ಶಿಗ್ಗಾಂವಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿ
ಶಿಗ್ಗಾಂವಿ: ಕನಕದಾಸ, ಶರೀಫರು ಹಾಗೂ ವಿ.ಕೃ. ಗೋಕಾರರಂಥ ಸಾಹಿತಿಗಳ ಜನ್ಮಭೂಮಿ ಹಾಗೂ ರನ್ನಮಯ್ಯನಿಗೆ ವಿದ್ಯಾಭ್ಯಾಸ ಕೊಟ್ಟ ಶಿಗ್ಗಾಂವಿಯಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದು ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಆಗ್ರಹಿಸಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ ಜಿಲ್ಲೆ ಆತಿಥ್ಯ ವಹಿಸಿರುವುದು ಹೆಮ್ಮೆಯ ಸಂಗತಿ. ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಶಿಗ್ಗಾಂವಿ ಅಷ್ಟಾಗಿ ಅಭಿವೃದ್ಧಿ ಸಾಧಿಸಿಲ್ಲ. ಐದು ಬಾರಿ ಜಿಲ್ಲಾ ಉತ್ಸವ ನಡೆದರೂ ಒಮ್ಮೆಯೂ ಶಿಗ್ಗಾಂವಿಗೆ ಆತಿಥ್ಯ ಸಿಗಲಿಲ್ಲ. ಸಾಹಿತಿಗಳ ತವರು ಶಿಗ್ಗಾಂವಿಯಲ್ಲೇ ಸಮ್ಮೇಳನ ಆಗಲಿ ಎಂದಿದ್ದಾರೆ. ವಿಶ್ವವಿಖ್ಯಾತ ಸಮಾಜಶಾಸ್ತ್ರಜ್ಞ ಡಾ ಹಿರೇಮಲ್ಲೂರ ಈಶ್ವರನ್ ಶಿಗ್ಗಾಂವಿಯವರು. ಜಗತ್ತಿನ ಮೊದಲ ಜಾನಪದ ವಿವಿ ತಾಲೂಕಿನಲ್ಲಿದೆ. ಗೊಟಗೋಡಿಯಲ್ಲಿರುವ ವಿವಿ ಆವರಣದಲ್ಲಿ ಜ. 19, 20ರಂದು ರಾಷ್ಟ್ರ ಮಟ್ಟದ ಕಾರ್ಯಕ್ರಮ ನಡೆಯುತ್ತಿದೆ. ಇದನ್ನೆಲ್ಲ ಗಮನಿಸಿ, ಶಿಗ್ಗಾಂವಿಯಲ್ಲಿ ಸಮ್ಮೇಳನ ಸಂಘಟಿಸಿದರೆ ಅನುಕೂಲ ಎಂದಿದ್ದಾರೆ.
ಇಂದಿನಿಂದ ಫಾಸಿಲ್ಸ್ ಸಮ್ಮೇಳನ
ಹಾವೇರಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಘ (ಫಾಸಿಲ್ಸ್)ಗಳ ಸಹಯೋಗದಲ್ಲಿ ಜ. 19, 20ರಂದು ಗೊಟಗೋಡಿಯಲ್ಲಿ ಫಾಸಿಲ್ಸ್ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಜ. 19ರಂದು ಬೆಳಗ್ಗೆ 10.30ಕ್ಕೆ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಉದ್ಘಾಟಿಸಲಿದ್ದಾರೆ. ತಂಜಾವೂರಿನ ತಮಿಳು ವಿವಿ ನಿವೃತ್ತ ಕುಲಪತಿ ಡಾ ಸಿ. ಸುಬ್ರಹ್ಮಣ್ಯಂ ಅಧ್ಯಕ್ಷೀಯ ನುಡಿ ಆಡಲಿದ್ದಾರೆ. ಪ್ರೊ ಎಚ್.ಎಂ. ಮಹೇಶ್ವರಯ್ಯ ಪ್ರಾಸ್ತಾವಿಕ ಮಾತನಾಡುವರು. ಗುರಗಾಂವ್ನ ಅಮೆರಿಕದ ಭಾರತೀಯ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ ಪುರುಷೋತ್ತಮ ಬಿಳಿಮಲೆ ಆಶಯ ಭಾಷಣ ಮಾಡುವರು. ಹಂಪಿ ಕನ್ನಡ ವಿವಿ ಕುಲಪತಿ ಪ್ರೊ ಹಿ.ಚಿ. ಬೋರಲಿಂಗಯ್ಯ, ಕೇರಳ ಮಲಯಾಳಂ ವಿವಿ ಕುಲಪತಿ ಕೆ. ಜಯಕುಮಾರ್ ಆಗಮಿಸುವರು. ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸುವರು. ಜ. 19ರಂದು ಸಂಜೆ 6ರಿಂದ ಸಣ್ಣಾಟ, ದೊಡ್ಡಾಟ ಕಲಾ ಪ್ರದರ್ಶನವಿದೆ. ಜ. 20ರಂದು ಸಂಜೆ 4 ಗಂಟೆಗೆ ಸಮಾರೋಪ. ಶಾಸಕ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಲಿದ್ದು, ಜಾನಪದ ವಿವಿ ಕುಲಸಚಿವ ಪ್ರೊ ಡಿ.ಬಿ. ನಾಯಕ, ಪ್ರೊ ಅಂಬಳಿಕೆ ಹಿರಿಯಣ್ಣ, ತಿರುಪತಿ ಜನಪದ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ ಎನ್. ಭಕ್ತವತ್ಸಲ ರೆಡ್ಡಿ ಆಗಮಿಸುವರು ಎಂದು ಪ್ರೊ ಸ.ಚಿ. ರಮೇಶ, ಡಾ ಕೆ.ಪ್ರೇಮಕುಮಾರ್ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

