ಹಾವೇರಿ

ಉಣಿಸಿ ಉಣ್ಣುವ ಸಂಸ್ಕೃತಿ ನಮ್ಮದು

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 11
ಆಡಂಬರ ಜೀವನದ ಅಂತ್ಯ ಬಹುಬೇಗ ಇರುತ್ತದೆ. ಆಂತರಿಕ ಭಕ್ತಿಯಿಂದ ಸ್ವರ್ಗಕ್ಕೆ ಹೋಗಲು ದಾರಿಯಾಗುತ್ತದೆ. ಅನ್ನ ನೀಡುವಂಥ ಸಂಸ್ಕೃತಿ ಮಠ-ಮಾನ್ಯಗಳಿಗಿದೆ. ಉಣಿಸಿ, ಉಣ್ಣುವಂಥ ಸಂಸ್ಕೃತಿ ನಮ್ಮದು ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಹುಕ್ಕೇರಿ ಮಠದಲ್ಲಿ ನಡೆಯುತ್ತಿರುವ ಶಿವಬಸವ ಶಿವಯೋಗಿಗಳ 68ನೇ ಹಾಗೂ ಶಿವಲಿಂಗ ಶ್ರೀಗಳ 5ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅವರು, ರೊಟ್ಟಿ ಜಾತ್ರೆಗೆ ಗ್ರಾಮೀಣ ಜನರು 50 ಸಾವಿರ ರೊಟ್ಟಿ ನೀಡಿದ್ದು ಅವರ ಹೃದಯ ಶ್ರೀಮಂತಿಕೆಯ ದ್ಯೋತಕ. ಇಂಥ ಭಕ್ತರು ಸಿಗುವುದು ವಿರಳ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಳೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಹಾವೇರಿ ಎಂದರೆ ತಕ್ಷಣ ನೆನಪಾಗುವುದು ಯಾಲಕ್ಕಿ ಹಾಗೂ ಹುಕ್ಕೇರಿ ಮಠ. ಹುಕ್ಕೇರಿ ಮಠದಲ್ಲಿ ತಪಸ್ಸು ಎಂಬ ಶಬ್ದ ನಿತ್ಯವೂ ಅನುರಣಿಸುತ್ತದೆ. ಮಠಗಳು ಸಂಸ್ಕೃತಿ, ಧರ್ಮ, ಪರಂಪರೆಯ ಸಂಕೇತ. ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಕೇಂದ್ರಗಳು ಎಂದು ಹೇಳಿದರು.
ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಶಹನಾಯಿ ವಾದಕ ಬಸವರಾಜ ಭಜಂತ್ರಿ ಮಾತನಾಡಿ, ನೊಂದ ಮನಸ್ಸುಗಳಿಗೆ ಮಠಗಳು ಶಾಂತಿ ನೀಡುತ್ತವೆ. ಮಹಿಳೆಯರ ಶೋಷಣೆ ತಡೆಗೆ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳಾಗಬೇಕಿದೆ ಎಂದರು.
ಕೂಡಲದ ಮಹೇಶ್ವರ ದೇವರು, ಇಟಗಿ ಗುರುಶಾಂತ ದೇವರು, ಪ್ರವಚನಕಾರ ರೇವಣಸಿದ್ಧಯ್ಯ ಹಿರೇಮಠ ಮಾತನಾಡಿದರು. ಮಾದನಹಿಪ್ಪರಗಿ ಮಹಾಂತ ದೇವರು, ಅಕ್ಕಿಆಲೂರ ವಿರಕ್ತಮಠದ ಚನ್ನವೀರೇಶ್ವರ ಸ್ವಾಮೀಜಿ ಇದ್ದರು. ಸಾಧಕರನ್ನು ಹಾಗೂ ಸ್ವಯಂಸೇವಕರನ್ನು ಸನ್ಮಾನಿಸಲಾಯಿತು. ವಿರೂಪಾಕ್ಷಪ್ಪ ಹತ್ತಿಮತ್ತೂರ, ಶಿವಬಸಪ್ಪ ಹಲಗಣ್ಣನವರ, ಚೇತನ ಕುರುಗೊಂಡ, ಬಸವರಾಜ ಅಂಗಡಿ, ಗಣೇಶಪ್ಪ ಹತ್ತಿಮತ್ತೂರ ಇದ್ದರು. ಆರ್.ಎಸ್. ಮಡಿವಾಳ ಸಂಗಡಿಗರು ಪ್ರಾರ್ಥಿಸಿದರು. ಶಿವಲಿಂಗೇಶ್ವರ ವಿದ್ಯಾಪೀಠದ ಅಧ್ಯಕ್ಷ ಪಿ.ಡಿ. ಶಿರೂರು ಸ್ವಾಗತಿಸಿದರು. ಬಿ. ಬಸವರಾಜ ನಿರೂಪಿಸಿದರು, ವೀರಣ್ಣ ಅಂಗಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.