ಸೈಕಲ್ ಬಂತು...
ಶಿಗ್ಗಾಂವಿ ಪಟ್ಟಣದ ಫಕ್ಕೀರಮ್ಮ ಫ. ಮಂತ್ರೋಡಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ತಾಲೂಕು ಶಿಕ್ಷಣ ಸಂಯೋಜಕ ರವಿ ದುಂದೂರ ಉಚಿತ ಸೈಕಲ್ಗಳನ್ನು ವಿತರಿಸಿದರು. ಗಂಜಿಗಟ್ಟಿಯ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ರಾಮಗೇರಿ, ಕಾರ್ಯಾಧ್ಯಕ್ಷ ಸಿ.ಎಫ್. ಮಂತ್ರೋಡಿ, ಮುಖ್ಯಶಿಕ್ಷಕ ಡಿ.ಪಿ. ಕೆರೂರ ಇದ್ದರು. ಪವಿತ್ರಾ, ಬಸವರಾಜ ಕರಡಿ, ಗುರುನಾಥ ಹುಬ್ಬಳ್ಳಿ ಸ್ವಾಗತ ಗೀತೆ ಹಾಡಿದರು. ಯು.ಎನ್. ಮುದಿಗೌಡ್ರ ನಿರೂಪಿಸಿ, ವಂದಿಸಿದರು.
ರಾಜತ್ವ ಧಿಕ್ಕರಿಸಿದ ಶರಣೆ ಅಕ್ಕ
ಹಾವೇರಿ: ಹೆತ್ತವರನ್ನು, ಸಮಾಜವನ್ನು ಹಾಗೂ ರಾಜತ್ವವನ್ನು ಎದುರು ಹಾಕಿಕೊಂಡ ವೈರಾಗ್ಯನಿಧಿ ಅಕ್ಕಮಹಾದೇವಿ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಅಗಡಿ ಪ್ರಭುಸ್ವಾಮಿ ಮಠದಲ್ಲಿ ಮಹಾ ಶಿವಶರಣೆ ಅಕ್ಕಮಹಾದೇವಿ ಪ್ರವಚನ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಕ್ಕನ ದಾರಿ ಕ್ಲಿಷ್ಟಕರ. ಅನುಕರಣೆ ಕಷ್ಟಸಾಧ್ಯ. ಮಠಾಧೀಶರು ಧರ್ಮ ಜಾಗೃತಿ ಮೂಡಿಸಬೇಕು. ಭಕ್ತರಿಗೆ ಸ್ಪಂದಿಸಬೇಕು ಎಂದರು. ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ ಉದ್ಘಾಟಿಸಿ, ವಚನಕಾರರು ಸರಳ, ಸ್ಪಷ್ಟವಾಗಿ ಜೀವನದ ಮೌಲ್ಯ ಪ್ರತಿಬಿಂಬಿಸಿದರು ಎಂದರು. ಅಕ್ಕಿಮಠದ ಗುರುಲಿಂಗ ದೇವರು ಮಾತನಾಡಿದರು. ಅತ್ತಿವೇರಿ ಬಸವಧಾಮದ ಮಾತಾ ಬಸವೇಶ್ವರಿ ಪ್ರವಚನ ನೀಡಿದರು. ಮಠಾಧ್ಯಕ್ಷ ಸಂಗನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಬಸಯ್ಯ ಶಾಸ್ತ್ರಿಗಳು ಹಿರೇಮಠರಿಂದ ವಚನ ಸಂಗೀತ ನಡೆಯಿತು. ಶಂಭಣ್ಣ ಬಸೇಗಣ್ಣಿ, ನಾಗರಾಜ, ಚಂದ್ರಣ್ಣ, ಚಿನ್ನಪ್ಪ ಬಸೇಗಣ್ಣಿ, ಎಸ್.ಎಚ್. ಪಟ್ಟಣಶೆಟ್ಟಿ ಇದ್ದರು. ಗುರುಮಾತೆ ಜಯಶ್ರೀ ಮಡಿವಾಳರ ಸ್ವಾಗತಿಸಿದರು. ಮಠದ ಉತ್ತರಾಧಿಕಾರಿ ಗುರುಸಿದ್ಧದೇವರು ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು. ಕೃಷ್ಣಾ ಜವಳಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

