ಪಂಚಕಲ್ಯಾಣ ಮಹೋತ್ಸವಕ್ಕೆ ಅದ್ಧೂರಿ ತೆರೆ
ಹಾವೇರಿ: 1008 ನೇಮಿನಾಥಸ್ವಾಮಿ ಚತುರ್ಮುಖ ಜಿನಬಿಂಬದ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ಅದ್ಧೂರಿ ತೆರೆ ಕಂಡಿತು. ಪ್ರತಿಷ್ಠಾಪನಾ ಮಹೋತ್ಸವದ ಮೂರನೇ ದಿನವಾದ ಗುರುವಾರ ಆನೆ ಮೇಲೆ ಮಂಗಳ ಕುಂಭ ತರುವುದು, ನೇಮಿನಾಥ ಮುನಿಗಳಿಗೆ ಆಹಾರದಾನ, ಗಂಧ ಯಂತ್ರಾರಾಧನೆ, ಮಂತ್ರ ವಿನ್ಯಾಸ, ತಿಲಕನ್ಯಾಸ ಕಲಾರೋಪಣ ಜರುಗಿದವು. ಭಗವಾನ್ ನೇಮಿನಾಥ ತೀರ್ಥಂಕರ ವಿಹಾರ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನೂತನ ಮಾನಸ್ತಂಭದಲ್ಲಿ ಶ್ರೀ 1008 ನೇಮಿನಾಥ ಸ್ವಾಮಿ ಚತುರ್ಮುಖ ಜಿನಬಿಂಬ ಪ್ರತಿಷ್ಠಾಪನೆ, ಮಾನಸ್ತಂಭ ಶಿಖರ ಕಳಸಾರೋಹಣ, ಶಾಂತಿಸಾಗರ ಪಾದುಕೆ ಸ್ಥಾಪನೆ ಕಾರ್ಯಕ್ರಮದ ನಂತರ 1008 ಸುವರ್ಣ ಕಲಶಗಳಿಂದ ಮಹಾಭಿಷೇಕ ಪೂಜೆ, ಮಹಾಮಂಗಳರಾತಿ ಕಾರ್ಯಕ್ರಮಗಳು ಮುನಿಶ್ರೀ 108 ಪುಣ್ಯಸಾಗರ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ವಿಜೃಂಭಣೆಯಿಂದ ಜರುಗಿದವು. ಕೇವಲ ಜ್ಞಾನ ಕಲ್ಯಾಣ ಹಾಗೂ ಮೋಕ್ಷ ಕಲ್ಯಾಣ ಕಾರ್ಯಕ್ರಮ ನಡೆದವು.
ಧರ್ಮಸಭೆ: ಹಿಂಸೆಯನ್ನು ಮಾಡಬಾರದೆಂದು ಜೈನ್ ಸಿದ್ಧಾಂತ ಹೇಳುತ್ತದೆ ಎಂದು ಬಾಲೇಹೊಸೂರು ದಿಂಗಾಲೇಶ್ವರ ಮಹಾಸ್ವಾಮಿಗಳು ನುಡಿದರು. ನಗರದ ಹುಕ್ಕೇರಿಮಠದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಿರ್ಮಿಸಲಾದ ಭಗವಾಗನ ಶ್ರೀ 1008 ನೇಮಿನಾಥ ಸಭಾ ಮಂಟಪದಲ್ಲಿ ಜರುಗಿದ ಧರ್ಮ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಜೈನ ಧರ್ಮ ಒಂದು ಕಾಲದಲ್ಲಿ ಇತಿಹಾಸ ಹಾಗೂ ಎಲ್ಲ ಧರ್ಮಗಳಿಗೂ ಅಡಿಪಾಯ ಹಾಕಿಕೊಟ್ಟಿತ್ತು. ಅಂತಹ ದೊಡ್ಡ ಜೈನ ಧರ್ಮದ ಅಸಂಖ್ಯಾತರು ವೀರಾಗಿಗಳು ಹಾಗೂ ತ್ಯಾಗಿಗಳಾದರು. ಹಾಗಾಗಿ ಇಂದು ಜೈನರು ಅಲ್ಪಸಂಖ್ಯಾತರಾಗಲು ಕಾರಣವಾಯಿತು ಎಂದರು. ಉದ್ಘಾಟನೆ ನೆರವೇರಿಸಿದ ಭಾರತೀಯ ಜೈನ್ ಮಿಲನ ಕಾರ್ಯಾಧ್ಯಕ್ಷ ಧರ್ಮಸ್ಥಳದ ಸುರೇಂದ್ರಕುಮಾರ ಹೆಗ್ಗಡೆ ಹಾಗೂ ಅವರ ಧರ್ಮಪತ್ನಿ ಮಾತನಾಡಿ, ಪಂಚಕಲ್ಯಾಣ ಪೂಜೆಗಳಲ್ಲಿ ಭಾಗವಹಿಸುವದರಿಂದ ಅಗಾಧ ಪುಣ್ಯ ಪ್ರಾಪ್ತವಾಗುತ್ತದೆ ಎಂದರು. ಹುಬ್ಬಳ್ಳಿಯ ಡಾ. ಶ್ರೀಕಾಂತ ಬ್ರಹ್ಮರಾವ್ ಕಳಸೂರ ಮಾತನಾಡಿದರು. ಮುನಿಶ್ರೀ 108 ಪುಣ್ಯಸಾಗರ ಮಹಾರಾಜರ ಹಾಗೂ ಹಾವೇರಿ ಹೆಸರೂರ ಬಣ್ಣದಮಠದ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಶಾಸಕ ರುದ್ರಪ್ಪ ಲಮಾಣಿ, ನಗರಸಭೆ ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ಶಿವಲಿಂಗೇಶ್ವರ ವಿದ್ಯಾಪೀಠದ ಚೇರ್‌ಮನ್ ಪಿ.ಡಿ. ಶಿರೂರ ಸೇರಿದಂತೆ ಅನೇಕ ಗಣ್ಯರು ಇದ್ದರು. ಮಹಾವೀರ ದೊಡ್ಡಮನಿ ನಿರೂಪಿಸಿದರು. ಪಂಚಕಲ್ಯಾಣ ಕಮಿಟಿ ಅಧ್ಯಕ್ಷ ಚಂದ್ರನಾಥ ಕಳಸೂರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

