ಹಾವೇರಿ

ಸಂಸ್ಕೃತಿಯಿಂದ ಬದುಕಿನ ಸಾರ್ಥಕತೆ: ಯಲಿಗಾರ

Published On :

ಹಾನಗಲ್ಲ: ಬದುಕಿನ ಸಾರ್ಥಕತೆಗೆ ಧರ್ಮ-ಸಂಸ್ಕೃತಿ ಬೇಕು. ಸ್ವಾಮಿ ವಿವೇಕಾಂದರ ಜೀವನಾದರ್ಶಗಳು ನಮ್ಮೊಳಗೆ ಜಾಗೃತವಾಗಬೇಕು. ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಸಂಸ್ಕಾರ ನೀಡಬೇಕು. ಕೃಷಿ ಬಗ್ಗೆ ತಿರಸ್ಕಾರ ಬೇಡ. ದುಶ್ಚಟಗಳ ದಾಸರಾಗಬೇಡಿ ಎಂದು ಪಿಎಸ್‌ಐ ಮಹಾದೇವ ಯಲಿಗಾರ ಕರೆ ನೀಡಿದರು.
ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಮತ್ತು ಕಲಾ ಸಂಘ ಹಿರೇಕಣಗಿ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 151ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿದ ಅವರು, ಆದರ್ಶಗಳನ್ನು ಆಡಿದರೆ ಸಾಲದು. ಕಾರ್ಯರೂಪಕ್ಕೆ ತರಬೇಕು. ಸಮುದಾಯದ ಹಿತಕ್ಕಾಗಿ ಶ್ರಮಿಸಬೇಕು ಎಂದರು.
ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ ಹಾಗೂ ಫಕ್ಕೀರೇಶ ಯಳ್ಳೂರ ಮಾತನಾಡಿ, ವಿವೇಕಾನಂದರ ಶ್ರೇಷ್ಠತೆಯನ್ನು ಸಾರಿದರು. ಶಿಕ್ಷಕರಾದ ಟಿ.ಆರ್. ವೇದಂಭಟ್ಟನವರ ಹಾಗೂ ಎಂ.ಪಿ. ನಾಮದೇವ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ನಾಗರೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರತ್ನವ್ವ ಆಡೂರ, ಉಪಾಧ್ಯಕ್ಷ ಅಬ್ದುಲ್ ಸಾಬ ಆಲದಕಟ್ಟಿ, ಪಿಡಿಒ ಸಿ.ಬಿ. ಪಾಟೀಲ, ಮುಖ್ಯೋಪಾಧ್ಯಾಯ ಜಿ.ಜಿ. ಚಿಕ್ಕೇರಿ, ಗ್ರಾಪಂ ಸದಸ್ಯರಾದ ನಾಗರಾಜ ಕರೆಣ್ಣನವರ, ಕಾಳವ್ವ ಹರಿಜನ, ಫಕ್ಕೀರವ್ವ ಭಾವೀಮನಿ, ಪುಷ್ಪಾ ಪಾಟೀಲ ಅತಿಥಿಗಳಾಗಿದ್ದರು. ದೀಪಾ ಪಾಪಣ್ಣನವರ ಸ್ವಾಗತಿಸಿದರು. ಶಿಲ್ಪಾ ಜನಗೇರಿ ನಿರೂಪಿಸಿದರು.
ಸ್ವಾಮಿ ವಿವೇಕಾನಂದರ ಭಾವಚಿತ್ರದ ಮೆರವಣಿಗೆ ಗಮನ ಸೆಳೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.