ಸಲೀಂ ಅಹ್ಮದ್ ಸ್ನೇಹ ಬಳಗದ ಕ್ಯಾಲೆಂಡರ್ ಬಿಡುಗಡೆ
ಹಾವೇರಿ: ದೀನ ದಲಿತ-ಬಡ ಹಾಗೂ ಅಂಧ ವಿದ್ಯಾರ್ಥಿಗಳೊಂದಿಗೆ ಹುಟ್ಟುಹಬ್ಬ ಆಚರಿಸುವ ಸಲೀಂ ಅಹ್ಮದ್ ಅವರ ಅಭಿಮಾನಿ ಬಳಗ ಈ ಬಾರಿ ಶಿವಲಿಂಗ ಸ್ವಾಮಿಗಳ ಭಾವಚಿತ್ರದ ಕ್ಯಾಲೆಂಡರ್ ಹೊರತಂದಿದ್ದು ಸಂತೋಷದ ವಿಷಯ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು. ಸಂಕ್ರಾಂತಿ ಅಂಗವಾಗಿ ಸಲೀಂ ಅಹ್ಮದ್ ಸ್ನೇಹ ಬಳಗದ ಕ್ಯಾಲೆಂಡರ್ನ್ನು ಶ್ರೀಗಳು ಬಿಡುಗಡೆ ಮಾಡಿದರು. ಅಡಕಿ ಪರಶುರಾಮ್, ಗಣೇಶ ಬಿಷ್ಠನವರ, ರಮೇಶ ಕಡಕೋಳ, ಶಿವಯೋಗಿ ಹಿರೇಮಠ, ದಾಸಪ್ಪ ಕರ್ಜಗಿ, ಕರಬಸಪ್ಪ ಹಲಗಣ್ಣನವರ, ಗೀರಿಶಗೌಡ ಬಿಷ್ಠನಗೌಡ್ರ, ಅನ್ವರ ಚಿಮ್ಮಲಗಿ, ಗಣೇಶ ದೊಡ್ಡಮನಿ, ಫಕ್ಕೀರಪ್ಪ ದೊಡ್ಡಮನಿ, ಹುಸೇನಸಾಬ ಜೀಗರಿ, ವಿನಯ ಪಾಲನಕರ, ಶಕೀಲ್ ಸದಾಫ್ ಇದ್ದರು.
ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ
ಶಿಗ್ಗಾಂವಿ: ಐದು ವರ್ಷಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದ ಬಿಜೆಪಿಗೆ, ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಂ. ಹಾದಿಮನಿ ಟೀಕಿಸಿದ್ದಾರೆ. ಯುಪಿಎ ಸರ್ಕಾರ ಆಹಾರ ಭದ್ರತೆ, ಮಾಹಿತಿ ಹಕ್ಕು ಕಾಯ್ದೆ, ರೈತರ ಸಾಲ ಮನ್ನಾ, ಸರ್ವ ಶಿಕ್ಷಣ ಅಭಿಯಾನ, ಕಡ್ಡಾಯ ಶಿಕ್ಷಣ ಹಕ್ಕು, ಲೋಕಪಾಲ ಮಸೂದೆ, ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ, ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಿ, ಜನಪ್ರಿಯತೆ ಗಳಿಸಿದೆ. ಇದನ್ನು ಸಹಿಸದೆ ಬಿಜೆಪಿ ಆರೋಪ ಮಾಡುತ್ತಿರುವುದು ಖಂಡನೀಯ ಎಂದಿದ್ದಾರೆ. ಜೈಲುವಾಸ ಅನುಭವಿಸಿ ಬಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭ್ರಷ್ಟ ರಾಜಕಾರಣಿಯಾಗಿದ್ದು, ಅವರನ್ನು ಬಿಜೆಪಿ ಮತ್ತೆ ಸೇರಿಸಿಕೊಂಡಿದೆ. ದೇಶಕ್ಕೆ ಬಿಜೆಪಿ ಕೊಡುಗೆ ಏನು? ಬಡವರ ಪರವಾಗಿ ಕಾರ್ಯಕ್ರಮ ಅನುಷ್ಠಾನದ ಮಾಡಿದ ಕೀರ್ತಿ ಕಾಂಗ್ರೆಸ್ನ ಸೋನಿಯಾ ಗಾಂಧಿ, ರಾಹುಲ್ಗಾಂಧಿ ಹಾಗೂ ಸಿದ್ದರಾಮಯ್ಯಗೆ ಸಲ್ಲುತ್ತದೆ. ಈ ಮುಖಂಡರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಲೋಕಸಭಾ ಚುನಾವಣೆ ಗೆದ್ದು, ಅಧಿಕಾರಕ್ಕೆ ಬರಲಿದೆ ಎಂದು ಹಾದಿಮನಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

