜತೆಗೆ ಕೃಷಿ ಉತ್ಸವ ರೈತರನ್ನು ಆಕರ್ಷಿಸುತ್ತಿದೆ. ಕಡಿಮೆ ಕರ್ಚಿನಲ್ಲಿ ಕೃಷಿ, ಸಾವಯವ ಕೃಷಿಯಿಂದ ಬೆಳೆ ತೆಗೆಯುವ ವಿಧಾನ, ಮಣ್ಣಿನ ಫಲವತ್ತತೆ ಕಾಪಾಡಿ ಹೆಚ್ಚಿನ ಲಾಭಗಳಿಸುವ ಮಾಹಿತಿಗಳನ್ನು ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಬಳಸುವ ವಿಧಾನ, ಕೃಷಿ ಉಪಕರಣಗಳು, ಕೃಷಿಯೊಂದಿಗೆ ಹೈನುಗಾರಿಕೆ ಹಾಗೂ ಅಂತರ್ಜಲ ಹೆಚ್ಚಿಸುವ ಕೃಷಿ ಹೊಂಡಗಳು, ಅದರಲ್ಲಿ ಮೀನುಗಾರಿಕೆ ವಿಧಾನಗಳ ಮಾಹಿತಿ ಕೂಡಾ ಲಭ್ಯವಾಗುತ್ತಿದೆ. ಎಲ್ಲ ಕೃಷಿ ಹಾಗೂ ಶರಣರ ಗ್ರಂಥಗಳು ಇಲ್ಲಿ ಸಿಗುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

