ಹಾವೇರಿ

ಬಿಜೆಪಿಯಿಂದ 'ನಿಮ್ಮ ಧ್ವನಿ-ನಮ್ಮ ಪ್ರಣಾಳಿಕೆ'

Published On :

ಹಾವೇರಿ: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ 'ನಿಮ್ಮ ಧ್ವನಿ-ನಮ್ಮ ಪ್ರಣಾಳಿಕೆ' ಕಾರ್ಯಕ್ರಮ ನಗರದ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಮುಂಭಾಗದಲ್ಲಿ ಭಾನುವಾರ ನಡೆಯಿತು.
ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ದೈವಜ್ಞ ನೇತೃತ್ವದ ತಂಡದಲ್ಲಿ ಅನೇಕ ಕಾರ್ಯಕರ್ತರಿಗೆ 'ನಿಮ್ಮ ಧ್ವನಿ-ನಮ್ಮ ಪ್ರಣಾಳಿಕೆ'ಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ತಿಳಿ ಹೇಳಲಾಯಿತು. ಭಾರತದ ಮುಂದಿನ ಪ್ರಧಾನಿ ಎಂದು ಬಿಂಬಿತವಾಗಿರುವ ನರೇಂದ್ರ ಮೋದಿಯವರ ಆಶಯದಂತೆ ಈ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಜನರ ಮಧ್ಯೆ ತಲುಪಿ ಅವರ ಆಶಯ, ಬೇಡಿಕೆಗಳಿಗನುಗುಣವಾಗಿ ರಚಿಸಬೇಕೆಂಬುದರ ಉದ್ದೇಶದ ಹಿನ್ನೆಲೆಯಲ್ಲಿ ಪ್ರಬುದ್ಧ ಹಾಗೂ ಯುವ ಮತದಾರರ ಮಧ್ಯ ಅವರ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರದೀಪ ಮಳ್ಳೂರ, ಪ್ರಧಾನ ಕಾರ್ಯದರ್ಶಿ ಸೋಮೇಶ್ವರ ಕುರುಡೇಕರ, ನಗರ ಪ್ರಧಾನ ಕಾರ್ಯದರ್ಶಿ ಸಾಗರ ಅಂಗಡಿ, ಮಧುಕರ ನವಲೆ, ವಿನಯ ಪಾಟೀಲ್, ಲಕ್ಷ್ಮಣ ರಜಪೂತ, ಸುನೀಲ್ ರಾಯ್ಕರ ಇತರರು ಇದ್ದರು. ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದ ಭವಿಷ್ಯಕ್ಕಾಗಿ ತಮ್ಮ ಸಲಹೆಗಳನ್ನು ಡಬ್ಬದಲ್ಲಿ ಹಾಕುವ ಮೂಲಕ ಯುವ ಮೋರ್ಚಾ ಕಾರ್ಯಕರ್ತರ ಈ ವಿನೂತನ ಕಾರ್ಯಕ್ಕೆ ಬೆಂಬಲ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.