ನಗರಸಭೆಯಲ್ಲಿ ಅವ್ಯವಹಾರ: ಶಾಸಕರ ಆರೋಪ ನಿರಾಧಾರ
ಹಾವೇರಿ: ಹಿಂದಿನ ಆಡಳಿತಾವಧಿಯಲ್ಲಿ ನಗರಸಭೆಗೆ ಮುಖ್ಯಮಂತ್ರಿ ವಿಶೇಷ ಅನುದಾನದಡಿ ಮಂಜೂರಾದ ರು. 30 ಕೋಟಿಗಳ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ಆಗಿದೆ ಎಂಬ ಶಾಸಕ ರುದ್ರಪ್ಪ ಲಮಾಣಿಯವರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯಕುಮಾರ ಚಿನ್ನಿಕಟ್ಟಿ ಹೇಳಿದರು.
ಬುಧವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಅಧಿಕಾರಕ್ಕೆ ಬಂದಾಗಿನಿಂದ ನಗರಸಭೆಯಲ್ಲಿ ಹಿಂದಿನ ಅವಧಿಯಲ್ಲಿ ಅವ್ಯವಹಾರ ನಡೆದಿದ್ದು ಲೋಕಾಯುಕ್ತ ತನಿಖೆ ಮಾಡಿಸುವುದಾಗಿ ಹೇಳುತ್ತಲೇ ಬಂದಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಇಂಥ ಸಂದರ್ಭ ಮತ್ತೆ ಅದನ್ನೇ ಹೇಳುತ್ತಿದ್ದಾರೆ. ಶಾಸಕರು ನಗರಸಭೆಯ ಕಾಮಗಾರಿಗಳ ಬಗ್ಗೆ ಲೋಕಾಯುಕ್ತ ಮಾತ್ರವಲ್ಲ, ಸಿಓಡಿ ತನಿಖೆ ನಡೆಸಿದರೂ ಅದನ್ನು ಸ್ವಾಗತಿಸುತ್ತೇವೆ ಎಂದು ಸವಾಲು ಹಾಕಿದರು.
ಹಿಂದಿನ ಅವಧಿಯಲ್ಲಿ ನಗರಸಭೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ 30 ಕೋಟಿಗಳಲ್ಲಿ ರು. 24 ಕೋಟಿ ಮಾತ್ರ ಬಿಡುಗಡೆಯಾಗಿದೆ. ಇದರಲ್ಲಿ ರು. 21 ಕೋಟಿ ಖರ್ಚು ಮಾಡಲಾಗಿದೆ. ಇನ್ನೂ ರು. 3 ಕೋಟಿ ಬಾಕಿ ಇದೆ. ಹೀಗಿರುವಾಗ ಶಾಸಕರು ನಗರಸಭೆಯಲ್ಲಿ 30 ಕೋಟಿ ಅವ್ಯವಹಾರವಾಗಿದೆ ಎನ್ನುತ್ತಿದ್ದಾರೆ. ಬಿಡುಗಡೆಯಾಗಿದ್ದೇ ರು. 24 ಕೋಟಿ ಎಂಬ ಮಾಹಿತಿಯೂ ಇಲ್ಲದೆ ಶಾಸಕರು ತಮಗೆ ತೋಚಿದಂತೆ ಮಾತನಾಡುತ್ತಿದ್ದಾರೆ ಎಂದು ಚಿನ್ನಿಕಟ್ಟಿ ವ್ಯಂಗ್ಯವಾಡಿದರು. ಈಗ ಸರ್ಕಾರ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಬಳಕೆ ಮಾಡದೆ ಇರುವ ಹಣ ಮರಳಿಸಲು ಆದೇಶಿಸಿದೆ. ಈ ಆದೇಶದಂತೆ ನಗರಸಭೆಯಲ್ಲಿ ಬಳಕೆಯಾಗದ 3 ಕೋಟಿ ಮರಳಿ ಕಳುಹಿಸಬೇಕಾಗಿದೆ. ಇದನ್ನು ತಡೆಯುವ ದೃಷ್ಟಿಯಲ್ಲಿ ಚಿಂತನೆ ಮಾಡಬೇಕಾದ ಶಾಸಕರು, ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕೈಗೊಂಡ ಕಾಮಗಾರಿಗಳಿಗೆ ಸಂಬಂಧಿಸಿ ಗುತ್ತಿಗೆದಾರರಿಗೆ ಸುಮಾರು ರು. 2 ಕೋಟಿಗಳ ಬಿಲ್ ಇನ್ನೂ ಪಾವತಿಸಿಲ್ಲ ಎಂದು ಚಿನ್ನಿಕಟ್ಟಿ ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಜಗದೀಶ ಮಲಗೋಡ, ಸದಸ್ಯರಾದ ಗಿರೀಶ ತುಪ್ಪದ, ಬಾಬುಸಾಬ ಮೋಮಿನಗಾರ ಇತರರು ಇದ್ದರು.
ಶಾಸಕರು ಅಧಿಕಾರಕ್ಕೆ ಬಂದಾಗಿನಿಂದ ನಗರಸಭೆಯಲ್ಲಿ ಹಿಂದಿನ ಅವಧಿಯಲ್ಲಿ ಅವ್ಯವಹಾರ ನಡೆದಿದ್ದು ಲೋಕಾಯುಕ್ತ ತನಿಖೆ ಮಾಡಿಸುವುದಾಗಿ ಹೇಳುತ್ತಲೇ ಬಂದಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಇಂಥ ಸಂದರ್ಭ ಮತ್ತೆ ಅದನ್ನೇ ಹೇಳುತ್ತಿದ್ದಾರೆ. ಶಾಸಕರು ನಗರಸಭೆಯ ಕಾಮಗಾರಿಗಳ ಬಗ್ಗೆ ಲೋಕಾಯುಕ್ತ ಮಾತ್ರವಲ್ಲ, ಸಿಓಡಿ ತನಿಖೆ ನಡೆಸಿದರೂ ಅದನ್ನು ಸ್ವಾಗತಿಸುತ್ತೇವೆ
-ವಿಜಯಕುಮಾರ ಚಿನ್ನಿಕಟ್ಟಿ
ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

