ಹಾವೇರಿ

ಕನಕಗಿರಿ: 5ನೇ ವಾರ್ಡ್ ನಿವಾಸಿಗಳ ಪ್ರತಿಭಟನೆ

Published On :

ಕನಕಗಿರಿ: ಗ್ರಾಪಂ ನಿರ್ಲಕ್ಷ್ಯ ಖಂಡಿಸಿ, ಮೂಲಸೌಕರ್ಯಕ್ಕೆ ಒತ್ತಾಯಿಸಿ ಇಲ್ಲಿನ 5ನೇ ವಾರ್ಡ್ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ವಾರ್ಡ್‌ನ ಮುಖ್ಯರಸ್ತೆಯಲ್ಲಿ ಚರಂಡಿ ನೀರು ಹಲವು ತಿಂಗಳಿಂದ ಹರಿಯುತ್ತಿದ್ದು, ದುರ್ವಾಸನೆ ಹರಡಿದ್ದರಿಂದ ಮನೆಯಲ್ಲಿ ಅಡುಗೆ ಮಾಡಿ, ಊಟ ಮಾಡುವುದಕ್ಕೂ ಅಸಹ್ಯವಾಗುತ್ತಿದೆ. ಸಂಜೆಯಾದರೆ ಸೊಳ್ಳೆಗಳು ಅಮರಿಕೊಳ್ಳುತ್ತವೆ. ಇದರಿಂದಾಗಿ ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ನಿವಾಸಿಗಳು ರೋಗಭೀತಿಯಲ್ಲಿದ್ದಾರೆ ಎಂದು ಸಹಕಾರಿ ಪತ್ತಿನ ಸಂಘದ ನಿರ್ದೇಶಕ ರಮೇಶ ರೆಡ್ಡಿ ಓಣಿಮನಿ ಆರೋಪಿಸಿದರು.
ಗ್ರಾಪಂ ಅಧ್ಯಕ್ಷರ ವಾರ್ಡ್‌ನಲ್ಲೇ ಸೌಕರ್ಯಗಳಿಲ್ಲ. ಮೂವರು ಸದಸ್ಯರಿದ್ದೂ ಪ್ರಯೋಜನವಾಗಿಲ್ಲ. ಬೇರೆ ವಾರ್ಡ್‌ಗಳಿಗೆ ಹೋಲಿಸಿದರೆ ಇಲ್ಲಿ ನೀರು  ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಮಹಿಳಾ ಶೌಚಾಲಯವೂ ದುಸ್ಥಿತಿಯಲ್ಲಿದ್ದು, ದುರಸ್ತಿಗೆ ಮುಂದಾಗಿಲ್ಲ ಎಂದು ಮಲ್ಲಮ್ಮ ಬೇರಂಗಿ ದೂರಿದರು. ಗ್ರಾಪಂ ಉಪಾಧ್ಯಕ್ಷ ಪ್ರಕಾಶ ಹಾದಿಮನಿ, ಸದಸ್ಯರಾದ ಶಿವುಕುಮಾರ ಕೋರಿ, ಹೊನ್ನೂರಸಾಬ್ ಬೀಡಿ, ಸಣ್ಣಕನಕಪ್ಪ, ನಿವಾಸಿಗಳಾದ ಮಲ್ಲಿಕಾರ್ಜುನ ರೆಡ್ಡಿ ಓಣಿಮನಿ, ರಮೇಶ ರೆಡ್ಡಿ ಮಾದಿನಾಳ, ಮಂಜುನಾಥ ಕೋರಡ್ಡಿ, ನರಸರೆಡ್ಡಿ ಬೊರೆಡ್ಡಿ, ದೊಡ್ಡಬಸವ ರೆಡ್ಡಿ, ವಿಷ್ಣು ರೆಡ್ಡಿ ಬೇರಂಗಿ, ನರಸರೆಡ್ಡಿ ಬೇರಂಗಿ, ಕನಕರೆಡ್ಡಿ ಮಾದಿನಾಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.