ಹಾವೇರಿ

ರಂಗಭೂಮಿ ಬೆಳೆಸುವ ಕಾರ್ಯವಾಗಲಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 20
ಟಿವಿ ಮಾಧ್ಯಮದ ಹಾವಳಿಯ ನಡುವೆಯೂ ರಂಗಭೂಮಿ ಅತ್ಯಂತ ಜನಪ್ರಿಯವಾದ ಕಲಾ ಸಾಹಿತ್ಯ ಪ್ರಕಾರವಾಗಿದ್ದು, ಅದನ್ನು ಮತ್ತಷ್ಟು ಬೆಳೆಸುವ ಕಾರ್ಯ ಪ್ರೇಕ್ಷಕರಿಂದ ಆಗಬೇಕಾಗಿದೆ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ನಗರದ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ನಡೆಯುತ್ತಿರುವ ಲಿಂ. ಜಗದ್ಗುರು ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀಗಳ ಹಾಗೂ ಅಥಣಿ ಮುರುಘೇಂದ್ರ ಶ್ರೀಗಳ ಸ್ಮರಣೋತ್ಸವದ ಅಂಗವಾಗಿ ಗುರುವಾರ ಸಾಂಸ್ಕೃತಿಕ ಸಂಜೆ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೂರದರ್ಶನ ಮಾಧ್ಯಮ ರಂಗಭೂಮಿಗೆ ಪ್ರತಿಸ್ಪರ್ಧಿಯಾಗಿದ್ದು ಅದನ್ನು ಮಣಿಸಿ ರಂಗಭೂಮಿ ಕಲೆ ಬೆಳೆಯಬೇಕಾಗಿದ್ದು, ಕೇವಲ ಕಲಾವಿದರಿಂದ ಮಾತ್ರ ಅದು ಸಾಧ್ಯವಿಲ್ಲ. ಅದು ಪ್ರೇಕ್ಷಕರಿಂದ ಆಗಬೇಕಾಗಿದೆ. ಇಲ್ಲಿಯವರೆಗೂ ಕನ್ನಡ ಸಾಹಿತ್ಯದಲ್ಲಿ ಅನೇಕ ನಾಟಕಗಳು ರಚನೆಯಾಗಿದ್ದು, ಇನ್ನಷ್ಟು ಯುವ ರಚನಾಕಾರರು ಜನರ ನಾಡಿಮಿಡಿತ ಅರಿತು ರಂಗಭೂಮಿಯ ಇತರ ಕಲಾ ಸಾಹಿತ್ಯದ ಪ್ರಕಾರಗಳನ್ನು ಶ್ರೀಮಂತಗೊಳಿಸಬೇಕಾಗಿದೆ ಎಂದರು. ದಾವಣಗೆರೆಯ ಬಸವಪ್ರಭು ಸ್ವಾಮೀಜಿ ಮಾತನಾಡಿ, ಇಂದು ರಂಗಭೂಮಿ ಕೊಲೆಯಾಗುತ್ತಿದೆಯಲ್ಲದೇ ಅದು ಸಮಾಜದಿಂದ ಮರೆಯಾಗುತ್ತಿದೆ. ನಾಡಿನ ಕಲೆಗಳನ್ನು ಸರ್ಕಾರ ಉಳಿಸುತ್ತಿಲ್ಲ ಎಂದು ಆರೋಪ ಮಾಡುವ ಬದಲು ರಂಗಭೂಮಿಯ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿಯು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಇಂದಿನ ಟಿವಿ ಮಾಧ್ಯಮಗಳು ಜನರ ಮನಸ್ಸನ್ನು ಒಡೆಯುವ, ಕೆಡಿಸುವ ಕಾರ್ಯವನ್ನು ಮಾಡುತ್ತಿದ್ದರೆ, ಅದೇ ರಂಗಭೂಮಿ ಜನರ ಸಂಬಂಧಗಳನ್ನು ಒಟ್ಟು ಗೂಡಿಸುವ ಕಾರ್ಯವನ್ನು ಮಾಡುತ್ತಿವೆ. ಸಿನೆಮಾ, ಧಾರಾವಾಹಿಗಳಲ್ಲಿ ಕ್ರೌರ್ಯ, ಮೋಸ ವಂಚನೆಯ ದೃಶ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ ಸಂಗತಿ ಎಂದು ವಿಷಾದಿಸಿದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಕೋಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ದೂರದರ್ಶನ, ಮೊಬೈಲ್ ಹಾವಳಿಯಿಂದ ಇಂದಿನ ಯುವಕರು ಲಿಂಗ ಪೂಜೆಯನ್ನೇ ಮರೆತಿದ್ದಾರೆ. ಶರಣ ಸಂಸ್ಕೃತಿ ಕಾರ್ಯಕ್ರಮಗಳಲ್ಲಿ ಯುವ ಜನತೆ ಪಾಲ್ಗೊಳ್ಳುವ ಮೂಲಕ ಅವುಗಳನ್ನು ಕಲಿಯಲು ಸಹಕಾರಿಯಾಗಲಿದೆ ಎಂದರು.
ನೇತೃತ್ವ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಶ್ರೀಗಳು ಮಾತನಾಡಿದರು. ಸಮಾರಂಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ನಗರಸಭೆ ಸದಸ್ಯರಾದ ಸಂಜೀವ ನೀರಲಗಿ, ಗುಡ್ಡನಗೌಡ ಅಂದಾನಿಗೌಡ್ರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.