ಸಿದ್ಧಾಂತ ಶಿಖಾಮಣಿ ವೀರಶೈವ ಧರ್ಮದ ಸಾರ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ. 15
ವೀರಶೈವ ಧರ್ಮದ ಸಾರವನ್ನು ತಿಳಿಸುವ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ಎಲ್ಲರೂ ಪಾರಾಯಣ ಮಾಡಬೇಕು ಎಂದು ಕಾಶಿ ಜಂಗಮವಾಡಿ ಮಠದ ಜಗದ್ಗುರು ಡಾ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಫ್ರೆಂಡ್ಸ್ ಅಸೋಸಿಯೇಶನ್ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು, ಈ ಗ್ರಂಥ 28 ಶಿವಾಗಮಗಳ ಸಾರವನ್ನು ಒಳಗೊಂಡಿದೆ. ಇದರ ಪಾರಾಯಣದಿಂದ ಜ್ಞಾನ ಹಾಗೂ ಉತ್ತಮ ನಡತೆ ಪ್ರಾಪ್ತಿಯಾಗುತ್ತದೆ, ಮಹಾರಾಷ್ಟ್ರದ 400 ಕಡೆ ಸಂಚರಿಸಿ, 60 ಸಾವಿರ ಪ್ರತಿಗಳನ್ನು, ಕರ್ನಾಟಕದಲ್ಲಿ 50 ಸಾವಿರ ಪ್ರತಿಗಳನ್ನು ಜನರಿಗೆ ತಲುಪಿಸಲಾಗಿದೆ. ಅಂತರ್ಜಾಲದಲ್ಲೂ ಲಭ್ಯ ಎಂದರು.
ಗ್ರಂಥ ಲೋಕಾರ್ಪಣೆ ಮಾಡಿದ ಮಾಜಿ ಸಚಿವ ಸಿ.ಎಂ. ಉದಾಸಿ, ಧರ್ಮ ಪಾಲಿಸುವ ಜತೆಗೆ, ಧರ್ಮ ಗ್ರಂಥಗಳ ಅಧ್ಯಯನ ಮಾಡಬೇಕು. ಇದರಿಂದ ಮಾನವೀಯ ಮೌಲ್ಯಗಳನ್ನು ಉಳಿಸಿದಂತಾಗುತ್ತದೆ ಎಂದರು.
ರಾಣಿಬೆನ್ನೂರು ಶಿವಯೋಗೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿದರು. ಗ್ರಂಥದ 1403 ಶ್ಲೋಕಗಳ ಪೈಕಿ ಕೆಲವನ್ನು ಬಂಕಾಪುರದ ರುದ್ರಾಣಿ ಬಳಗದ ಮಹಿಳೆಯರು ಪಠಿಸಿದರು. ಕುಮಾರಯ್ಯ ಶಾಂತಪುರಮಠ ಅಧ್ಯಕ್ಷತೆ ವಹಿಸಿದ್ದರು. ಡಾ ವಿ.ಎಸ್. ಪುರಾಣಿಕಮಠ, ಕಲ್ಯಾಣಕುಮಾರ ಶೆಟ್ಟರ, ರಾಜಶೇಖರ ಸಾಲಿಮಠ, ಶಿವಯೋಗಿ ಅರಳೇಲಿಮಠ, ಮಲ್ಲಿಕಾರ್ಜುನಯ್ಯ ಶಾಂತಪುರಮಠ, ಜಗದೀಶ ಶಾಂತಪುರಮಠ, ಮಹಾಂತ ಶಾಂತಪುರಮಠ, ಆರ್.ಕೆ. ಶಾಂತಪುರಮಠ, ಎಸ್.ಪಿ. ಅರಮನಿಮಠ, ಆರಾಧ್ಯಮಠ, ಹಿರೇಮಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

