ಹಾವೇರಿ

ಇಂದು ರಸ್ತೆ ಕಾಮಗಾರಿಗೆ ಅಡಿಗಲ್ಲು ಸಮಾರಂಭ

Published On :

ಹಾವೇರಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಹಾವೇರಿ ಜಿಲ್ಲಾ ಪಂಚಾಯಿತಿ, ಯೋಜನಾ ಅನುಷ್ಠಾನ ವಿಭಾಗ ಹಾಗೂ ಹಾನಗಲ್ಲ ಉಪ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಮಂಜೂರಾದ ಹಾವೇರಿ ತಾಲೂಕಿನ ನಾಗನೂರಿನಿಂದ ಸಂಗೂರವರೆಗೆ ವಯಾ ಬೆಂಚಿಹಳ್ಳಿ-ವೆಂಕಟಾಪುರ ರಸ್ತೆ ಕಾಮಗಾರಿಯ ಅಡಿಗಲ್ಲು ಸಮಾರಂಭ ಮಾ. 1ರಂದು ಬೆಳಗ್ಗೆ 10-30ಕ್ಕೆ ಬೆಂಚಿಹಳ್ಳಿ ಗ್ರಾಮದಲ್ಲಿ ಜರುಗಲಿದೆ. ಶಾಸಕ ಬಸವರಾಜ ಶಿವಣ್ಣನವರ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಲಿದ್ದು, ನಾಗನೂರ ಗ್ರಾಪಂ ಅಧ್ಯಕ್ಷೆ ಬಸವಣ್ಣೆವ್ವ ಬೆಂಚಿಹಳ್ಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಪಂ. ತಾಪಂ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸುವರು.
ನಾಳೆ ವಿದ್ಯುತ್ ವ್ಯತ್ಯಯ
ಹಾವೇರಿ: ಹಾವೇರಿಯಿಂದ ಹೊರಡುವ 11 ಕೆವಿ ಸುಭಾಸ ಸರ್ಕಲ್ ಫೀಡರ್‌ನಲ್ಲಿ ರೇಲ್ವೆ ಮೇಲ್ಸೆತುವೆ ಕಾಮಗಾರಿಯಲ್ಲಿನ ಕಂಬಗಳನ್ನು ಸ್ಥಳಾಂತರ ಮಾಡುವ ಕಾಮಗಾರಿ ಇರುವುದರಿಂದ ಮಾ. 2ರಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಹಾವೇರಿ ನಗರದ ಸಿದ್ದೇಶ್ವರ ದೇವಸ್ಥಾನದ ಹತ್ತಿರ, ಹುಕ್ಕೇರಿಮಠ ರೋಡ್, ಬಿಎಸ್‌ಎನ್‌ಎಲ್ ಎಕ್ಸ್‌ಚೆಂಜ್, ಸಿದ್ದದೇವಪುರ ಹಾಗೂ ಗುತ್ತಲ ರಸ್ತೆಯ ಕೆಲವೊಂದು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದು. ಆದ್ದರಿಂದ ಸಾರ್ವಜನಿಕರು ಹಾಗೂ ಸದರಿ ಫೀಡರ್‌ಗಳ ವ್ಯಾಪ್ತಿಗೆ ಬರುವ ಎಲ್ಲ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂನ ಹಾವೇರಿ ವಿಭಾಗದ ಕಾರ್ಯ ಮತ್ತು ಪಾಲನೆ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಎಚ್.ವೈ. ಪ್ರಶಾಂತ ಅವರು ವಿನಂತಿಸಿದ್ದಾರೆ.

ಯುವಕ ಮಂಡಳಗಳಿಗೆ ಕ್ರೀಡಾಸಾಮಗ್ರಿ
ಹಾವೇರಿ: ಜಿಲ್ಲೆಯಲ್ಲಿ ನೆಹರು ಯುವ ಕೇಂದ್ರವು ಹೊಸದಾಗಿ ಪ್ರಾರಂಭವಾಗಿದ್ದು, ಇದರ ಮಹಾನಿರ್ದೇಶಕರಾದ ಸಲೀಂ ಅಹ್ಮದ್ ಅವರ ವಿಶೇಷ ಆಸಕ್ತಿಯಿಂದ ನೆಹರು ಯುವ ಕೇಂದ್ರ ಹಾವೇರಿಯಲ್ಲಿ ಸಂಯೋಜನೆಗೊಂಡ ಎರಡು ನೂರು ಯುವಕ, ಯುವತಿ ಮಹಿಳಾ ಮಂಡಳಗಳಿಗೆ ತಲಾ ರು. 2,500 ರವರೆಗೆ ಒಟ್ಟು ರು. 5 ಲಕ್ಷ ಕ್ರೀಡಾ ಸಾಮಗ್ರಿಗಳಿಗಾಗಿ ಮಂಜೂರಾಗಿದೆ. ಅದರಂತೆ ಗದಗ ಜಿಲ್ಲೆಯ ಯುವ ಮಂಡಳಗಳಿಗೂ ಕೂಡಾ ಮಂಜೂರಾಗುವ ಸಾಧ್ಯತೆ ಇದೆ.
ನೆಹರು ಯುವ ಕೇಂದ್ರ ಹಾವೇರಿಯಲ್ಲಿ ಈಗಾಗಲೇ ಸಂಯೋಜನೆಗೊಂಡ ಹಾಗೂ ನಿರಂತರವಾಗಿ ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ತೊಡಗಿರುವ ಯುವ ಮಂಡಳಗಳಿಗೆ ಭಾರತ ಸರ್ಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದಿಂದ ವಿಶೇಷ ಅನುದಾನದಲ್ಲಿ ಬಿಡುಗಡೆಯಾಗುವ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲು ಸ್ಥಳ ಹಾಗೂ ದಿನಾಂಕವನ್ನು ಆಯಾ ಯುವ ಮಂಡಳಗಳಿಗೆ ಸದ್ಯದಲ್ಲಿಯೇ ತಿಳಿಸಲಾಗುವುದು. ಈ ಅನುದಾನಕ್ಕಾಗಿ ವಿಶೇಷ ಆಸಕ್ತಿವಹಿಸಿದ ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರದ ಮಹಾ ನಿರ್ದೇಶಕರಾದ ಸಲೀಂ ಅಹ್ಮದ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ ಎಂದು ಜಿಲ್ಲಾ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಎಸ್.ಯು. ಜಮಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.