ಹಾವೇರಿ

ಮಕ್ಕಳು ಶಿಕ್ಷಣ, ಸೌಕರ್ಯದಿಂದ ವಂಚಿತರಾಗದಿರಲಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 27
ದೇಶದ ಯಾವ ಮಕ್ಕಳೂ ಶಿಕ್ಷಣದಿಂದ ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು ಎಂದು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕಾಯ್ದೆ ರಚನೆಯಾಗಿದೆ. ಈ ಕಾನೂನಿನಲ್ಲಿ ಮಕ್ಕಳಿಗೆ ಅನೇಕ ತರದ ಸೌಲಭ್ಯಗಳಿದ್ದು, ಅವುಗಳನ್ನು ಅರಿತುಕೊಂಡು ತಮ್ಮ ಗುರಿಯನ್ನು ಸುಲಭವಾಗಿ ತಲುಪಬಹುದೆಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿ. ಚನ್ನಕೇಶವರೆಡ್ಡಿ ಹೇಳಿದರು.
ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಬಸಾಪುರ ಗ್ರಾಮ ಪಂಚಾಯಿತಿ ಹಾಗೂ ಗ್ರಾಮೀಣ ವಿದ್ಯಾ ಪ್ರಸಾರ ಸಂಸ್ಥೆ ಆಶ್ರಯದಲ್ಲಿ ಬಸಾಪುರ ಗ್ರಾಪಂ ಆವರಣದಲ್ಲಿ ಜರುಗಿದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇಂತಹ ಸಮಾಜ ಘಾತುಕ ಘಟನೆಗಳನ್ನು ತಡೆಗಟ್ಟಲು ಕಾನೂನಿನಲ್ಲಿ ಅನೇಕ ಅವಕಾಶಗಳಿದ್ದು, ಅವುಗಳ ಬಗ್ಗೆ ನಿಮಗೆ ಸ್ವಲ್ಪ ಮಟ್ಟಿಗಾದರೂ ಅರಿವು ಇದ್ದಲ್ಲಿ, ಇಂತಹ ಘಟನೆಗಳನ್ನು ಹತೋಟಿಗೆ ತರಬಹುದೆಂದು ತಿಳಿಸಿದರು.
ಬಸಾಪುರ ಗ್ರಾಪಂ ಅಧ್ಯಕ್ಷೆ ಪ್ರೇಮಾ ಚಾವಡಿ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಧೀಶ ಎಸ್.ಬಿ. ಕೆಂಭಾವಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್. ಎಸ್. ಹಿರೇತನದ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ರವಿ ಡಿ. ಅರಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕಾಯ್ದೆ ಹಾಗೂ ವಕೀಲರಾದ ಎನ್.ಪಿ. ಚಾವಡಿ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
--
ಶಿಕ್ಷಕರ ಸಹಕಾರಿ ಸಂಘಕ್ಕೆ ಆಯ್ಕೆ
ಹಾವೇರಿ: ತಾಲೂಕು ಶಿಕ್ಷಕ, ಶಿಕ್ಷಕಿಯರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಯಪ್ಪ ಸಿ. ಚುರ್ಚಿ, ಉಪಾಧ್ಯಕ್ಷರಾಗಿ ಶಾಂತವ್ವ ಅವಿರೋಧ ಆಯ್ಕೆಯಾದರು. ಇಲ್ಲಿನ ಶಿಕ್ಷಕ, ಶಿಕ್ಷಕಿಯರ ಪತ್ತಿನ ಸಹಕಾರ ಸಂಘದಲ್ಲಿ ನಡೆದ ನೂತನ ಮಂಡಳಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ಆರ್.ಬಿ. ದೊಡ್ಡಗೌಡ್ರ ಘೋಷಿಸಿದರು. ಗುಡ್ಡಪ್ಪ ಎನ್. ನೆರ್ತಿ, ಗುರುಬಸಯ್ಯ ಹಿರೇಮಠ, ರಮೇಶ ಹೊಸಮನಿ, ರುಸ್ತುಂ ಸಿ. ನಂದಿಹಳ್ಳಿ, ವೀರನಗೌಡ ಎ. ಗೌಡರ, ಮಂಜುಳಾ ಎಸ್. ನಾಗಣ್ಣನವರ ನೂತನ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಹಿರಿಯರಾದ ಎ.ಬಿ. ಹೊಸಮನಿ, ಎಂ.ಎ. ಎಣ್ಣಿ, ವಿ.ಎಸ್. ತೋರಗಲ್, ಎನ್.ಎಂ. ಬಡಿಗೇರ, ಎಂ.ಎಫ್. ಬಡಿಗೇರ, ಮಂಜುನಾಥ ಅಕ್ಕಿ, ರತ್ನವ್ವ ಪುರದ, ನಾಗನಗೌಡ ರಾಮನಗೌಡ್ರ, ಎಚ್.ಎನ್. ಪಾಟೀಲ, ಗದಿಗೆಪ್ಪ ದುರಗಪ್ಪನವರ, ಆರ್.ಡಿ. ವಡ್ನಿಕೊಪ್ಪ, ಡಿ.ಡಿ. ಹಾವೇರಿ, ಜಿ.ಆರ್. ಯಲವದಹಳ್ಳಿ, ಎಂ.ಎಂ. ಹಾಲಗಿ, ವಿ.ಪಿ. ಗೋಣಿ, ಶೇಖಪ್ಪ ಮೇಲಿನಮನಿ, ನೂರುದ್ದೀನ್ ಜ. ಸರಖಾಜಿ, ಎಚ್.ಎ. ಮುಲ್ಲಾ, ಎಸ್.ಎಲ್. ಬೆನ್ನೂರ, ಶಂಕರ ಬಡಿಗೇರ, ಪಿ.ಟಿ. ಕಾಮನಹಳ್ಳಿ, ಎ.ಆರ್. ಪಾಟೀಲ, ಅಶೋಖ ಬುಡ್ಡನವರ, ಸರಖಾಜಿ ಮುಲ್ಲಾ, ಕೆ.ಎನ್. ಭಗವಂತಗೌಡರ, ಬಸವರಾಜ ಜಾಡರ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.