ಶಿಕ್ಷಣದಿಂದ ಬದುಕು ರೂಪಿಸಿಕೊಳ್ಳಿ: ಕಲಿವಾಳ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜ. 1
ಗ್ರಾಮಾಂತರ ಪ್ರದೇಶದಲ್ಲಿ ವೃತ್ತಿ ಮೂಲವಾದ ಶಿಕ್ಷಣ ಬೆಳೆದು ಬರಬೇಕು. ವಿದ್ಯಾರ್ಥಿಗಳು ಆಧುನಿಕ ಆವಿಷ್ಕಾರಗಳನ್ನು ತಿಳಿಯುವ ಮೂಲಕ ಶೈಕ್ಷಣಿಕ ಕ್ರಾಂತಿಯಾಗಬೇಕಾಗಿದೆ. ಜ್ಞಾನ ಪ್ರಧಾನವಾದ ವೈಜ್ಞಾನಿಕ ಯುಗದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಮೂಲಕ ತಮ್ಮ ಬದುಕನ್ನು ಉದಾತ್ತವಾಗಿ ರೂಪಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಡಾ ಬಿ.ಬಿ. ಕಲಿವಾಳ ಹೇಳಿದರು.
ದಾವಣಗೆರೆ ವಿಶ್ವ ವಿದ್ಯಾಲಯದ ಕುಲಪತಿಯಾಗಿ ನೇಮಕವಾಗುತ್ತಿದ್ದಂತೆ ತಮ್ಮ ತವರಿನ ದುಂಡೀ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಹುಟ್ಟೂರಿನ ಜನರ ಪ್ರೀತಿಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜನ್ಮ ಭೂಮಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ನಾನು ಕಲಿತ ಶಾಲೆ, ಕಲಿಸಿದ ಗುರುಗಳು, ನನ್ನ ಒಡನಾಡಿಗಳ ಪ್ರೀತಿ ಇದೆಲ್ಲವನ್ನು ಮರೆಯಲು ಸಾಧ್ಯವಿಲ್ಲ. ಇವರೆಲ್ಲರಿಗೆ ಹೂವ ತರುವ ರೀತಿಯಲ್ಲಿ ನಾನು ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಚನ್ನಪ್ಪ ಕುನ್ನೂರ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಕಲಿವಾಳ ಅವರು ಸರಳ, ಸಜ್ಜನಿಕೆಯ ವ್ಯಕ್ತಿ. ಅವರು ಈ ಹಿಂದೆಯೇ ಕರ್ನಾಟಕ ವಿವಿ ಕುಲಪತಿಗಳಾಗಬೇಕಿತ್ತು. ತಡವಾಗಿಯಾದರೂ ಸರ್ಕಾರ ಅವರ ಸಾಧನೆಯನ್ನು ಗುರುತಿಸಿದೆ ಎಂದು ಅಭಿಪ್ರಾಯಪಟ್ಟರು.
ಡಾ ಕಲಿವಾಳ ಅವರ ಪ್ರಾಥಮಿಕ ಶಾಲೆಯ ವಿದ್ಯಾಗುರುಗಳಾದ ನಿವೃತ್ತ ಶಿಕ್ಷಕ ಎಸ್.ಜಿ ಕುಲಕರ್ಣಿ, ಎಸ್.ಎನ್. ಲಕ್ಷ್ಮೇಶ್ವರ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಡಾ ಕಲಿವಾಳ ಚಾಣಾಕ್ಷಮತಿ ಎಂದು ಕೊಂಡಾಡಿದರು.
ಶಿಕ್ಷಕ ಮುದಕಪ್ಪ ಹೊನ್ನಣ್ಣವರ, ಗ್ರಾಪಂ ಸದಸ್ಯರಾದ ಬಸವರಾಜ ಕುರಗೋಡಿ, ಬಸವರಾಜ ಗುಳೇದಕೇರಿ, ರಾಮಣ್ಣ ಗುಳೇದಕೇರಿ, ಶಂಬಣ್ಣ ಶೆಟ್ಟರ, ವೀರಪ್ಪ ಕಲಿವಾಳ, ರವಿ ಬಂಕಾಪುರ, ರಮೇಶ ಕಲಿವಾಳ, ಬಸಪ್ಪ ಲಕ್ಷ್ಮೇಶ್ವರ, ರಾಜು ಕಲಿವಾಳ, ಶಿವನಾಗಪ್ಪ ನೇಕಾರ, ಬಿ.ಜಿ. ಗಿರ್ಜಿ, ಬಸವಣ್ಣೆಪ್ಪ ಬಂಕಾಪುರ, ಮಲ್ಲೇಶಪ್ಪ ಹೊನ್ನಣ್ಣವರ, ಶಂಕ್ರಪ್ಪ ಗುಳೇದಕೇರಿ ಇದ್ದರು. ದುಂಡಪ್ಪ ಮಾಸನಕಟ್ಟಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

