ಜಾನುವಾರುಗಳಿಗೆ ಚುಚ್ಚುಮದ್ದು ಹಾಕಿಸಿ
ಶಿಗ್ಗಾಂವಿ: ಜಾನುವಾರುಗಳು ಕಾಲು ಮತ್ತು ಬಾಯಿಬೇನೆ ರೋಗ ಅನುಭವಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮಗಳ ರೈತರು ತಮ್ಮ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಬೇನೆ ರೋಗಕ್ಕೆ ಪ್ರತಿರೋಧಕ ಚುಚ್ಚುಮದ್ದು ಹಾಕಿಸಿ ಜಾನುವಾರುಗಳನ್ನು ರಕ್ಷಿಸಿಕೊಳ್ಳುವಂತೆ ಪಶುವೈದ್ಯಕೀಯ ಪರೀಕ್ಷಕ ಜೆ.ಎಸ್. ಅಗಸರ ಹೇಳಿದರು.
ತಾಲೂಕಿನ ಹುಲಗೂರ ಗ್ರಾಮದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕೇಂದ್ರ ಪುರಸ್ಕೃತ ಉಚಿತ ಕಾಲು ಮತ್ತು ಬಾಯಿಬೇನೆ ಚಿಕಿತ್ಸಾ ಕಾರ್ಯಕ್ರಮ ನೆರವೇರಿದ ಕಾರ್ಯಕ್ರಮದಲ್ಲಿ ರೈತರಿಗೆ ಪ್ರಾಸ್ತಾವಿಕ ಮಾತನಾಡಿದರು.
ಗ್ರಾಪಂ ಸದಸ್ಯ ಶೇಖಣ್ಣ ಗಣಾಚಾರಿ ಮಾತನಾಡಿ, ಕಾಲು ಮತ್ತು ಬಾಯಿಬೇನೆಯಿಂದ ದನ, ಕರು ಅಶಕ್ತವಾಗುತ್ತಿದ್ದು, ತುಂಬಾ ತೊಂದರೆ ಅನುಭವಿಸುತ್ತಿವೆ. ಜಾನುವಾರುಗಳಿಗೆ ರೋಗ ತಗುಲಿದರೆ ರೈತರು ಜಾನುವಾರು ಸಾಕಿದ ಬಡವರು ಆರ್ಥಿಕವಾಗಿ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಅದನ್ನು ಮನಗಂಡು ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳಿಗೆ ರೋಗ ಹರಡದಂತೆ ರೋಗ ಪ್ರತಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ರೂಪಿಸಿದೆ. ರೈತರು ಹಾಗೂ ಗ್ರಾಮದವರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಸರ್ಕಾರ ಹಾಗೂ ಯೋಜನೆಗಳಿಂದ ಜಾನುವಾರುಗಳನ್ನು ಕಾಪಾಡಿಕೊಂಡು ಕಾರ್ಯಕ್ರಮ ಯಶಸ್ವಿ ಮಾಡಬೇಕು ಎಂದರು. ಗ್ರಾಮದಲ್ಲಿ ಸುಮಾರು 650 ದನಗಳಿಗೆ ಹಾಗೂ 210 ಎಮ್ಮೆಗಳಿಗೆ ಕಾಲು ಮತ್ತು ಬಾಯಿ ರೋಗ ಪ್ರತಿರೋಧಕ ಚುಚ್ಚುಮದ್ದು ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಖಾದರಗೌಸ ನೆರ್ತಿ, ಮಾಜಿ ಗ್ರಾಪಂ ಸದಸ್ಯ ಶಿವಪ್ಪ ಚಕ್ರಸಾಲಿ, ಶಿವನಗೌಡ್ರ ರಾಯನಗೌಡ್ರ, ನೀಲಪ್ಪ ಬಾಲಪ್ಪನವರ, ಸಿ.ಡಿ. ಯತ್ನಳ್ಳಿ, ನಿಂಗಪ್ಪ ಕೆಳಗಿನಮನಿ, ಮಲ್ಲಿಕಾರ್ಜುನ ಗಂಗೂಡಿ, ಮಲ್ಲಪ್ಪ ಕೊಡ್ಲಿ, ದಯಾನಂದ, ಆರ್., ಎಂ. ಜಾಯನವರ, ರಾಜು ಸಾವಕ್ಕನವರ, ಜಿ.ಎಂ. ಅಗಸರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

