ಹಾವೇರಿಗೆ ನುಡಿತೇರು: ಜಿಲ್ಲೆಯಲ್ಲಿ ಸಂಭ್ರಮ
ಹಾನಗಲ್ಲ: ಹಾವೇರಿಗೆ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿದ್ದು, ಜಿಲ್ಲೆಯ ಸಾಹಿತ್ಯ- ಸಾಂಸ್ಕೃತಿಕ ವಲಯದಲ್ಲಿ ಸಂಭ್ರಮ ಮೂಡಿಸಿದೆ. ಹಾವೇರಿಯಲ್ಲಿ ಸಮ್ಮೇಳನ ನಡೆಸಬೇಕೆಂದು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಸಾಹಿತಿ-ಕಲಾವಿದರು ನಾಲ್ಕೈದು ವರ್ಷಗಳಿಂದ ಪತ್ರ ಚಳವಳಿ, ದೂರವಾಣಿ ಕರೆ, ಮನವಿ ಅರ್ಪಿಸುವ ಮೂಲಕ ಒತ್ತಾಯಿಸಿದ್ದರು. ಮಾರುತಿ ಶಿಡ್ಲಾಪುರ ಕಸಾಪ ಜಿಲ್ಲಾಧ್ಯಕ್ಷರಾಗಿದ್ದಾಗಲೇ ಸಮ್ಮೇಳನ ತರಬೇಕೆಂಬ ಯತ್ನ ನಡೆದಿತ್ತು. ಈಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನದ ಸಂಭ್ರಮ. 81ನೇ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸುವ ಹೊಣೆ ಹಾವೇರಿ ಜನತೆ ಮೇಲಿದೆ. ಜಿಲ್ಲೆಯ ಎಲ್ಲ ಸಾಹಿತಿಗಳು, ಸಂಘಟಕರು, ಸಾಹಿತ್ಯ-ಸಾಂಸ್ಕೃತಿಕ ಆಸಕ್ತರು, ವಿದ್ಯಾ ಸಂಸ್ಥೆಗಳು, ಸಂಘ-ಸಂಸ್ಥೆಗಳು ಮತ್ತು ಪರಿಷತ್ತಿನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನದ ಯಶಸ್ಸಿಗೆ ಮುಂದಾಗಬೇಕಾಗಿದೆ. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತನ್ನು ಹೆಚ್ಚು ಕ್ರಿಯಾಶೀಲಗೊಳಿಸುವ ಅಗತ್ಯವಿದೆ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಾಹಿತಿ ವಿಜಯಕಾಂತ ಪಾಟೀಲ, ಉದಯ ನಾಸಿಕ್, ರಂಗ ಕಲಾವಿದ ಪ್ರಭು ಗುರಪ್ಪನವರ, ಕೆ.ಎಲ್.ದೇಶಪಾಂಡೆ, ಉಮೇಶ ತಳವಾರ, ಚಂದ್ರು ಈಳಿಗೇರ, ಎಚ್.ಎನ್. ಸವಣೂರ, ಪ್ರೊ ಇಂದುಮತಿ ಜೋಷಿ, ಶಿವಾನಂದ ಕ್ಯಾಲಕೊಂಡ ಪ್ರತಿಕ್ರಿಯಿಸಿ, ಕನ್ನಡದ ಹೆಮ್ಮೆ ಎನಿಸಿದ 81ನೇ ಕನ್ನಡ ಸಾಹಿತ್ಯ ಸಮ್ಮೇಳನ ಒಂದು ಸಾಹಿತ್ಯ, ಸಾಂಸ್ಕೃತಿಕ ಸಂಭ್ರಮವಾಗಬೇಕು. ಬಹುಕಾಲದ ಬೇಡಿಕೆ ಬಳಿಕ ಹಾವೇರಿಗೆ ಸಿಕ್ಕಿರುವ ಸಮ್ಮೆಳನ ಮಾದರಿಯಾಗುವಂತೆ ಸಂಘಟಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ಸು ಪಡೆಯಬೇಕು. ಈ ಹಿಂದೆ ಪರಿಷತ್ತನ್ನು ಕಟ್ಟಿದ ಸಂಘಟಕರನ್ನು ಗುರುತಿಸಿ ಸಮ್ಮೇಳನ ನಡೆಸುವಂತೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

