ಹಾವೇರಿ

ಕನ್ನಡ ಉಳಿಕೆ ಜತೆ ಬಳಕೆ ಅಗತ್ಯ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 22
ಕನ್ನಡ ಉಳಿಸುವ ಪ್ರಕ್ರಿಯೆ ಬರೀ ಮಾತಿನಲ್ಲಿ ಆಗಬಾರದು. ಅದು ಕೃತಿಯಲ್ಲಿ ಮೂಡಿ ಬರಬೇಕು. ಅಂದಾಗ ಕನ್ನಡದ ಉಳಿವು ಸಾಧ್ಯ ಎಂದು ಧಾರವಾಡ ಕರ್ನಾಟಕ ವಿವಿಯ ಮೌಲ್ಯಮಾಪನ ಕುಲಸಚಿವ ಡಾ.ಎಚ್.ಐ. ಪೋತೆ ಅಭಿಪ್ರಾಯಪಟ್ಟರು.
ನಗರದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಯುಜಿಸಿ ಪ್ರಾಯೋಜಿತ ಹಳಗನ್ನಡ ಕಾವ್ಯ-ಮರುವ್ಯಾಖ್ಯಾನ ಮತ್ತು ವ್ಯವಸಾಯದ ಮೇಲೆ ನೀರಾವರಿ-ಪರಿಸರದ ಪ್ರಭಾವ ಎಂಬ ವಿಷಯದ ಕುರಿತಾಗಿ ಶನಿವಾರ ಜರುಗಿದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನಿಂದ ಬಂದಿರುವ ನಮ್ಮ ಸಾಹಿತ್ಯ ಭಂಡಾರಗಳನ್ನು ಉಳಿಸಿ ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಭಾರತದಲ್ಲಿ ವಚನ ಚಳವಳಿಯು ಸಾಮಾಜಿಕ ಕ್ರಾಂತಿ ಮೂಡಿಸಿದ್ದನ್ನು ಮರೆಯಲಾಗದ ಸನ್ನಿವೇಶ. ಪಾಶ್ಚಿಮಾತ್ಯದ ಸೊಗಡಿನಲ್ಲಿ ಮರೆಯಾಗುತ್ತಿರುವ ಕನ್ನಡ ಭಾಷೆ ಇಂದು ಹೇಳಿಕೆಯ ವಸ್ತುವಾಗಿದೆಯೇ ಹೊರತು ಆಚರಣೆಯ ವಾಸ್ತವಿಕತೆಯಲ್ಲಿ ಬರುತ್ತಿಲ್ಲದಿರುವುದು ನೋವಿನ ಸಂಗತಿ ಎಂದರು.
ಧಾರವಾಡ ಕರ್ನಾಟಕ ವಿವಿಯ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಐ.ಬಿರಾದಾರ ಮಾತನಾಡಿ, ಭಾರತದ ಆರ್ಥಿಕ ವ್ಯವಸ್ಥೆಗೆ ಬೆನ್ನೆಲುಬಾಗಿ ನಿಂತಿರುವ ಸನಾತನ ವ್ಯವಸಾಯ ಪದ್ಧತಿ ಇಂದು ಸಂಪೂರ್ಣ ಬದಲಾಗಬೇಕಿದೆ. ಪ್ರಭಾವಶಾಲಿ ಕೆಲ ಆರ್ಥಿಕ ವಲಯಗಳ ಪೈಪೋಟಿಯಿಂದಾಗಿ ಕೃಷಿ ಪದ್ಧತಿ ಇಂದು ಅಧೋಗತಿಯತ್ತ ಸಾಗುತ್ತಿದೆ. ಸಂಪೂರ್ಣ ಬದಲಾವಣೆ ತರುವ ನಿಟ್ಟಿನಲ್ಲಿ ನೀರಾವರಿಯಂತಹ ಹಲವು ಯೋಜನೆಗಳನ್ನು ನಿಯೋಜಿಸಿಕೊಂಡರೆ ಸಮೃದ್ಧಿ ಸಾಧಿಸಲು ಸಾಧ್ಯ ಎಂದರು.
ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಸ್.ಸಿ. ಮೆಟಗುಡ್ಡ ಮಾತನಾಡಿದರು. ಪ್ರಮುಖರಾದ ಎಂ.ಸಿ. ಕೊಳ್ಳಿ, ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಪಿ.ಡಿ. ಶಿರೂರ, ಸದಸ್ಯ ಬಿ.ಸಿ. ಹೆರೂರ, ಬಸವರಾಜ ಮಾಸೂರ, ಕವಿವಿ ಭೂಗೋಳ ಶಾಸ್ತ್ರದ ಪ್ರಾಧ್ಯಾಪಕ ಡಾ.ಅರವಿಂದ ಮೂಲಿಮನಿ, ಡಾ.ಕೃಷ್ಣಕುಮಾರಿ, ಕವಿವಿ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜೆ.ಎಂ. ನಾಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಶಿಕಲಾ ಹುಡೇದ ಇದ್ದರು.
ಪ್ರಾಚಾರ್ಯ ಡಾ.ಬಿ.ಸಿ. ಬನ್ನೂರ ಸ್ವಾಗತಿಸಿದರು. ಡಾ.ಸಿ.ಮಲ್ಲಣ್ಣ, ಡಾ.ಜಗದೀಶ ಹೊಸಮನಿ, ಎನ್.ವಿ. ಕಂಬಾಳಿಮಠ ಪರಿಚಯಿಸಿದರು. ದೀಪಕ್ ಎ. ಕೊಲ್ಲಾಪುರೆ ಹಾಗೂ ಎನ್. ಕೆಂಚವೀರಪ್ಪ ಪ್ರಾಸ್ತಾವಿಕ ಮಾತನಾಡಿದರು. ರೇಷ್ಮಾ ಇನಾಮದಾರ ನಿರೂಪಿಸಿದರು. ಡಾ.ವಿ.ಡಿ. ಯಳಮಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.